ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಜ್ರಖಚಿತ ಕಿರೀಟ ರೆಡ್ಡಿಗೆ ವಾಪಸ್ ಇಲ್ಲ : ಟಿಟಿಡಿ

By Prasad
|
Google Oneindia Kannada News

TTD not to return crown to Janardhana Reddy
ತಿರುಪತಿ, ಸೆ. 10 : ತಿರುಮಲದಲ್ಲಿರುವ ವೆಂಕಟೇಶ್ವರ ದೇವರಿಗೆ ಕಾಣಿಕೆಯಾಗಿ ನೀಡಲಾಗಿರುವ 30 ಕೆಜಿ ತೂಕದ, 45 ಕೋಟಿ ಮೊತ್ತದ ವಜ್ರಖಚಿತ ಕಿರೀಟವನ್ನು ಯಾವುದೇ ಕಾರಣಕ್ಕೂ ಜನಾರ್ದನ ರೆಡ್ಡಿಗೆ ವಾಪಸ್ ನೀಡುವುದಿಲ್ಲ ಎಂದು ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ ಶನಿವಾರ ಸ್ಪಷ್ಟಪಡಿಸಿದೆ.

ಸಿಬಿಐನಿಂದ ಬಂಧಿತನಾಗಿರುವ ಜನಾರ್ದನ ರೆಡ್ಡಿ ಅವರು ಅಕ್ರಮವಾಗಿ ಗಳಿಸಿದ ಆಸ್ತಿಯಿಂದ ನೀಡಲಾಗಿದ್ದ 2.5 ಅಡಿ ಎತ್ತರದ ಕಿರೀಟವನ್ನು ಜನಾರ್ದನ ರೆಡ್ಡಿಯವರಿಗೆ ವಾಪಸ್ ನೀಡಬೇಕು ಎಂದು ಕೆಲ ರಾಜಕಾರಣಿಗಳಿಂದ ಮತ್ತು ಭಕ್ತವೃಂದದಿಂದ ಆಗ್ರಹ ಬಂದಿರುವ ಹಿನ್ನೆಲೆಯಲ್ಲಿ ತನ್ನ ನಿಲುವನ್ನು ಟಿಟಿಡಿ ಖಚಿತಪಡಿಸಿದೆ.

ವೆಂಕಟೇಶ್ವರ ದೇವರಿಗೆ ನೀಡಲಾಗಿರುವ ಯಾವುದೇ ಕೊಡುಗೆಯನ್ನು ವಾಪಸ್ ಮಾಡುವ ಸಂಪ್ರದಾಯವಿಲ್ಲ. ಇದು ಜನಾರ್ದನ ರೆಡ್ಡಿ ನೀಡಿರುವ ಕಾಣಿಕೆಗೂ ಅನ್ವಯಿಸುತ್ತದೆ ಎಂದು ಟಿಟಿಡಿ ಅಧಿಕಾರಿಗಳು ಹೇಳಿದ್ದಾರೆ. ಎರಡು ವರ್ಷಗಳ ಹಿಂದೆ ಜನಾರ್ದನ ರೆಡ್ಡಿಯವರು ಈ ವಜ್ರಖಚಿತ ಕಿರೀಟವನ್ನು ಬಾಲಾಜಿಗೆ ಕಾಣಿಕೆಯಾಗಿ ನೀಡಿದ್ದರು.

ಭ್ರಷ್ಟಾಚಾರ ನಿಯಂತ್ರಣಾ ಕಾಯ್ದೆಯಡಿ ಸಿಬಿಐನಿಂದ ಸೆ. 5ರಂದು ಬಂಧಿತರಾಗಿರುವ ರೆಡ್ಡಿಯವರು ಕೊಡುಗೆಯಾಗಿ ನೀಡಿದ್ದ ಕಿರೀಟವನ್ನು ಅವರಿಗೇ ಹಿಂದಿರುಗಿಸಬೇಕು ಎಂದು ಭಕ್ತಾದಿಗಳು ತಿರುಮಲದಲ್ಲಿಯೇ ಪ್ರತಿಭಟನೆ ನಡೆಸಿದ್ದರು. ಕಳಂಕಿತರಿಂದ ಇಸಿದುಕೊಂಡಿರುವ ಕೊಡುಗೆಯನ್ನು ಇಟ್ಟುಕೊಳ್ಳಬಾರದು ಎಂದು ಆಗ್ರಹಿಸಿದ್ದರು.

English summary
Tirupati Tirumala Devasthanam has clearly stated that it would not return the diamond studded, 45 crore worth crown presented to Lord Venkateshwara by former Karnataka minister Janardhana Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X