ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂ ವಿ ದುರಂತ: 75 ಲಕ್ಷ ಎಲ್ಲ ಕೊಡಬೇಡಿ ಎಂದ ಕೋರ್ಟ್‌

By Srinath
|
Google Oneindia Kannada News

mangalore-crash-kerala-hc-stay-75-lakh-relief
ಕೊಚ್ಚಿ, ಆಗಸ್ಟ್ 26: ಯಾಕಿಂಗಾಯ್ತೋ ಶಿವಾ! 'ನಮ್ಮವರು ನಮ್ಮವರೇ. ವಿದೇಶದಿಂದ ವಿಮಾನದಲ್ಲಿ ಹಾರಿಬಂದರು ಎಂದಾಕ್ಷಣ ಅವರು ಅಂತಾರಾಷ್ಟ್ರೀಯ ಪ್ರಜೆಗಳಾಗುವುದಿಲ್ಲ. ಎಷ್ಟೆಂದರೂ ಅವರು ಸ್ಥಳೀಯರೇ. ಅವರಿಗೆಲ್ಲ 75 ಲಕ್ಷದಷ್ಟು ಪರಿಹಾರ ಕೊಡಬೇಡಿ. ಮಾತುಕತೆ ಮೂಲಕ ಅಷ್ಟೋ ಇಷ್ಟೋ ಕೊಟ್ಟು ಕೈತೊಳೆದುಕೊಳ್ಳಿ' ಎಂದಿದೆ ಕೇರಳ ಹೈಕೋರ್ಟ್‌.

ಅಲ್ಲ, ಮಾಂಟ್ರಿಯಾಲ್ ಅಂತಾರಾಷ್ಟ್ರೀಯ ಒಪ್ಪಂದದ ಪ್ರಕಾರ ಈ ಜಗತ್ತಿನಲ್ಲಿ ವಿಮಾನಾಪಘಾತದಲ್ಲಿ ಯಾರೇ ಮೃತಪಡಲಿ (ಅವರು ಸ್ಥಳೀಯರೋ, ಅಂತಾರಾಷ್ಟ್ರೀಯ ಮಟ್ಟದವರೋ, ಹಸುಗೂಸೋ, ಸಖತ್ ಸಂಬಳ ತರುವ ಉದ್ಯೋಗಿಯೋ ಅಥವಾ ಸಖತ್ ಶ್ರೀಮಂತನೋ ಅಥವಾ ಮುದಕನೋ ಯಾರೇ ಆಗಿರಲಿ) ಅವರಿಗೆ ಅಂದಾಜು 75 ಲಕ್ಷ ರೂ. ಪರಿಹಾರ ನೀಡಲೇಬೇಕು ಎಂಬ ಕಾನೂನು ಇರುವಾಗ ಇದು ಯಾವ 'ನ್ಯಾಯ' ಉಚ್ಛ ನ್ಯಾಯಾಲಯ? ಅಷ್ಟಕ್ಕೂ ಅಪಘಾತ ಪರಿಹಾರ ನೀಡುವುದು ವಿಮಾ ಕಂಪನಿಗಳ ಜವಾಬ್ದಾರಿಯಾಗಿರುವಾಗ ಯಾಕಿಂಗೆ?

ನೈಜ ಹಾನಿಯ ಪರಿಹಾರವಂತೆ!: ಏನಪಾ ಅಂದರೆ, ಮಂಗಳೂರಿನಲ್ಲಿ ಕಳೆದ ವರ್ಷ ಸಂಭವಿಸಿದ್ದ ಏರ್‌ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕರ ಕುಟುಂಬದವರಿಗೆ ತಲಾ 75 ಲಕ್ಷ ರೂ. ಪರಿಹಾರ ನೀಡುವಂತೆ ತನ್ನದೇ ಏಕಸದಸ್ಯ ಪೀಠವೊಂದು ವಿಮಾನ ಸಂಸ್ಥೆಗೆ ನೀಡಿದ್ದ ಆದೇಶವನ್ನು ಕೇರಳ ಹೈಕೋರ್ಟ್ ಗುರುವಾರ ರದ್ದುಪಡಿಸಿದೆ.

ಏಕಸದಸ್ಯ ಪೀಠದ ಜು. 20ರ ಆದೇಶದ ವಿರುದ್ಧ ಏರ್ ಇಂಡಿಯಾ ಆ. 12ರಂದು ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿತ್ತು.

ನ್ಯಾಯಮೂರ್ತಿಗಳಾದ ಸಿ.ಎನ್. ರಾಮಚಂದ್ರನ್ ನಾಯರ್ ಮತ್ತು ಪಿ.ಎಸ್. ಗೋಪಿನಾಥನ್ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠವು, ಪ್ರಕರಣದಲ್ಲಿ ಮೃತರು ಅಥವಾ ಗಾಯಾಳುಗಳಿಗೆ ಆದ ನೈಜ ಹಾನಿಯನ್ನು ಮಾತ್ರ ಏರ್ ಇಂಡಿಯಾ ಪರಿಹಾರವಾಗಿ ನೀಡಬೇಕೆಂದು ಆದೇಶಿಸಿದೆ. ಈ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಸಂತ್ರಸ್ತರ ಪರ ವಕೀಲ ಕೊಡಾತ್ ಶ್ರೀಧರನ್ ತಿಳಿಸಿದ್ದಾರೆ.

ದುಬೈಯಿಂದ 166 ಪ್ರಯಾಣಿಕರನ್ನು ಹೊತ್ತು ಆಗಮಿಸಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬೋಯಿಂಗ್ 736-800 ವಿಮಾನವು 2010ರ ಮೇ 22ರಂದು ಮಂಗಳೂರಿನ ಬಜಪೆ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೊಳಗಾಗಿ 158 ಮಂದಿ ಸಾವನ್ನಪ್ಪಿದ್ದರು.

English summary
Mangalore crash: A division bench of the Kerala High Court on Thursday stayed a single bench order which had directed the Air India to pay compensation of at least Rs 75 lakh each to the families of 158 victims of the 2010 Mangalore air crash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X