ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನಲ್ಲಿ ಸಾಕುನಾಯಿಗಳ ಕ್ಯಾಟ್‌ವಾಕ್

By Bm Lavakumar
|
Google Oneindia Kannada News

Dog show in Mysore
ಮೈಸೂರು, ಆ. 29 : ಮೈಸೂರಿನ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಭಾನುವಾರ ನಡೆದ ಶ್ವಾನಗಳ ಪ್ರದರ್ಶನ ಶ್ವಾನಪ್ರಿಯರ ಮನಸ್ಸೆಳೆಯಿತು. ಅಲ್ಲದೆ ವಿವಿಧ ಮಾದರಿಯ ಸಾಕುನಾಯಿಗಳ ಕ್ಯಾಟ್‌ವಾಕ್ ನೋಡುಗರ ಹುಬ್ಬೇರಿಸುವಂತೆ ಮಾಡಿತು.

ಕೆನಲ್‌ ಕ್ಲಬ್ ಏರ್ಪಡಿಸಿದ್ದ ಅಖಿಲ ಭಾರತ ಶ್ವಾನ ಪ್ರದರ್ಶನ ಚಾಂಪಿಯನ್‌ಶಿಪ್‌ನಲ್ಲಿ ಸಾವಿರಾರು ಶ್ವಾನಪ್ರಿಯರು ಪಾಲ್ಗೊಂಡಿದ್ದರೆ, ಹಲವರು ತಮ್ಮ ಮುದ್ದಾದ ಸಾಕು ನಾಯಿಗಳೊಂದಿಗೆ ಆಗಮಿಸಿ ಕಾರ್ಯಕ್ರಮಕ್ಕೆ ಕಳೆಕಟ್ಟಿದರು.

ಇಡೀ ದೇಶದ 28ಕ್ಕೂ ಹೆಚ್ಚು ತಳಿಯ ನಾಯಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಜಮ್ಮು ಕಾಶ್ಮೀರ ಹೊರತು ಪಡಿಸಿ ಉಳಿದಂತೆ ಎಲ್ಲಾ ರಾಜ್ಯಗಳಿಂದ ಶ್ವಾನಪ್ರಿಯರು ತಮ್ಮ ಶ್ವಾನಗಳೊಂದಿಗೆ ಆಗಮಿಸಿದ್ದರು. ಪ್ರದರ್ಶನದಲ್ಲಿ ಸುಮಾರು 460ಕ್ಕೂ ಹೆಚ್ಚು ಶ್ವಾನಗಳು ಪಾಲ್ಗೊಂಡಿದ್ದವು.

ಮಿನಿಯೇಚರ್, ಪಿನ್ಸ್‌ಚರ್, ಟಿಬೆಟಿಯನ್, ಟೆರಿಯರ್, ಮುಧೋಳ್, ಬ್ಯಾಸೆಟ್ ಹೌಂಡ್, ಬೀಗಲ್, ಡ್ಯಾಶಂಡ್, ಫಾಕ್ಸ್‌ಹೌಂಡ್, ರೋಡೆಶಿಯನ್, ರಿಡ್ಜ್‌ಬ್ಯಾಕ್, ಐರಿಷ್‌ರಿಟೈವಲ್, ಅಮೆರಿಕನ್ ಸ್ಟಾನಿಯಲ್, ವೈನರ್, ಬುಲ್‌ಡಾಗ್, ಫ್ರೆಂಚ್‌ಬುಲ್‌ಡಾಗ್, ಮಿನಿಯೇಚರ್ ಸ್ಕಾನಜರ್, ಶಿಷ್‌ಟ್ಸೂ, ಬುಲ್ ಮಾಸ್ಟಿಫ್, ಡಾಬರ್‌ಮ್ಯಾನ್, ಸೈಬೀರಿಯನ್ ಹಸ್ಕೀ, ಜರ್ಮನ್ ಶಫರ್ಡ್, ಗ್ರೇಟ್‌ಡೆನ್, ಸೆಂಟ್ ಬರ್ನಾಡ್ ಮೊದಲಾದ ತಳಿಗಳ ಶ್ವಾನಗಳು ಪ್ರದರ್ಶನದಲ್ಲಿ ಕಂಡು ಬಂದವು.

English summary
Dog show organized in Mysore on Sunday, August 28 attracted dog enthusiasts. Dogs from all parts of India and all breeds were showcased at Dog show championship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X