ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜನಾರ್ದನ ರೆಡ್ಡಿ ಬಂಧನ; ಜಗನ್ ಗೆ ಭಾರಿ ಹೊಡೆತ
ಜಗನ್ ಅವರ ಅಪ್ಪ ರಾಜಶೇಖರ ರೆಡ್ಡಿ ಅವರಿಗೆ ತಾವು ತುಂಬಾ ಹತ್ತಿರ ಹತ್ತಿರ. ಹಾಗೆಯೇ, ಜಗನ್ ಗೆ ಸಹ. ರಾಜಶೇಖರ ರೆಡ್ಡಿ ಕುಟುಂಬದ ಜತೆ ವ್ಯಾಪಾರ ಸಂಬಂಧ ಹೊಂದಿದ್ದೇವೆ ಎಂದು ಜನಾ ರೆಡ್ಡಿ ಮೊದಲಿನಿಂದಲೂ ಹೇಳಿಕೊಂಡು ಬರುತ್ತಿದ್ದರು. ಇದು ಜಗನ್ ಪಾಲಿಗೆ ಶಾಪವಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಜಗನ್ ಅವರನ್ನು ಸಿಬಿಐ ಇನ್ನೂ ಬಂಧಿಸಿಲ್ಲವಾದರೂ ಅಕ್ರಮ ಸಂಪತ್ತು ಕ್ರೋಡೀಕರಣದ ಹಿನ್ನೆಲೆಯಲ್ಲಿ ಅವರನ್ನು ಸುಮಾರು 10-15 ದಿನಗಳಿಂದ ಸತತವಾಗಿ ತೀವ್ರ ತನಿಖೆಗೊಳಪಡಿಸಿದೆ. ಈಗ ಜನಾ ರೆಡ್ಡಿ ಬಂಧನದ ವೇಳೆ ಜಗನ್ ಬಗ್ಗೆ ಬಾಯಿಬಿಟ್ಟರೆ ಹಾಗೂ ದಾಳಿ ವೇಳೆ ದಾಖಲೆಗಳು ಸಿಕ್ಕರೆ ಜಗನ್ ಗೆ ಉರುಳಾಗಲಿದೆ.
ಅದಕ್ಕಿಂತ ಮುಖ್ಯವಾಗಿ ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮಗಳ ವಿರುದ್ಧ ತೆಲುಗುದೇಶಂ ನಾಯಕ ಚಂದ್ರಬಾಬು ನಾಯ್ಡು ದೊಡ್ಡ ಸಮರವನ್ನೇ ಸಾರಿದ್ದರು. ಇನ್ನು ಬ್ರಾಹ್ಮಣಿ ಸ್ಟೀಲ್ ಕಂಪನಿಯಲ್ಲೂ ಜಗನ್ ಪಾಲು ಇದೆ. ಈ ಹಿನ್ನೆಲೆಯಲ್ಲಿ ಜನಾ ರೆಡ್ಡಿ ಬಂಧನವು ಜಗನ್ ಪಾಲಿಗೆ ಮಗ್ಗುಲ ಮುಳ್ಳಾಗಲಿದೆ.
Comments
ಸಿಬಿಐ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ janardhana reddy cbi illegal mining ಓಬಳಾಪುರಂ obulapuram ಜಗನ್ ಮೋಹನ್ ರೆಡ್ಡಿ jagan mohan reddy
English summary
Janardhan Reddy is arrested by CBI under Section 120 and 120 B. As Jagan is a close associate of J. Reddy he is feeling the heat. The arrest of Gali Janardhan Reddy a big blow to YSR Congress president YS Jagan.
Story first published: Monday, September 5, 2011, 12:48 [IST]