ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಹಿತಿ ತಂತ್ರಜ್ಞಾನ ಕುರಿತು ಡಾ. ಯು. ಬಿ. ಪವನಜ ಉಪನ್ಯಾಸ

By Prasad
|
Google Oneindia Kannada News

Dr UB Pavanaja
ಮೈಸೂರು, ಆ. 27 : ಮೈಸೂರಿನಲ್ಲಿ ಭಾನುವಾರ ಆಗಸ್ಟ್ 28ರಂದು ಸುರುಚಿ ರಂಗಮನೆ ಆಯೋಜಿಸಲಾಗಿರುವ ಸಾಹಿತ್ಯ ಚಾವಡಿಯಲ್ಲಿ ಸಾಫ್ಟ್ ವೇರ್ ತಂತ್ರಜ್ಞ, ಕನ್ನಡ ಅಂಕಣಕಾರ ಡಾ. ಯು.ಬಿ. ಪವನಜ ಅವರು 'ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ' ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ.

ಸ್ಥಳ : ಸುರುಚಿ ರಂಗಮನೆ, ಕುವೆಂಪುನಗರ, ಮೈಸೂರು
ಸಮಯ : ಬೆಳಿಗ್ಗೆ, 10.30ಕ್ಕೆ

ಡಾ. ಪವನಜ ಕನ್ನಡ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮೊದಲ ಶ್ರೇಣಿಯಲ್ಲಿನ ಹೆಸರು. ಸುಮಾರು ಹದಿನೈದಕ್ಕೂ ಹೆಚ್ಚು ವರ್ಷಗಳಿಂದ ಕನ್ನಡವನ್ನು ಕಂಪ್ಯೂಟರ್ ಗೆ ಅಳವಡಿಸುವ ಬಗ್ಗೆ ಬಹಳಷ್ಟು ಕೆಲಸ ಮಾಡಿದ್ದಾರೆ.

ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ "ನುಡಿ" ತಂತ್ರಾಂಶದ ಬೆಳವಣಿಗೆಯಲ್ಲಿ ಗಮನಾರ್ಹ ಕೆಲಸ ಮಾಡಿದ್ದಾರೆ. ಮೈಕ್ರೋಸಾಫ್ಟ್ ಅವರನ್ನು "ಮೋಸ್ಟ್ ವಾಲ್ಯೂಡ್ ಪ್ರೊಫೆಷನಲ್" ಎಂದು ಗುರುತಿಸಿದೆ.

ಕರ್ನಾಟಕ ಮತ್ತು ಕೇರಳದ ಗಡಿ ಭಾಗದಲ್ಲಿ ಜನಿಸಿದ ಪವನಜ ರವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್ಸಿ. ಪದವಿಯನ್ನು, ಬಾಂಬೆ ವಿ.ವಿ.ಯಿಂದ ಪಿ.ಎಚ್.ಡಿ. ಪದವಿಯನ್ನೂ ಪಡೆದಿದ್ದು, ಮುಂಬೈನ ಭಾಭಾ ಆಣು ವಿಜ್ಞಾನ ಕೇಂದ್ರದಲ್ಲಿ ಬಹಳಷ್ಟು ವರ್ಷ ಕೆಲಸ ಮಾಡಿದ್ದರು. ಇದೀಗ ಮೈಸೂರಿನ ಎಕ್ಸೆಲ್ ಸಾಫ್ಟ್ ನಲ್ಲಿ ಉದ್ಯೋಗಿ. ಕನ್ನಡ ಎಂದರೆ ಪಂಚಪ್ರಾಣ.

English summary
Dr UB Pavanaja, technology evangelist and mentor at Excel-Soft will be talking about Kannada and Information Technology at Suruchi Rangamane, Kuvempu Nagar, Mysore on August 28, Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X