ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲೇ ಸಿಬಿಐನಿಂದ ವೈಎಸ್ ಜಗನ್ ಬಂಧನ?

By Mahesh
|
Google Oneindia Kannada News

YS Jagan fears detention
ನವದೆಹಲಿ, ಸೆ.5: ಜನಾರ್ದನ ರೆಡ್ಡಿ ಅವರ ಅಕ್ರಮ ಗಣಿಗಾರಿಕೆ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ವೈಎಸ್ ಆರ್ ಕಾಂಗ್ರೆಸ್ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ. ಆದರೆ, ವಿಚಾರಣೆಗಾಗಿ ಜಗನ್ ಅವರನ್ನು ಬಂಧಿಸಲು ಸಿಬಿಐ ತಂಡ ಕಾದು ಕೂತಿರುವ ಸುದ್ದಿ ಹೊರಬಿದ್ದಿದೆ.

ಸದ್ಯ ದೆಹಲಿಯಲ್ಲಿರುವ ಕಡಪ ಸಂಸದ ಜಗನ್ ಅವರ ಮೇಲೆ ಚಾರ್ಚ್ ಶೀಟ್ ದಾಖಲಿಸಿದ ನಂತರ ಬಂಧಿಸುವ ಸಾಧ್ಯತೆಯಿದೆ. ಓಬಳಾಪುರಂ ಗಣಿಗಾರಿಕೆ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಗಾಲಿ ಜನಾರ್ದನ ರೆಡ್ಡಿ ಅವರನ್ನು ಬಂಧಿಸಿದಂತೆ ಜಗನ್ ಅವರನ್ನು ಬಂಧಿಸುವ ಸಾಧ್ಯತೆಯಿದೆ.

ವೈಎಸ್ ಜಗನ್ ಅವರ ತಂದೆ ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರು ಸುಮಾರು 8-9 ವರ್ಷಗಳ ಹಿಂದೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಗಡಿಭಾಗದಲ್ಲಿ ಗಣಿಗಾರಿಕೆ ನಡೆಸಲು ಬಳ್ಳಾರಿ ರೆಡ್ಡಿ ಸೋದರರಿಗೆ ಅನುಮತಿ ನೀಡಿದ್ದರು. ಇದಲ್ಲದೆ ಅನೇಕ ಕಂಪನಿಗಳಲ್ಲೂ ವೈಎಸ್ ಜಗನ್ ಹಾಗೂ ರೆಡ್ಡಿ ಸೋದರರ ಅನಧಿಕೃತ ಪಾಲುದಾರಿಕೆ ಇದೆ.

ವೈಎಸ್ ಜಗನ್ ಅವರ ಮೇಲೆ ಅಕ್ರಮ ಆಸ್ತಿ ಹೊಂದಿರುವ ಆರೋಪ ಹೊರೆಸಿ ಸಿಬಿಐ FIR ದಾಖಲಿಸಿದೆ.ಜಾರಿ ನಿರ್ದೇಶನಾಲಯ ಕೂಡಾ ಜಗನ್ ಹಿಂದೆ ಬಿದ್ದಿದೆ. ಇತ್ತೀಚಿನ ಬೆಳವಣಿಗೆಯೊಂದರಲ್ಲಿ ತಮ್ಮ ಒಡೆತನದ ಸಾಕ್ಷಿ ಮಾಧ್ಯಮ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ಜಗನ್ ರಾಜೀನಾಮೆ ನೀಡಿದ್ದಾರೆ. ಆದರೆ ಪತ್ನಿ ಭಾರತಿ ಅವರನ್ನು ಆ ಸ್ಥಾನದಲ್ಲಿ ಕೂರಿಸಿದ್ದಾರೆ.

English summary
YS Jaganmohan Reddy fears detention after CBI raid on OMC and arrest of Janardhan Reddy. CBI likely to arrest YS Jagan in New Delhi after getting permission from Speaker Meira Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X