ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ಡಿಗಳ ವಿರುದ್ಧ ಯಾವ ಪ್ರಕರಣದಲ್ಲಿ ವಾರಂಟ್ ಜಾರಿಯಾಗಿತ್ತು?

By Srinath
|
Google Oneindia Kannada News

reddys-warrant-police-suggalamma-temple-case
ಬೆಂಗಳೂರು, ಆಗಸ್ಟ್ 25: ಆಂಧ್ರದ ಗಡಿ ಭಾಗದಲ್ಲಿರುವ ಓಬಳಾಪುರಂ ಗ್ರಾಮದಲ್ಲಿ ಸುಗ್ಗಲಮ್ಮ ಸುಗ್ಗಲಮ್ಮ ಗುಡಿಯನ್ನು ನೆಲಸಮ ಮಾಡಿ ಆಂಧ್ರ ಹಾಗೂ ಕರ್ನಾಟಕ ಗಡಿಯನ್ನು ಒತ್ತುವರಿ ಮಾಡಿರುವ ಸಂಬಂಧ 2009ರಲ್ಲಿ ಆಗಿನ ಸಚಿವ ಜನಾರ್ದನ ರೆಡ್ಡಿ, ಬಿ. ಶ್ರೀರಾಮುಲು ಹಾಗೂ ಮತ್ತಿತರರ ವಿರುದ್ಧ ಸ್ಥಳೀಯರು ಸಂಡೂರು ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖುದ್ದು ನ್ಯಾಯಾಲಯಕ್ಕೆ ಹಾಜರಾಗಲು ಜನಾರ್ದನ ರೆಡ್ಡಿಗೆ ಸಂಡೂರು ನ್ಯಾಯಾಲಯ 9 ಬಾರಿ ವಾರೆಂಟ್‌ ಜಾರಿಗೊಳಿಸಿತ್ತು. ಆದರೆ ನ್ಯಾಯಾಲಯದ ಆದೇಶಕ್ಕೆ ಜನಾರ್ದನ ರೆಡ್ಡಿ ಕಿಮ್ಮತ್ತು ನೀಡಿರಲಿಲ್ಲ. ನನಗೆ ಯಾವುದೇ ವಾರೆಂಟ್‌ ಜಾರಿಯಾಗಿಲ್ಲ. ಪೊಲೀಸರಿಂದಲೂ ಮಾಹಿತಿ ಇಲ್ಲ ಎಂದು ಹೇಳಿಕೊಂಡಿದ್ದರು.

ನ್ಯಾಯಾಲಯದ ಆದೇಶಕ್ಕೆ ಆಗೌರವ ತೋರಿರುವುದರಿಂದ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿ ವಕೀಲ ಜಿ.ಆರ್‌. ಮೋಹನ್‌ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಜನಾರ್ದನ ರೆಡ್ಡಿ ವಿರುದ್ಧ ಸಂಡೂರು ನ್ಯಾಯಾಲಯ ಹೊರಡಿಸಿದ್ದ ವಾರೆಂಟ್‌ ಯಾವ ಕಾರಣಕ್ಕೆ ಜಾರಿಯಾಗಿಲ್ಲ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಿ ಪ್ರಮಾಣಪತ್ರ ಸಲ್ಲಿಸುವಂತೆ ವಿಭಾಗೀಯ ಪೀಠ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಎಂ. ಜಾಮ್‌ದಾರ್‌ ಬುಧವಾರ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದರು.

ವಾರೆಂಟ್‌ ಜಾರಿ ಮಾಡುವಲ್ಲಿ ಪೊಲೀಸರು ವಿಫ‌ಲವಾಗಿರುವುದರಿಂದ ಮಾಜಿ ಸಚಿವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆದರೆ ವಾರೆಂಟ್‌ ಜಾರಿ ಮಾಡದೆ ನಿರ್ಲಕ್ಷ್ಯ ತೋರಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ಯರ್ಥಪಡಿಸಲಾಯಿತು.

English summary
Warrant to Reddy brothers-HC directs action on police: The case was destruction and encrochment of Suggalamma Temple in Bellary District in 2009
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X