ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಂ ಮತ್ತು ಸಂಪುಟ ಸಹೋದ್ಯೋಗಿಗಳ ಆಸ್ತಿ ಘೋಷಣೆ

|
Google Oneindia Kannada News

Manmohan Singh
ನವದೆಹಲಿ, ಸೆ 03: ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ತಮ್ಮತಮ್ಮ ಆಸ್ತಿಯನ್ನು ಶನಿವಾರ ಘೋಷಿಸಿಕೊಂಡಿದ್ದಾರೆ.

ಪ್ರಧಾನಿ ಸಿಂಗ್ ಗಿಂತಲೂ ಹೆಚ್ಚು ಆಸ್ತಿ ಹೊಂದಿರುವ ಸಾಕಷ್ಟು ಸಂಪುಟ ಸಚಿವರು ಇದ್ದಾರೆ. ಇದರಲ್ಲಿ ಗ್ರಾಮೀಣ ಪ್ರದೇಶವನ್ನು ಅಭಿವೃದ್ಧಿ ಮಾಡುವ ಸಚಿವ ಕಮಲ್ ನಾಥ್ ಟಾಪ್ ಒನ್ ಸ್ಥಾನ ಪಡೆದಿದ್ದಾರೆ. ನಮ್ಮ ರಾಜ್ಯದ ಎಸ್ಎಂ ಕೃಷ್ಣ ಕಡಿಮೆ ಆಸ್ತಿ ಹೊಂದಿದ್ದಾರೆ. ಪ್ರಧಾನಿ ಆಸ್ತಿ ಕೆಲವು ಕೋಟಿ ರು.ಗಳಲ್ಲಿದೆ. ಯಾರ ಯಾರ ಆಸ್ತಿ ಎಷ್ಟೇಷ್ಟು? ಬನ್ನಿ ನೋಡೋಣ.

* ಗ್ರಾಮೀಣ ಅಭಿವೃದ್ಧಿ ಮಂತ್ರಿ ಕಮಲ್ ನಾಥ್ ಆಸ್ತಿ 263 ಕೋಟಿ ರುಪಾಯಿ ಆಗಿದ್ದು ಶ್ರೀಮಂತ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ.

* ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಆಸ್ತಿ ಮೊತ್ತ 5 ಕೋಟಿ ರುಪಾಯಿ. ಅವರು ಸುಮಾರು 1.8 ಕೋಟಿ ರು. ಮೊತ್ತದ ಸ್ವತ್ತು ಹೊಂದಿದ್ದಾರೆ. 90 ಲಕ್ಷ ರು. ಮೌಲ್ಯದ ಮನೆ ಚಂಡಿಗಢದಲ್ಲಿದೆ. ದೆಹಲಿಯ ವಸಂತ್ ಕುಂಜಿಯಲ್ಲಿರುವ ಅಪಾರ್ಟ್ ಮೆಂಟ್ ಬೆಲೆ 88 ಲಕ್ಷ ರುಪಾಯಿ.

* ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಆಸ್ತಿ ಮೊತ್ತ 1.8 ಕೋಟಿ ರುಪಾಯಿ. ಅವರು 62 ಲಕ್ಷ ರು. ಮೊತ್ತದ ಪ್ರಾಪರ್ಟಿ ಹೊಂದಿದ್ದಾರೆ. ಅವರ ಸ್ವತ್ತು ಮತ್ತು ಉಳಿತಾಯ ಖಾತೆಯಲ್ಲಿರುವ ಮೊತ್ತ 1.2 ಕೋಟಿ ರುಪಾಯಿ.

* ಕೇಂದ್ರ ಗೃಹಖಾತೆ ಹೊಂದಿರುವ ಪಿ ಚಿದಂಬರಂ ವೈಯಕ್ತಿಕ ಆಸ್ತಿ 11 ಕೋಟಿ ರುಪಾಯಿ. ಅವರ ಪತ್ನಿಯಲ್ಲಿರುವ ಆಸ್ತಿ ಮೊತ್ತ 12.8 ಕೋಟಿ ರುಪಾಯಿ.

* ರಕ್ಷಣಾ ಸಚಿವ ಎ ಕೆ ಆಂಟೊನಿ ವೈಯಕ್ತಿಕ ಆಸ್ತಿ ಮೊತ್ತ 1.8 ಕೋಟಿ ರುಪಾಯಿ. ಅವರ ಪತ್ನಿಯಲ್ಲಿರುವ ಆಸ್ತಿ ಮೌಲ್ಯ 30 ಲಕ್ಷ ರುಪಾಯಿ.

* ಕೃಷಿ ಸಚಿವ ಶರದ್ ಪವರ್ ಆಸ್ತಿ ಮೊತ್ತ 12 ಕೋಟಿ ರುಪಾಯಿ. ಇದರಲ್ಲಿ ವಿವಿಧ ಕಂಪನಿಗಳಲ್ಲಿನ ಹೂಡಿಕೆ ಮತ್ತು ಷೇರುಗಳು ಸೇರಿವೆ.

* ಪೆಟ್ರೋಲಿಯಂ ಸಚಿವ ಮುರಲಿ ದೇವೂರ ಮತ್ತು ಅವರ ಪತ್ನಿಯ ಒಟ್ಟು ಆಸ್ತಿ ಮೊತ್ತ 15.2 ಕೋಟಿ ರುಪಾಯಿ. ಇವರ ಪತ್ನಿ ಮೂರು ಕಂಪನಿಗಳನ್ನು ನಡೆಸುತ್ತಿದ್ದಾರೆ.

* ಜವಳಿಖಾತೆಯ ಮಾಜಿ ಮಂತ್ರಿ ದಯಾನಿಧಿ ಮಾರನ್ ಆಸ್ತಿ ಮೊತ್ತ 2.94 ಕೋಟಿ ರು. ಅವರು ಮತ್ತು ಅವರ ಪತ್ನಿ ರಿಲಯೆನ್ಸ್ ಇಂಡಸ್ಟ್ರಿಸ್ ಲಿಮಿಟೆಡ್ ನಲ್ಲಿ ಷೇರು ಹೊಂದಿದ್ದಾರೆ.

ಅತ್ಯಂತ ಕಡಿಮೆ ಆಸ್ತಿ ಹೊಂದಿರುವ ಮುಖ್ಯಮಂತ್ರಿ ಯಾರು? ಅವರೇ ನಮ್ಮ ಕರ್ನಾಟಕದ ಎಸ್ಎಂ ಕೃಷ್ಣ. ಮುಂದಿನ ಪುಟ ನೋಡಿ.

English summary
PM Manmohan Singh and his Cabinet Ministers have disclosed their assets. Who is crorepati in Cabinet? Here is Answer
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X