ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

800 ರು. ಲಂಚ ತಿಂದಿದ್ದಕ್ಕೆ 10 ವರ್ಷ ಜೈಲು!

By Prasad
|
Google Oneindia Kannada News

Corrupt jailed for 10 years
ಯಾದಗಿರಿ, ಸೆ. 10 : ಎಂಟು ನೂರು ರು. ಲಂಚ ಸ್ವೀಕರಿಸಿದ ಭ್ರಷ್ಟ ಆರೋಪಿಗೆ ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ಮತ್ತು 50,000 ರು. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸಲು ವಿಫಲವಾದಲ್ಲಿ ಮತ್ತೆ 2 ವರ್ಷ ಸಾದಾ ಶಿಕ್ಷೆ ಅನುಭವಿಸಬೇಕೆಂದೂ ನ್ಯಾಯಾಲಯ ಹೇಳಿದೆ.

ಸುರಪುರ ಬಿಇಒ ಕಚೇರಿಯ ಪ್ರಥಮ ದರ್ಜೆ ಸಹಾಯಕ ವಿಲ್ಸನ್ ವಿಜಯಕುಮಾರ್ ಶಿಕ್ಷೆಗೊಳಗಾದ ಆರೋಪಿ. ಜಿಪಿಎಫ್ ಹಣ ಮಂಜೂರು ಮಾಡಲು ಸುರಪುರ ತಾಲೂಕಿನ ಮಾಚಗೊಂಡಾಳ ಗ್ರಾಮದ ಶಿಕ್ಷಕ ಆದಪ್ಪ ನಾಯಕ ಎಂಬವರಿಂದ 800 ರು. ಲಂಚ ಸ್ವೀಕರಿಸುತ್ತಿದ್ದಾಗ ವಿಲ್ಸನ್ ವಿಜಯಕುಮಾರ್ 2006ರ ನವೆಂಬರ್ 18ರಂದು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು.

ಲೋಕಾಯುಕ್ತ ಇನ್ಸಪೆಕ್ಟರ್ ಬಿ.ಎಚ್.ಚಂದ್ರಕಾಂತ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಸಂಜೀವಕುಮಾರ್ ಹಂಚಾಟೆ ಆರೋಪಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಪ್ರಾಸಿಕ್ಯೂಷನ್ ಪರ ವಿಶೇಷ ಸರಕಾರಿ ಅಭಿಯೋಜಕ ಸಿದ್ದಲಿಂಗಪ್ಪ ಬೋರಡ್ಡಿ ವಾದ ಮಂಡಿಸಿದ್ದರು.

English summary
Corrupt official from yadgir has been jailed for 10 year for accpting meagre Rs. 800 from a teacher. He was caught red handed by Lokayukta in 2006.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X