ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೀ ಹೇರಿಕೆ - ಮೂರು ಮಂತ್ರ, ನೂರು ತಂತ್ರ

By Prasad
|
Google Oneindia Kannada News

A seminar by Banavasi Balaga
ಸೆಪ್ಟೆಂಬರ್ 10ರಂದು ಬನವಾಸಿ ಬಳಗವು ಏರ್ಪಡಿಸಿರುವ 'ಭಾರತಕ್ಕೊಪ್ಪೋ ಭಾಷಾನೀತಿ' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಮಗೆ ಈ ಅಕ್ಕರೆಯ ಕರೆಯೋಲೆ.

ಅಂದಿನ ಕಾರ್ಯಕ್ರಮದಲ್ಲಿ ಭಾರತದ ಭಾಷಾನೀತಿಯ ಬಗ್ಗೆ ಅತಿಥಿಗಳು ಮಾತನ್ನಾಡಲಿದ್ದಾರೆ. ಭಾರತದ ಭಾಷಾನೀತಿಯ ಬಗ್ಗೆ, ಅದರ ಇಂದಿನ ಸ್ವರೂಪ, ಅದರಿಂದಾಗಿರುವ ಪರಿಣಾಮಗಳು, ಬದಲಾವಣೆಯ ಅಗತ್ಯಗಳು ಮತ್ತು ಸರಿಯಾದ ಭಾಷಾನೀತಿಯ ಬಗ್ಗೆ ಅಂದಲ್ಲಿ ಮಾತುಕತೆ ನಡೆಯಲಿದೆ.

ಇದೇ ಸಂದರ್ಭದಲ್ಲಿ ಹಿಂದೀ ಹೇರಿಕೆಯ ಬಗ್ಗೆ ಬನವಾಸಿ ಬಳಗದ ಆನಂದ್ ಬರೆದಿರುವ "ಹಿಂದೀ ಹೇರಿಕೆ - ಮೂರು ಮಂತ್ರ: ನೂರು ತಂತ್ರ" ಎನ್ನುವ ಅಪರೂಪದ ಮಾಹಿತಿಗಳ ಹೊತ್ತಗೆಯೊಂದನ್ನು ಬಿಡುಗಡೆ ಮಾಡಲಾಗುತ್ತದೆ.

ಅನೇಕ ಮೈನವಿರೇಳಿಸುವ ವಿಷಯಗಳನ್ನು ಒಳಗೊಂಡಿರುವ ಈ ಹೊತ್ತಗೆಯಲ್ಲಿ ಭಾರತದ ಭಾಷಾನೀತಿಯ ಬಗ್ಗೆ ಚರ್ಚಿಸಲಾಗಿದೆ. ಕನ್ನಡದಲ್ಲಿ ಹಿಂದೆಂದೂ ಇರದ ಹೊಸ ವಿಷಯಗಳನ್ನು ಈ ಹೊತ್ತಗೆ ಒಳಗೊಂಡಿದೆ. ಬನವಾಸಿ ಬಳಗಕ್ಕಿದು ಮಹತ್ವದ ಕಾರ್ಯಕ್ರಮ. ನೀವು ನಮ್ಮೊಡನೆ ಇದ್ದರೆ ನಮಗೆ ಹೆಚ್ಚು ಖುಷಿ. ಬನ್ನಿ...

ಕಾರ್ಯಕ್ರಮದ ವಿವರ ಇಂತಿದೆ:

ಭಾರತಕ್ಕೊಪ್ಪೋ ಭಾಷಾನೀತಿ : ವಿಚಾರ ಸಂಕಿರಣ.
ಹಿಂದೀ ಹೇರಿಕೆ - ಮೂರು ಮಂತ್ರ, ನೂರು ತಂತ್ರ : ಪುಸ್ತಕ ಬಿಡುಗಡೆ.
ದಿನಾಂಕ, ಸಮಯ : 10-09-2011, ಶನಿವಾರ, ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.40ರವರೆಗೆ.
ಸ್ಥಳ : ನಯನ ಸಭಾಂಗಣ, ಕನ್ನಡ ಭವನ, ರವೀಂದ್ರ ಕಲಾಕ್ಷೇತ್ರ, ಜೆಸಿ ರಸ್ತೆ, ಬೆಂಗಳೂರು.

ಇದೇ ಸಂದರ್ಭದಲ್ಲಿ ಹಿರಿಯ ಚಿಂತಕರಾದ ಡಾ. ಪಿವಿ ನಾರಾಯಣ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿಎಸ್ ನಾಗಾಭರಣ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿಎ ನಾರಾಯಣ ಗೌಡ, ಉದಯವಾಣಿ ಸಂಪಾದಕ ರವಿ ಹೆಗಡೆ ಮುಂತಾದವರು ಭಾಷಣ ಮಾಡಲಿದ್ದಾರೆ. ಬೆಳಿಗ್ಗೆ ತಿಂಡಿ ಮತ್ತು ಕಾಫಿ ವ್ಯವಸ್ಥೆ ಇದೆ.

English summary
A seminar has been organized by Banavasi Balaga to discuss impact of Hindi language thrust on Kannadigas. A book by Anand G will be released. Noted personalities like TS Nagabharana, Ravi Hegde, TA Narayana Gowda are speaking at the occasion on various topics. Program venue : Kannada Bhavana, Nayana Sabhangana, Ravindra Kalakshetra, Bangalore. On 10th Sept, at 10.30 AM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X