ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಾಮಾಣಿಕತೆ: ಈ ಎರಡು ದಂತಕಥೆಗಳ ಹೆಗ್ಗುರುತು

By * ನೈರಿತಾ ದಾಸ್ ; ಕನ್ನಡಕ್ಕೆ : ರಂಗನಾಥ ಪಿಎಸ್
|
Google Oneindia Kannada News

Anna Hazare and Lal Bahadur Shastri
ಶಾಸ್ತ್ರೀಜಿಯವರು ಒಬ್ಬ ಬಡ ಶಾಲಾ ಶಿಕ್ಷಕನ ಮಗನಾಗಿ ಜನಿಸಿ, ಚಿಕ್ಕವಯಸ್ಸಿನಲ್ಲಿ ತನ್ನ ತಂದೆಯವರನ್ನು ಕಳೆದುಕೊಂಡು, ಭ್ರಷ್ಟಾಚಾರ ರಹಿತ ಹಾಗೂ ವಿಶ್ವಾಸ ದ್ರೋಹ ಮಾಡದೆ ಸಂಪೂರ್ಣ ಜೀವನವನ್ನು ಕಳೆದರು. ಒಂದು ಸಾರಿ ವಾರಣಾಸಿಯಲ್ಲಿನ ಗಂಗಾನದಿಯ ದಡದಲ್ಲಿನ ಜಾತ್ರೆಯನ್ನು ನೋಡಲು ಸ್ನೇಹಿತರ ಜತೆ ಹೋಗಿದ್ದರು. ವಾಪಸ್ಸು ಬರುವಾಗ ದೋಣಿಯವನಿಗೆ ಹಣ ಕೊಡಲು ಕೈಯಲ್ಲಿ ಕಾಸಿರಲಿಲ್ಲ. ಸ್ನೇಹಿತರಿಂದ ಕಾಸು ಪಡೆದು ಪ್ರಯಾಣಿಸುವ ಬದಲು ನದಿಯೊಳಗೆ ಧುಮುಕಿ ಈಜಿ ಆಚೆ ದಡವನ್ನು ಸೇರಿದರು. ಶಾಸ್ತ್ರೀಜಿಯವರು ಜೀವನದುದ್ದಕ್ಕೂ ಇಂತಹ ಸರಳತೆಯನ್ನು ನಿರ್ವಹಿಸುತಿದ್ದುದನ್ನು ನಾವು ಕಾಣಬಹುದು.

ಅಣ್ಣಾ ಹಜಾರೆಯವರು ಒಂದು ಸಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಆದರೆ ನಂತರ ಮನಸು ಬದಲಾಯಿಸಿ, 15 ವರ್ಷ ಭಾರತೀಯ ಸೈನ್ಯದಲ್ಲಿ ಲಾರಿ ಚಾಲಕನಾಗಿ ಕಾರ್ಯನಿರ್ವಹಿಸಿ ತಮ್ಮ ಜೀವನವನ್ನು ದೇಶ ಸೇವೆಗೆ ಮುಡುಪಾಗಿಟ್ಟಿದ್ದರು. ತಮ್ಮ ನಿವೃತ್ತಿ ಜೀವನದ ನಂತರ ತಮ್ಮ ಸ್ವಂತ ಊರಾದ ಮಹರಾಷ್ಟ್ರದ ಬರ ಪೀಡಿತ ಗ್ರಾಮವಾದ ರಾಲೆಗಾಂವ್ ಸಿದ್ದಿಗೆ ಹೋಗಲು ನಿರ್ಧರಿಸಿದ್ದರು. ತದನಂತರ ರಾಲೆಗಾಂವ್ ಸಿದ್ದಿ ಗ್ರಾಮವನ್ನು ಅಹಮದ್ ನಗರ ಜಿಲ್ಲೆಯಲ್ಲಿ ಮಾದರಿ ಗ್ರಾಮವನ್ನಾಗಿ ಮಾಡಿದರು.

ಕುಡಿತ, ಬಡತನ, ಅನಕ್ಷರತೆಯ ದಾಸ್ಯಕ್ಕೆ ಸಿಲುಕಿ ನರುಳುತ್ತಿದ್ದ ಅಲ್ಲಿಯ ಜನರೊಳಗೆ, ಸಾಕ್ಷರತೆ, ನೈರ್ಮಲ್ಯ, ಮೌಲ್ಯಗಳನ್ನು ತುಂಬಿದ್ದಲ್ಲದೇ ಕುಡಿತದ ಚಟ ಇರುವವರನ್ನು ನಯದಿಂದ ತಿದ್ದಿ, ಬಗ್ಗದವರನ್ನು ಶಿಕ್ಷೆಯಿಂದ ದಾರಿಗೆ ತಂದು ಆದರ್ಶ ಗ್ರಾಮವನ್ನಾಗಿಸಲು ದುಡಿದವರು. ಈಗ ಈ ಪುಟ್ಟ ಗ್ರಾಮ ದೇಶದಲ್ಲೇ ಶ್ರೀಮಂತ ಹಾಗೂ ಮಾದರಿ ಗ್ರಾಮವಾಗಿ ಪ್ರಚಲಿತಗೊಂಡಿದೆ. ಸೌರಶಕ್ತಿಯ ಬಳಕೆಯ ಮೂಲಕ ಇಂಧನ ಉಳಿತಾಯದಂತಹ ಸದುದ್ದೇಶಗಳನ್ನು ಪ್ರೇರೇಪಿಸಿದ ಈ ಸಮಾಜ ಸೇವಕ ಸದಾ ದೇಶದ ಸರ್ವತೋಮುಖ ಏಳಿಗೆಯನ್ನು ಬಯಸಿದವರು.

English summary
Anna resembles to another freedom fighter whom the Indians hardly remember. He is none other than our beloved though forgotten Prime Minister - Lal Bahadur Shastri. Anna resembles to Shastriji in everything - from simple lifestyle to their beliefs in non-violence, their faith on Mahatma Gandhi to their unique struggles - India Against Corruption and Jai Jawan Jai Kisan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X