ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀವ್ ಹಂತಕರ ಪರ ರೊಚ್ಚಿಗೆದ್ದ ಯುವತಿ ಆತ್ಮಾಹುತಿ

By Mahesh
|
Google Oneindia Kannada News

Kanchipuram woman Senkodi dies for Rajiv Gandhi killers
ಕಾಂಚಿಪುರಂ, ಆ.30: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶ್ರೀಲಂಕನ್ನರು ಮತ್ತು ಒಬ್ಬ ಭಾರತೀಯ ಪ್ರಜೆಗೆ ಗಲ್ಲುಶಿಕ್ಷೆ ವಿಧಿಸಿರುವುದನ್ನು ವಿರೋಧಿಸಿ ತಮಿಳುನಾಡಿನಲ್ಲಿ ಜನ ರೊಚ್ಚಿಗೆದ್ದಿದ್ದಾರೆ.

ಈ ಮಧ್ಯೆ ಅಪರಾಧಿಗಳಾದ ಮುರುಗನ್, ಸಾಂತನ್ ಮತ್ತು ಪೆರರಿವಾಳನ್ ಅವರನ್ನು ಸೆ.9ರಂದು ನೇಣುಗಂಬಕ್ಕೇರಿಸುವಂತಿಲ್ಲ ಎಂದಿರುವ ಮದ್ರಾಸ್ ಹೈಕೋರ್ಟ್ ಎಂಟು ತಿಂಗಳ ಕಾಲ ತಡೆಯಾಜ್ಞೆ ನೀಡಿದೆ.

ರೊಚ್ಚಿಗೆದ್ದ ಅಪರಾಧಿಗಳ ಬೆಂಬಲಿಗರು: ಮೂವರು ಅಪರಾಧಿಗಳಿಗೆ ಮರಣ ದಂಡನೆ ವಿಧಿಸಿರುವುದನ್ನು ವಿರೋಧಿಸಿ ಮಹಿಳೆಯೊಬ್ಬಳು ಕಾಂಚಿಪುರಂನ ಸರ್ಕಾರಿ ಕಚೇರಿಯೊಂದರ ಹೊರಗೆ ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.

ಸೆಂಕೋಡಿ ಎಂಬ ಹೆಸರಿನ 27ರ ಹರೆಯದ ಆ ಮಹಿಳೆ ಆಸ್ಪತ್ರೆಯ ಹಾದಿಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಕಾಂಚಿಪುರಂನಲ್ಲಿ ಸೆಂಕೋಡಿಯ ಅಂತಿಮ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ. ಸೆಂಕೋಡಿ ಅಂತ್ಯಕ್ರಿಯೆ ಬುಧವಾರ ನಡೆಯಲಿದೆ ಎಂದು ಅವರ ಕುಟುಂಬದವರು ಹೇಳಿದ್ದಾರೆ.

ಹರಿದ್ರಾ ಅಪೀಲ್ : ಈ ನಡುವೆ ಆರೋಪಿಗಳಲ್ಲಿ ಒಬ್ಬರಾದ ಎ.ಜಿ. ಪೆರರಿವಾಲನ್ ಅಲಿಯಾಸ್ ಅರಿವು ತಾನು ಶಿವರಸನ್‌ನ ಜತೆಗಿದ್ದೆ ಆದರೆ ಹೊರತು ನೇರವಾಗಿ ಹತ್ಯೆಯಲ್ಲಿ ಭಾಗವಹಿಸಿರಲಿಲ್ಲ ಎಂದಿದ್ದಾನೆ.

ನಳಿನಿ ಹಾಗೂ ಮುರುಗನ್ ಪುತ್ರಿ ಹರಿದ್ರಾ ಎಂಬಾಕೆ ತನ್ನ ತಂದೆಯನ್ನು ಕ್ಷಮಿಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಜೆ. ಜಯಲಲಿತಾರಿಗೆ ಪತ್ರ ಬರೆದಿದ್ದಾಳೆ. ಲಂಡನ್ ನಲ್ಲಿ ವಾಸವಾಗಿರುವ ಈಕೆ ಇಂಗ್ಲೆಂಡ್ ನಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳುವುದಾಗಿ ಹೇಳಿದ್ದಾಳೆ.

ಈ ನಡುವೆ ಚೆನ್ನೈನ ಸೇದಪೇಟ್ ಪ್ರದೇಶದಲ್ಲಿರುವ ರಾಜೀವ್ ಗಾಂಧಿ ಪ್ರತಿಮೆಯನ್ನು ಯಾರೋ ದುಷ್ಕರ್ಮಿಗಳು ಜಜ್ಜಿ, ವಿರೂಪಗೊಳಿಸಿದ ಘಟನೆ ವರದಿ ಬಂದಿದೆ.

English summary
Thousands of residents in Kanchipuram paid their last tribute to Senkodi, who immolated herself for the sake of three Rajiv case convicts. Madras High Court has given Interim Stay on hanging of three convicts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X