ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್ ತಲುಪಿದ ಸಿಬಿಐ: ಸಂಜೆ4ಕ್ಕೆ ರೆಡ್ಡಿ ಕೋರ್ಟಿಗೆ

By Srinath
|
Google Oneindia Kannada News

cbi-to-produce-reddy-hyderabad-court-sept5
ಹೈದರಾಬಾದ್, ಸೆ.5: ಸೋಮವಾರ ನಸುಕಿನಲ್ಲಿ ಬಳ್ಳಾರಿಯಲ್ಲಿ ಬಂಧನಕ್ಕೊಳಗಾದ ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಓಬಳಾಪುರಂ ಮೈನಿಂಗ್ ಕಂಪನಿಯ ಶ್ರೀನಿವಾಸ್ ಅವರೊಂದಿಗೆ ಸಿಬಿಐ ಅಧಿಕಾರಿಗಳು ಮಧ್ಯಾಹ್ನ 1.30 ವೇಳೆಗೆ ಹೈದರಾಬಾದ್ ತಲುಪಿದ್ದಾರೆ. ಈ ಮಧ್ಯೆ, ಇಬ್ಬರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಬಂಧಿತರಿಬ್ಬರನ್ನೂ ಹೈದರಾಬಾದಿನ ಕೋಠಿಯಲ್ಲಿರುವ ಸಿಬಿಐ ಕಚೇರಿಗೆ ಕರೆದೊಯ್ಯಲಾಗಿದೆ. ಅಲ್ಲಿಂದ ಸಂಜೆ 4 ಗಂಟೆ ವೇಳೆಗೆ ನಾಂಪಲ್ಲಿಯಲ್ಲಿರುವ ಸಿಬಿಐ ಕೋರ್ಟಿನಲ್ಲಿ ಅವರನ್ನು ಹಾಜರುಪಡಿಸಲಾಗುವುದು ಎಂದು ಸಿಬಿಐ ಡಿಐಜಿ ಲಕ್ಷ್ಮಿನಾರಾಯಣ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

'ಬಲವಾದ ಸಾಕ್ಷ್ಯವಿಲ್ಲದೆ ಸಿಬಿಐ ಯಾರ ಮೇಲೂ ಕ್ರಮ ಜರುಗಿಸದು. ಪ್ರಸ್ತುತ, ತಮ್ಮ ಬಂಧನದಲ್ಲಿರುವ ರೆಡ್ಡಿ ಜೋಡಿಯ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಆ ಹಿನ್ನೆಲೆಯಲ್ಲಿ ಅವರ ನಿವಾಸಗಳ ಮೇಲೆ ದಾಳಿ ನಡೆಸಿ, ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ' ಎಂದು ಲಕ್ಷ್ಮಿನಾರಾಯಣ ಹೇಳಿದ್ದಾರೆ.

ನ್ಯಾಯಾಲಯದಲ್ಲಿ ಇಬ್ಬರನ್ನೂ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಕಾಲ ತಮ್ಮ ವಶಕ್ಕೆ ಒಪ್ಪಿಸುವಂತೆ ಕೋರುವುದಾಗಿ ಅವರು ತಿಳಿಸಿದ್ದಾರೆ.

English summary
CBI DIG Lakshminarayana has said that he will produce arrested Janardhana Reddy and Srinivas Reddy in CBI Special Court at Nampalli in Hyderabad at 4pm Sept 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X