• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

288 ಗಂಟೆ ಉಪವಾಸಕ್ಕೆ ಕೊನೆಹಾಡಿದ ಅಣ್ಣಾ ಹಜಾರೆ

By Srinath
|

ಹೊಸದಿಲ್ಲಿ, ಆಗಸ್ಟ್ 28: ಜನ ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ 12 ದಿನಗಳಿಂದ ರಾಮಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ 74 ವರ್ಷದ ಅಣ್ಣಾ ಹಜಾರೆ ಅವರು ಭಾನುವಾರ ಬೆಳಗ್ಗೆ 10.18ಕ್ಕೆ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸಿದ್ದಾರೆ. ಅಣ್ಣಾ ಉಪವಾಸ ನಿಲ್ಲಿಸುತ್ತಿದ್ದಂತೆ ಇಡೀ ದೇಶದಲ್ಲಿ ಸಂಚಲವವುಂಟು ಮಾಡಿದ್ದು, ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.

ಕೇಂದ್ರ ಸರಕಾರ ಅದರಲ್ಲೂ ಇಡೀ ಸಂಸತ್ತು ಅಣ್ಣಾ ಅವರ ಮೂರು ಬೇಡಿಕೆಗಳಿಗೆ ಒಕ್ಕೊರಲ ಸಮ್ಮತಿ ಸೂಚಿಸಿರುವುವ ಬಗ್ಗೆ ನಿನ್ನೆ ರಾತ್ರಿ ಅಣ್ಣಾಗೆ ತಿಳಿಸಲಾಗಿತ್ತು. ರಾತ್ರಿ ವೇಳೆ ಉಪವಾಸ ವ್ರತವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ ಅಣ್ಣಾ ಭಾನುವಾರ ಬೆಳಗ್ಗೆ 10ಕ್ಕೆ ಉಪವಾಸ ಸತ್ಯಾಗ್ರಹ ಕೈಬಿಡುವುದಾಗಿ ಹೇಳಿದ್ದರು.

ಉಪವಾಸದ ವೇಳೆ ಅಣ್ಣಾ ವ್ಯಕ್ತಿತ್ವ ಹಿಮಾಲಯದೆತ್ತರ ಬೆಳೆದಿದ್ದರೆ ಅವರು 7.5 ಕೆಜಿಯಷ್ಟು ಹಗರುವಾಗಿದ್ದಾರೆ. ದೆಹಲಿಯ ದಲಿತ ಕುಟುಂಬದ ಹೆಣ್ಣು ಮಗು ಸಿಮ್ರನ್ ಅಣ್ಣಾಗೆ ಎಳನೀರು ನೀಡಿ, ದಣಿದ ಜೀವಕ್ಕೆ ನೆರವಾದರು. ಉಪವಾಸ ನಿಲ್ಲಿಸುತ್ತಿದ್ದಂತೆ ವೈದ್ಯರು ಅಣ್ಣಾ ಚಿಕಿತ್ಸೆಗೆ ಮುಂದಾದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Anna Hazare who was fasting for last 13 days demanding Jan Lokpal bill ended his fast on Aug 28 at 10.10 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more