ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕರ ಕಡೆ ಹುಡ್ಗಿ ಎಂಎಂಎಸ್ ತೆಗೆದ ನೀಚ ಎಸ್ಐ

By Mahesh
|
Google Oneindia Kannada News

Ratlam MLA relative MMS case
ಇಂದೋರ್, ಸೆ.8: ಇಲ್ಲಿನ ರತ್ಲಂ ಜಿಲ್ಲೆಯ ಶಾಸಕರೊಬ್ಬರ ಸಂಬಂಧಿಕಳೊಬ್ಬಳ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಎಂಎಂಎಸ್ ಹರಿಯಬಿಟ್ಟ ಸಬ್ ಇನ್ಸ್ ಪೆಕ್ಟರ್ ತಿಕ್ಕಲುತನಕ್ಕೆ ಪೊಲೀಸ್ ಇಲಾಖೆ ಬೆಚ್ಚಿದೆ.

ಕ್ಲಾಸ್ 11 ರಲ್ಲಿ ಓದುತ್ತಿರುವ ವಿದ್ಯಾರ್ಥಿನಿಯನ್ನು ಎಳೆತಂದು ಇಬ್ಬರು ದುರುಳ ಯುವಕರ ಸಹಾಯದಿಂದ ಹುಡುಗಿಯ ಖಾಸಗಿ ಅಂಗಾಂಗಗಳ ಮೇಲೆ ಎಸ್ ಐ ಕ್ಯಾಮೆರಾ ಕಣ್ಣು ಹರಿಸಿದ್ದಾನೆ. ವಿಚಿತ್ರವೆಂದರೆ ನಂತರ ತಾನೇ ಖುದ್ದಾಗಿ ಆ ಹುಡುಗಿಯನ್ನು ಆಕೆಯ ಮನೆ ತಲುಪಿಸಿದ್ದಾನೆ.

ಹುಡುಗಿಗೆ ನಂತರ ಬೆದರಿಕೆ ಕರೆಗಳು ಬರಲು ಶುರುವಾಗಿದೆ. ಈ ವಿಷಯ ತಿಳಿದ ಸಂಬಂಧಿ ಶಾಸಕ ಪರಾಸ್ ಸಕ್ಲೇಚ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.

ಪೊಲೀಸರು ಉಪಾಯವಾಗಿ ಚಂದನ್ ನಗರ ಠಾಣೆಯ ಎಸ್ಐ ರಾಮಕಿಶೋರ್ ಶಿವ್ಹಾರೆ ಹಾಗೂ ಸಹಾಯ ಮಾಡಿದ ಯುವಕರನ್ನು ಬಂಧಿಸಿದ್ದಾರೆ. ಎಸ್ ಐ ರಾಮಕಿಶೋರ್ ನನ್ನು ನಂತರ ಕರ್ತವ್ಯದಿಂದ ಅಮಾನತುಗೊಳಿಸಿದ್ದಾರೆ.

ಘಟನೆ ವಿವರ: ರಾತ್ರಿ ವೇಳೆ ಸಂಬಂಧಿಕರೊಬ್ಬರನ್ನು ಡ್ರಾಪ್ ಮಾಡಿ ಮನೆಗೆ ಹಿಂತಿರುಗುತ್ತಿದ್ದ ಹುಡುಗಿಯನ್ನು ಸ್ಕೂಟಿ ಸಮೇತ ರಾಮಕಿಶೋರ್ ಎತ್ತಾಕಿಕೊಂಡು ಹೋಗಿದ್ದರು.

ಗೋಪಾಲ್ ಕಾಲೋನಿಯಲ್ಲಿರುವ ಸಂಜಯ್ ಠಾಕೂರ್(22) ಎಂಬ ಯುವಕನ ರೂಮ್ ವೊಂದರಲ್ಲಿ ಆಕೆಯನ್ನು ವಿವಸ್ತ್ರಗೊಳಿಸಿ ವಿಡಿಯೋ ಚಿತ್ರಣ ನಡೆಸಲಾಗಿತ್ತು.

ದೂರು ಪಡೆದ ಮೇಲೆ ಸಂಜಯ್ ಹಾಗೂ ವಿಜಯ್ ಶರ್ಮ(40) ಎಂಬುವವರನ್ನು ಉಪಾಯವಾಗಿ ಬೆಲೆಗೆ ಬೀಳಿಸಿಕೊಂಡು ಎಸ್ ಐ ಕಿಶೋರ್ ಅವರನ್ನು ಹಿಡಿಯಲಾಯಿತು. ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

English summary
Ratlam district MLA Paras Saklecha's relative become victim of MMS scandal after Chandan Nagar police station Sub Inspector allegedly shooted obscene video clipping of girl with the help of two youths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X