ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿ20: ಇಂಡಿಯಾ ಫೇವರೀಟ್, ದ್ರಾವಿಡ್ ಮೇಲೆ ಕಣ್ಣು

By Mahesh
|
Google Oneindia Kannada News

Rahul Dravid
ಮ್ಯಾಂಚೆಸ್ಟರ್, ಆ.31: ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಂಡ ಟೀಂ ಇಂಡಿಯಾ ಮತ್ತೆ ಪುಟಿದೆದ್ದಿದೆ. ಆ.31ರಂದು ನಡೆಯಲಿರುವ ಏಕೈಕ ಟ್ವಿಂಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತವೇ ಗೆಲ್ಲುವ ಫೇವರೀತ್ ತಂಡ ಎನಿಸಿದೆ.

ಏಕದಿನ ವಿಶ್ವಕಪ್ ಚಾಂಪಿಯನ್ ತಂಡವು ಟೆಸ್ಟ್ ಸರಣಿಯಲ್ಲಿನ 4-0 ವೈಟ್‌ವಾಶ್‌ಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಅಭ್ಯಾಸ ಪಂದ್ಯಗಳಲ್ಲೂ ಗೆಲುವು ಸಾಧಿಸಿ ವಿಶ್ವಾಸವನ್ನು ಗಳಿಸಿದೆ.

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಚಿನಕುರಳಿ ಆಟ ತಂಡಕ್ಕೆ ಹೆಚ್ಚಿನ ಸ್ಪೂರ್ತಿ ನೀಡಿದೆ. ಎಡಗೈ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ ಫಾರ್ಮ್ ನಲ್ಲಿರುವುದರಿಂದ ಆರಂಭಿಕ ಆಟಗಾರ ಸ್ಥಾನಕ್ಕೆ ಹೆಚ್ಚಿನ ಬಲ ಸಿಗುತ್ತದೆ.

ದ್ರಾವಿಡ್ ಮೇಲೆ ಕಣ್ಣು: ಯುವಕರ ತಂಡಕ್ಕೆ ರಾಹುಲ್ ದ್ರಾವಿಡ್ ಹಾಗೂ ಸಚಿನ್ ಆಟ ನೆರವಾಗಲಿದೆ. ಕಳೆದ 3 ವರ್ಷಗಳಿಂದ ಟ್ವೆಂಟಿ-20 ಪಂದ್ಯವನ್ನು ಆಡದ ದ್ರಾವಿಡ್, ಟ್ವಿಂಟಿ 20 ಪಂದ್ಯಕ್ಕೆ ಹೊಂದಿಕೊಂಡು ಆಡುವ ನಿರೀಕ್ಷೆಯಿದೆ.

ಗಾಯಾಳು ಗೌತಮ್ ಗಂಭೀರ್ ಸರಣಿಯಿಂದ ಹೊರಬಿದ್ದಿರುವುದರಿಂದ ಹಿರಿಯ ಆಟಗಾರರು ಹೆಚ್ಚಿನ ಜವಾಬ್ದಾರಿ ಹೊರಬೇಕಿದೆ.

ಸ್ಟುವರ್ಟ್ ಬ್ರಾಡ್ ಇಂಗ್ಲೆಂಡ್‌ನ ಟ್ವೆಂಟಿ-20 ತಂಡವನ್ನು ಮುನ್ನಡೆಸಲಿದ್ದಾರೆ. ಆತಿಥೇಯರ ಬೌಲಿಂಗ್ ವಿಭಾಗದಲ್ಲಿ ಟಿಮ್ ಬ್ರೆಸ್ನಾನ್, ಸ್ಟೀವ್ ಫಿನ್, ಗ್ರೇಮ್ ಸ್ವಾನ್ ಹಾಗೂ ಏಕದಿನ ಸ್ಪೆಷಲಿಸ್ಟ್ ಜಾಡೆ ಡೆರ್ನ್‌ಬ್ಯಾಚ್ ಆಡುವ ಸಾಧ್ಯತೆಯಿದೆ.

ಆರಂಭಿಕ ಬ್ಯಾಟ್ಸ್‌ಮನ್ ಕ್ರೆಗ್ ಕೀಸ್ವೆಟರ್, ಇಯಾನ್ ಮೋರ್ಗನ್ ಹಾಗೂ ಕೇವಿನ್ ಪೀಟರ್ಸನ್ ಸಹಿತ ಅಗ್ರ ಆರು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಅಪಾಯಕಾರಿಗಳಾಗಿದ್ದಾರೆ. ಜೋಸ್ ಬಟ್ಲರ್, ಬೆನ್‌ಸ್ಟೋಕ್ಸ್ ಹಾಗೂ ಅಲೆಕ್ಸ್ ಹ್ಯಾಲ್ಸ್ ಕೂಡಾ ಉತ್ತಮ ಫಾರ್ಮ್ ನಲ್ಲಿದ್ದಾರೆ.

ಇತ್ತ ಪ್ರವೀಣ್‌ಕುಮಾರ್, ಆರ್‌ಪಿ ಸಿಂಗ್ ಕುಮಾರ್‌ಗೆ ಕನ್ನಡಿಗ ವಿನಯ್‌ಕುಮಾರ್ ಸಾಥ್ ನೀಡುವ ಸಾಧ್ಯತೆಯಿದೆ. ಅಮಿತ್‌ಮಿಶ್ರಾ ಅಥವಾ ಅಶ್ವಿನ್ ಸ್ಥಾನ ಪಡೆಯಬಹುದು. ಅರೋನ್ ಈ ಪಂದ್ಯದಲ್ಲಿ ಆಡುವುದು ಅನುಮಾನ.

ತಂಡಗಳು: ಭಾರತ: ಸಚಿನ್ ತೆಂಡುಲ್ಕರ್, ಪಾರ್ಥಿವ್ ಪಟೇಲ್, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ, ಮಹೇಂದ್ರ ಸಿಂಗ್ ಧೋನಿ, ಪ್ರವೀಣ್ ಕುಮಾರ್, ಆರ್‌ಪಿ ಸಿಂಗ್, ಮುನಾಫ್ ಪಟೇಲ್, ವಿನಯ್‌ಕುಮಾರ್, ಅಮಿತ್ ಮಿಶ್ರಾ ಹಾಗೂ ಆರ್. ಅಶ್ವಿನ್.

ಇಂಗ್ಲೆಂಡ್: ಸ್ಟುವರ್ಟ್ ಬ್ರಾಡ್ (ನಾಯಕ), ರವಿ ಬೋಪಾರ, ಟಿಮ್ ಬ್ರೆಸ್ನಾನ್, ಜೋಸ್ ಬಟ್ಲರ್, ಜಾಡೆ ಡೆರ್ನ್‌ಬ್ಯಾಚ್, ಸ್ಟೀವ್ ಫಿನ್, ಅಲೆಕ್ಸ್ ಹೇಲ್ಸ್, ಕ್ರೆಗ್ ಕೀಸ್ವೆಟರ್(ವಿಕೆಟ್‌ಕೀಪರ್), ಇಯಾನ್ ಮೋರ್ಗನ್, ಸಮಿತ್ ಪಟೇಲ್, ಕೇವಿನ್ ಪೀಟರ್ಸನ್, ಬೆನ್ ಸ್ಟೋಕ್ಸ್, ಗ್ರೇಮ್ ಸ್ವಾನ್.

English summary
The ODI World Champions, India take on the T20 World Champions, England in a one-off T20 at the Old Trafford on Aug.31
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X