• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಪಲ್ ಬದಲಾಗುವುದಿಲ್ಲ: ಹೊಸ ಸಿಇಒ ಟಿಮ್ ಕುಕ್

|

ನ್ಯೂಯಾರ್ಕ್, ಆ. 29: ಆಪಲ್ ಕಂಪೆನಿಯ ಹೊಸ ಸಿಇಒ ಆಗಿ ನೇಮಕವಾಗಿರುವ ಟಿಮೋತಿ ಕುಕ್, ಅಧಿಕಾರ ಸ್ವೀಕರಿಸಿದ ಒಂದು ದಿನದ ನಂತರ ಹೇಳಿದ ಮಾತು- " ಆಪಲ್ ನಲ್ಲಿ ಯಾವುದೇ ಬದಲಾವಣೆ ಇಲ್ಲ, ಈಗಿರುವಂತೆಯೇ ಇದ್ದು ಒಳ್ಳೆಯ ಉತ್ಪನ್ನಗಳು ಮುಂದೆ ಕೂಡ ಬರಲಿವೆ"

ಆಪಲ್ ಕಂಪೆನಿಯ ಉದ್ಯೋಗಿಗಳಿಗೆ ಕುಕ್ ಹೇಳಿದ್ದೆಂದರೆ "ಸ್ಟೀವ್ ಒಬ್ಬ ಅಸಾಧಾರಣ ಲೀಡರ್ ಹಾಗೂ ನನ್ನ ಗುರು. ಅಷ್ಟೇ ಅಲ್ಲ, ಇಡೀ ಟೀಮ್ ಹಾಗೂ ನಮ್ಮ ಎಲ್ಲಾ ಉದ್ಯೋಗಿಗಳಿಗೂ ಸ್ಟೀವ್ ಮಾರ್ಗದರ್ಶಕರೇ. ನಾವೆಲ್ಲ ಇನ್ನು ಮುಂದೆಯೂ ಚೇರ್ ಮನ್ ಆಗಿ ಅವರು ನಮಗೆ ಮಾರ್ಗದರ್ಶಕರಾಗಿ ಇರಲೆಂದು ಬಯಸುತ್ತೇವೆ".

ಮುಂದುವರಿದ ಟಿಮ್ ಕುಕ್ "ಜಗತ್ತಿನ ಅತ್ಯುನ್ನತ ಕಂಪೆನಿಯೊಂದರಲ್ಲಿ ಸಿಇಒ ಆಗಿ ಕಾರ್ಯ ನಿರ್ವಹಿಸುವ ಅವಕಾಶ ನನಗೆ ಲಭಿಸಿರುವುದ ನನಗೆ ತುಂಬಾ ಸಂತೋಷ ತಂದಿದೆ. ಸದ್ಯಕ್ಕೆ ಆಪಲ್ ನಲ್ಲಿ ಯಾವುದೇ ಬದಲಾವಣೆಯನ್ನು ನಾನು ಬಯಸುವುದಿಲ್ಲ. 13 ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿರುವ ನನಗೆ ಈ ಕಂಪೆನಿಯ ಒಗ್ಗಟ್ಟು ಹಾಗೂ ಶಿಸ್ತಿನ ಬಗ್ಗೆ ಗೊತ್ತಿದೆ. ಸ್ಟೀವ್ ಕಟ್ಟಿರುವ ಈ ಕಂಪೆನಿಯ ಹಿಂದಿರುವ ಅಪಾರ ಪರಿಶ್ರಮದ ಅರಿವೂ ಕೂಡ ನನಗಿದೆ. ನಾವೆಲ್ಲ ಸೇರಿ ಕಂಪೆನಿಯ ಯಶಸ್ಸಿಗೆ ದುಡಿಯುವುದಲ್ಲದೇ ನಮ್ಮ ಮುಂದಿರುವ ವರ್ಷಗಳನ್ನು 'ಬೆಸ್ಟ್ ಇಯರ್ಸ್' ಎಂದು ಆಚರಿಸೋಣ" ಕರೆ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Apple new CEO Timothy Cook assured his team that the technology giant "is not going to change" and will "continue to make the best products" in the world. "Steve has been an incredible leader and mentor entire executive team. We are really looking forward to Steve’s ongoing guidance and inspiration as our chairman."
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more