ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಪ್ಪಳ: ಅಕ್ರಮ ಅದಿರು ಸಾಗಾಟ 40 ಲಾರಿ ವಶ

By Mahesh
|
Google Oneindia Kannada News

Illeagl ore transport, Koppal
ಕೊಪ್ಪಳ, ಸೆ.7: ಸುಪ್ರೀಂ ಕೋರ್ಟ್‌ನ ನಿಷೇಧದ ಮಧ್ಯೆಯೂ ಕೊಪ್ಪಳದ ಕಿರ್ಲೋಸ್ಕರ್ ಕಂಪನಿಗೆ ಅದಿರು ಸರಬರಾಜು ಮಾಡುತ್ತಿದ್ದ 40 ಅದಿರು ತುಂಬಿದ ಲಾರಿಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ವಶಪಡಿಸಿಕೊಂಡಿದ್ದಾರೆ.

ಸಿ.ಇ.ಸಿ ಅನುಮತಿ ಇರದ ಕಾರಣ ಈ ಅದಿರು ಲಾರಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಕೊಪ್ಪಳ ಹೊರವಲಯದ ಗಿಣಗೇರಾ ಗ್ರಾಮದ ಹತ್ತಿರವಿರುವ ಕೀರ್ಲೋಸ್ಕರ್ ಕಾರ್ಖಾನೆಗೆ ಆಕ್ರಮವಾಗಿ ಅದಿರು ಪೊರೈಸುತ್ತಿದ್ದ 40 ಲಾರಿಗಳನ್ನು ಗಣಿ ಮತ್ತು ಭೂ ವಿಜನ ಇಲಾಖೆ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಹೋಸಪೇಟೆ ತಾಲೂಕಿನ ಕಲ್ಲಹಳ್ಳಿಯ ಹತ್ತಿರ 18 ಹಾಗೂ ಕೊಪ್ಪಳದ ಕೀಲೋಸ್ಕರ್ ಕಂಪನಿಯ ಒಳಗಡೆ ಇದ್ದ 30 ಅದಿರು ತುಂಬಿದ ಲಾರಿಗಳನ್ನು ಜಪ್ತಿ ಮಾಡಲಾಗಿದೆ. ಈ ಲಾರಿಗಳಿಗೆ ಅದಿರು ಪೂರೈಕೆಗೆ ಪರವಾನಿಗೆಯಿದ್ದರೂ ಕೂಡಾ ಸಿ.ಇ.ಸಿ ಅನುಮತಿ ಇಲ್ಲವಾಗಿತ್ತು.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಗಣಿ ಮತ್ತು ಭೂ ವಿಜ್ಞಾನಇಲಾಖೆ ಅಧಿಕಾರಿಗಳು ಹಠಾತ್ ದಾಳಿ ನಡೆಸಿ ಎಲ್ಲ ಲಾರಿಗಳ ದಾಖಲೆ ಪತ್ರಗಳನ್ನು ಪರೀಶಿಲಿಸಿದ್ದಾರೆ. ಈ ಎಲ್ಲ ಲಾರಿಗಳಲ್ಲಿ ಸುಮಾರು 3.5 ಮೆಟ್ರಿಕ್ ಟನ್‌ನಷ್ಟು ಡಿಗ್ಗಿಂಗ್ ಅದಿರು ಇದೆ ಎಂದು ಹೇಳಲಾಗುತ್ತಿದೆ.

ಸಿಇಸಿ ಅನುಮತಿ ಇರದ ಕಾರಣ ಈ ಲಾರಿ ಗಳಲ್ಲಿನ ಅದಿರು ಅನ್‌ಲೊಡ್ ಮಾಡುವುದನ್ನು ತಡೆ ಹಿಡಿಯಲಾಗಿದೆ. ಈಗಾಗಲೇ ಕೆಲವು ಲಾರಿಗಳಿಂದ ಅದಿರು ಅನ್‌ಲೋಡ್ ಆಗಿದೆ. ಸಿ.ಇ.ಸಿ ಅನುಮತಿ ದೊರೆತ ನಂತರ ಲಾರಿಗಳನ್ನು ಕಂಪನಿಗೆ ಒಪ್ಪಿಸಲಾಗುವುದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಏನೇ ಆಗಲೀ ಸುಪ್ರೀಂ ಕೋರ್ಟ್‌ನ ನಿಷೇಧದ ಮಧ್ಯೆಯೂ ಬಳ್ಳಾರಿಯಿಂದ ಆಕ್ರಮವಾಗಿ ಅದಿರು ನಿರಂತರವಾಗಿ ಸಾಗಾಟವಾಗುತ್ತಲೇ ಇದೆ ಎಂದರೆ ಗಣಿಧಣಿಗಳ ಧೈರ್ಯ ಮೆಚ್ಚಲೇಬೇಕು.

English summary
Iron ore illegally transported to Kirloskar Ferrous Industries has been seized in Koppal. Mining and Geology department officials seized around 40 lorries and seized 3.5 Metric ton ore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X