ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಚ್ಯುತಾನಂದನ ವಾಗ್ದಾಳಿ, ಮಾರ್ತಂಡ ವರ್ಮ ಸ್ಮಗಲಿಂಗ್

By * ಕುಮಾರ ರೈತ
|
Google Oneindia Kannada News

padmanabha-marthanda-verma
ತಿರುವಂತನಪುರ, ಸೆ.02: 'ಮಾರ್ತಂಡ ವರ್ಮ ಅಪಾರ ಬೆಲೆ ಬಾಳುವ ದೇಗುಲದ ಆಭರಣಗಳನ್ನು ಸ್ಮಗಲಿಂಗ್ ಮಾಡುತ್ತಿದ್ದಾರೆ. ಈತ ಪ್ರತಿದಿನ ಅನಂತ ಪದ್ಮನಾಭ ದೇಗುಲಕ್ಕೆ ಹೋಗುವುದೇಕೆ ಎಂಬುದು ನಿಮಗೆ ಗೊತ್ತಿಲ್ಲ. ಈತ ಹಿಂದಿರುಗುವಾಗ ಜೊತೆಯಲ್ಲಿ ಸಾಗುವ ಟಿಫಿನ್ ಕ್ಯಾರಿಯರ್ ನಲ್ಲಿ ಹೋಗುವುದು ದೇವರಿಗೆ ಅರ್ಪಿಸಿದ ನೈವೇದ್ಯ ಪಾಯಸಮ್ ಎಂದು ಭಾವಿಸಲಾಗಿದೆ.

ಆದರೆ ನಿಜಕ್ಕೂ ಅದರಲ್ಲಿ ಸಾಗಾಣಿಕೆಯಾಗುವುದು ಆಭರಣಗಳು" ಎಂದು ಕೇರಳ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಆರೋಪಿಸಿದರು. ಅಚ್ಯುತಾನಂದನ್ ಬಾಯಿ ಹರಕು ರಾಜಕಾರಣಿಯಲ್ಲ. ಪ್ರಾಮಾಣಿಕ ಎಂದು ಹೆಸರಾದವರು. ಕೈ-ಬಾಯಿ ಕೆಡಿಸಿಕೊಳ್ಳದೇ ರಾಜ್ಯಾಧಿಕಾರ ನಡೆಸಿದವರು. ಇವರು ವಿನಾ ಕಾರಣ ಆರೋಪಿಸುತ್ತಾರೆಯೆ…?

ದೇಗುಲದ ಸಂಪತ್ತಿಗೆ ಸಂಬಂಧಿಸಿದಂತೆ ಅವ್ಯವಹಾರಗಳಾಗುತ್ತಿದೆ ಎಂಬ ವಿವರವನ್ನು ಈ ದೇಗುಲದ ನಿವೃತ್ತ ಅರ್ಚಕರೊಬ್ಬರು ನೀಡಿದ್ದಾರೆ. ಅವರ ಜೀವವೂ ಈಗ ಅಪಾಯದಲ್ಲಿದೆ. ನೆಲ ಮಾಳಿಗೆಯ 'ಬಿ" ಕೊಠಡಿ ತೆರೆದರೆ ಅಪಾಯಗಳಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದರ ಬಾಗಿಲನ್ನು ಮಾರ್ತಂಡವರ್ಮ ತೆಗೆದಾಗಲೆಲ್ಲ ಏಕೆ ಏನೂ ಅಪಾಯವಾಗಿಲ್ಲ" ಇದು ವಿ.ಎಸ್. ಎ. ಪ್ರಶ್ನೆ.

ನೆಲಮಾಳಿಗೆಯ ಬಾಗಿಲುಗಳು ತೆರೆದು ಅಲ್ಲಿಯ ವಿವರಗಳು ದಾಖಲೀಕರಣವಾಗಬೇಕು ಎಂದು ನ್ಯಾಯಾಲಯ ಹೇಳಿತ್ತು. ಈ ಬಳಿಕ ದೇವಪ್ರಶ್ನೆಯನ್ನಿಡಿಸಿದ್ದು ನ್ಯಾಯಾಲಯ ತೀರ್ಮಾನದ ಮೇಲೆ ಸವಾರಿ ಮಾಡಿದಂತಾಗಿದೆ" ಇಲ್ಲ-ಸಲ್ಲದ ವದಂತಿಗಳನ್ನು ರಾಜಮನೆತನದವರು ಹರಡುತ್ತಿದ್ದಾರೆ ಎನ್ನುತ್ತಾರೆ.

'ದೇಗುಲದ ಚೈತನ್ಯಕ್ಕೂ 'ಬಿ" ಕೊಠಡಿಗೂ ನೇರ ಸಂಬಂಧವಿದೆ. ಈಗಾಗಲೇ 'ಎ" ಕೊಠಡಿ ತರೆದಿರುವುದರಿಂದ ಕೆಡಕುಂಟಾಗಿದೆ. ಇನ್ನೂ 'ಬಿ"ಕೊಠಡಿ ತೆರೆದರೆ ಈ ಕೆಡಕು ಇನ್ನೂ ಹೆಚ್ಚುತ್ತದೆ. ಕೊಠಡಿಗಳಲ್ಲಿರುವ ಸಂಪತ್ತಿನ ಪೋಟೋ ತೆಗೆಯುವುದು ಮತ್ತು ವಿಡಿಯೋಗ್ರಾಫ್ ಮಾಡಿಸುವುದು ಅಪಚಾರ. ರಾಷ್ಟ್ರ ಮತ್ತು ಆಡಳಿತದ ಮೇಲೆ ದುಷ್ಪರಿಣಾಮ ಉಂಟಾಗುವ ಭೀತಿಯಿದೆ. ದೇಗುಲದ ಆಡಳಿತ ನಡೆಸುವ ಕುಟುಂಬದಲ್ಲಿ ಸಾವು ಉಂಟಾಗಬಹುದು ಎಂದು ದೇವಪ್ರಶ್ನೆಯಿಂದ ಗೊತ್ತಾಗಿದೆ.

ಆದ್ದರಿಂದ ಇದಕ್ಕೆಲ್ಲ ಅವಕಾಶವಾಗದಂತೆ ತಡೆ ನೀಡಬೇಕು" ಹೀಗೆಂದು ತಿರುಳಿರುವ ಅರ್ಜಿಯನ್ನು ಟ್ರಾವೆಂಕೂರು ರಾಜಮನೆತನದ ರಾಮವರ್ಮ ಸುಪ್ರೀಮ್ ಕೋರ್ಟಿಗೆ ಸಲ್ಲಿಸಿದರು. ಇಂದು ಇದೇ ಅರ್ಜಿ ವಿಚಾರಣೆ.

English summary
Kerala Hindu Temple Padmanabhaswamy Treasure- The story behind padmanabha treasure smuggling and ex CM VS Achuthanandan allegation on Raja Marthanda Verma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X