ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿಯಲ್ಲಿ 8 ಲಕ್ಷ ರು. ನಗದು ಚಿನ್ನದೊಡವೆ ಲೂಟಿ

By Prasad
|
Google Oneindia Kannada News

Dacoits loot Rs 8 lakh cash and jewellery
ಬಳ್ಳಾರಿ, ಸೆ. 7 : ಐದು ಜನರಿದ್ದ ದರೋಡೆಕೋರರ ತಂಡ ಮನೆಯೊಂದಕ್ಕೆ ನುಗ್ಗಿ ಅರವತ್ತರ ಮಹಿಳೆಯನ್ನು ಥಳಿಸಿ 8 ಲಕ್ಷ ರು. ನಗದು ಮತ್ತು 700 ಗ್ರಾಂ ಚಿನ್ನ ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಬಳ್ಳಾರಿಯಲ್ಲಿ ಮಂಗಳವಾರ ರಾತ್ರಿ ಜರುಗಿದೆ.

ಘಟನೆ ನಡೆದಿದ್ದು ಬಳ್ಳಾರಿಯಿಂದ 10 ಕಿ.ಮೀ. ದೂರದಲ್ಲಿರುವ ವೇಣಿ ವೀರಾಪುರ ಎಂಬ ಗ್ರಾಮದಲ್ಲಿ. ಬಲವಂತವಾಗಿ ವೆಂಕಟಪ್ಪ ಎಂಬುವವರ ಮನೆಗೆ ನುಗ್ಗಿದ ದರೋಡೆಕೋರರು ಮನೆಮಂದಿಯನ್ನು ಹಗ್ಗದಿಂದ ಕಟ್ಟಿಹಾಕಿದೆ.

ದರೋಡೆಗೆ ತಡೊಯೊಡ್ಡಿದ 60 ವರ್ಷದ ಹಿರಿಯ ಮಹಿಳೆಯನ್ನು ಕಳ್ಳರು ಥಳಿಸಿದ್ದಾರೆ. ನಂತರ ಮನೆಯಲ್ಲಿ ಇಟ್ಟಿದ್ದ 8 ಲಕ್ಷ ರು. ನಗದು ಮತ್ತು ಚಿನ್ನದ ಒಡವೆಗಳನ್ನು ಬಳಿದುಕೊಂಡು ಕಾಲಿಗೆ ಬುದ್ಧಿ ಹೇಳಿದ್ದಾರೆ. ಪೊಲೀಸ್ ಸುಪರಿಂಟೆಂಡ್ ಚಂದ್ರ ಗುಪ್ತಾ ಅವರು ಸ್ಥಳಕ್ಕೆ ಭೇಟಿ ನೀಡಿದರು.

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಜನಾರ್ದನ ರೆಡ್ಡಿ ಅವರ ಮನೆಯಲ್ಲಿ ಭಾರೀ ಪ್ರಮಾಣದ ಹಣ ಮತ್ತು ಚಿನ್ನಾಭರಣಗಳು ದೊರೆತಿರುವ ಸಂದರ್ಭದಲ್ಲಿಯೇ ಹತ್ತಿರದ ಹಳ್ಳಿಯಲ್ಲಿ ಲೂಟಿಯಾಗಿರುವುದು ನಾನಾ ಊಹಾಪೋಹಗಳಿಗೆ ದಾರಿಮಾಡಿ ಕೊಟ್ಟಿದೆ.

English summary
Five member dacoits loot a house in Veni Veerapura near Bellary, take away Rs. 8 lakh and 700 gram gold jewellery. Dacoits beat up 60-year-old woman who resisted the dacoits. This has happened after huge pile of cash and jewellery found in arrested Janardhana Reddy's house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X