ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟ ಮುಶರ್ರಫ್ ಆಸ್ತಿ ಮುಟ್ಟುಗೋಲಿಗೆ ಕೋರ್ಟ್ ಆದೇಶ

By Srinath
|
Google Oneindia Kannada News

musharraf-property-to-be-seized-pak-court
ಇಸ್ಲಾಮಾಬಾದ್, ಆಗಸ್ಟ್ 29: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಶರ್ರಫ್‌ರ ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಳ್ಳುವಂತೆ ಹಾಗೂ ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಸ್ಥಳೀಯ ನ್ಯಾಯಾಲಯ ಭಾನುವಾರ ಆದೇಶಿಸಿದೆ. ಮಾಜಿ ಪ್ರಧಾನಿ ಬೆನಝೀರ್ ಭುಟ್ಟೋ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಮೊಕದ್ದಮೆಯಲ್ಲಿ ವಿಚಾರಣೆಗೆ ಹಾಜರಾಗದ ಕಾರಣ ಮುಶರ್ರಫ್‌ರ ಆಸ್ತಿಪಾಸ್ತಿ ಮುಟ್ಟುಗೋಲಿಗೆ ಕೋರ್ಟ್ ಆದೇಶಿಸಿದೆ.

2008ರಲ್ಲಿ ಪಾಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮುಶರ್ರಫ್ ದುಬೈ ಹಾಗೂ ಲಂಡನ್‌ನಲ್ಲಿ ಸ್ವಯಂಪ್ರೇರಣೆಯಿಂದ ದೇಶಭ್ರಷ್ಟ ಜೀವನವನ್ನು ನಡೆಸುತ್ತಿದ್ದಾರೆ. 2007ರಲ್ಲಿ ನಡೆದ ಮಾಜಿ ಅಧ್ಯಕ್ಷೆ ಬೇನಝೀರ್ ಭುಟ್ಟೋ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮುಶರ್ರಫ್ ಪಾಕ್ ಸರಕಾರಕ್ಕೆ ಬೇಕಾಗಿದ್ದಾರೆ.

ಬೇನಝೀರ್‌ಗೆ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸಲು ವಿಫಲರಾಗಿದ್ದುದಕ್ಕಾಗಿ ಮುಶರ್ರಫ್ ವಿರುದ್ಧ ಪ್ರಾಸಿಕ್ಯೂಟರ್‌ಗಳು ಹಲವಾರು ಸಲ ಬಂಧನ ವಾರಂಟ್‌ಗಳನ್ನು ಜಾರಿಗೊಳಿಸಿದ್ದರು. ಆದರೆ ತನ್ನ ರಾಜಕೀಯ ಪ್ರತಿಸ್ಪರ್ಧಿಯಾಗಿದ್ದ ಬೇನಝೀರ್ ಹತ್ಯೆಗೆ ತಾನು ಸಂಚು ರೂಪಿಸಿದ್ದೆನೆ ಎಂಬ ಆರೋಪಗಳನ್ನು ಮುಶರ್ರಫ್ ಬಲವಾಗಿ ನಿರಾಕರಿಸಿದ್ದಾರೆ.

ಇದೀಗ ಬ್ಯಾಂಕ್ ಆದೇಶದಂತೆ ಮುಟ್ಟುಗೋಲುಗೊಂಡಿರುವ ಮುಶರ್ರಫ್‌ರ ಆಸ್ತಿಪಾಸ್ತಿಯು ಇಸ್ಲಾಮಾಬಾದ್ ಸಮೀಪವಿರುವ ತೋಟದ ಮನೆ ಹಾಗೂ ಹಲವಾರು ನಿವೇಶನ ಇತ್ಯಾದಿಗಳನ್ನು ಒಳಗೊಂಡಿದೆ.

English summary
Musharraf's property seizure -Pakistan court orders: A Pakistani court ordered the confiscation of exiled former president Pervez Musharraf's property and the freezing of his Pakistan bank accounts over accusations that he failed to provide security for assassinated former prime minister Benazir Bhutto, a lawyer said on Sunday (Aug 29).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X