ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋರ್ಬ್ಸ್ ಪಟ್ಟಿಯಲ್ಲಿ ಮತ್ತೆ ಸೋನಿಯಾಗೆ ಸ್ಥಾನ

By Mahesh
|
Google Oneindia Kannada News

Sonia in Forbes Magazine
ವಾಷಿಂಗ್ಟನ್, ಆ.26: ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿರುವ ವಿಶ್ವದ ನೂರು ಮಂದಿ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತೆ ಸ್ಥಾನ ಪಡೆದಿದ್ದಾರೆ.

ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಹಾಗೂ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಫೋರ್ಬ್ಸ್‌ನ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದು, ಸೋನಿಯಾ ಏಳನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ.ಏಳನೆಯ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.

ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ 64ರ ಹರೆಯದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ , ಅಮೆರಿಕ ಪ್ರಥಮ ಮಹಿಳೆ ಮಿಶಿಲ್ ಒಬಾಮರಿಗಿಂತಲೂ ಮುಂದಿದ್ದಾರೆ. ಸಾಫ್ಟ್ ಡ್ರಿಂಕ್ಸ್ ದೈತ್ಯ ಸಂಸ್ಥೆ ಪೆಪ್ಸಿ ಕೋದ ಮುಖ್ಯಸ್ಥೆ ಭಾರತೀಯ ಮೂಲದ ಅಮೆರಿಕನ್ ಮಹಿಳೆ ಇಂದ್ರಾ ನೂಯಿಗೆ ನಾಲ್ಕನೆ ಸ್ಥಾನ ಲಭಿಸಿದೆ.

ತೃತೀಯ ಸ್ಥಾನವನ್ನು ಬ್ರೆಝಿಲ್‌ನ ಮೊದಲ ಮಹಿಳಾ ಅಧ್ಯಕ್ಷೆ ಡಿಲ್ಮಾ ರೂಸೆಫ್ ಪಡೆದಿದ್ದಾರೆ. ನಂತರದ ಸ್ಥಾನವನ್ನು ಫೇಸ್‌ಬುಕ್‌ನ ಸಿಒಒ ಶೆರಿಲ್ ಸ್ಯಾಂಡ್‌ಬರ್ಗ್ ಹಾಗೂ ಬಿಲ್ ಆ್ಯಂಡ್ ಮಿಲಿಂಡಾ ಗೇಟ್ಸ್ ಫೌಂಡೇಶನ್‌ನ ಉಪಾಧ್ಯಕ್ಷೆ ಮಿಲಿಂಡಾ ಗೇಟ್ಸ್ ತಮ್ಮದಾಗಿಸಿಕೊಂಡಿದ್ದಾರೆ.

ಐಸಿಐಸಿಐನ ಕಾರ್ಪೊರೇಟ್ ಎಕ್ಸಿಕ್ಯೂಟಿವ್ ಚಂದ್ರಾ ಕೊಚ್ಚಾರ್ 43ನೆಯ ಸ್ಥಾನದಲ್ಲಿದ್ದರೆ, ಬಯೊಕಾನ್ ನ ಕಿರಣ್ ಮುಜುಂದಾರ್ 99ನೆ ಸ್ಥಾನ ಗಳಿಸಿದ್ದಾರೆ.

ಅತ್ಯುತ್ತಮ ಆರ್ಥಿಕ ಪ್ರಗತಿ ಸಾಧಿಸುವಲ್ಲಿ ಮಹತ್ವದ ಪಾತ್ರವಹಿಸಿರುವ ಸೋನಿಯಾ ಗಾಂಧಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಭ್ರಷ್ಟಾಚಾರ ವನ್ನು ತಡೆಗಟ್ಟುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ಫೋರ್ಬ್ಸ್ ಹೇಳಿದೆ.

English summary
Congress leader, Sonia Gandhi has emerged as the most powerful woman in the world in the Forbes list of "world's most powerful women."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X