ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ: ನಾಯಿಗೆ ಹೆದರಿ ಸಾವಿರ ಮೊಲಗಳ ದಾರುಣ ಸಾವು

By Srinath
|
Google Oneindia Kannada News

dogs-scare-rabbits-to-death-china
ಬೀಜಿಂಗ್, ಆಗಸ್ಟ್ 24: ಪೂರ್ವ ಚೀನಾದ ಹ್ಯಾಕ್ಸಿನ್ ಗ್ರಾಮದ ತೋಟವೊಂದದಲ್ಲಿ ಮೂರು ನಾಯಿಗಳು ನುಗ್ಗಿದ್ದರಿಂದ ಭಯಬಿದ್ದ 1000 ಮೊಲಗಳು ಸಾವನ್ನಪ್ಪಿದ ದಾರುಣ ಘಟನೆ ಕಳೆದ ವಾರ ವರದಿಯಾಗಿದೆ.

ಹೆಕ್ಸಿನ್ ಎಂಬ ಗ್ರಾಮದಲ್ಲಿ ನಾಯಿಗಳು ಮೊಲಗಳ ಸಾಕಾಣಿಕೆ ಕೇಂದ್ರಕ್ಕೆ ನುಗ್ಗಿದಾಗ 1000 ಮೊಲಗಳು ಸತ್ತಿವೆ. ಅವುಗಳಲ್ಲಿ 600 ಮೊಲಗಳಿಗೆ ಯಾವುದೇ ಗಾಯಗಳಾಗಿರಲಿಲ್ಲ. ಕೇವಲ ಭಯಬಿದ್ದು, ಒತ್ತಡದಿಂದಾಗಿ ಮೃತಪಟ್ಟಿವೆ ಎಂದು ಪಶುವೈದ್ಯರು ತಿಳಿಸಿದ್ದಾರೆ.

'ಪ್ರಾಣಿಗಳಲ್ಲಿನ ಒತ್ತಡ'ದಿಂದ ಇವು ಮೃತಪಟ್ಟಿವೆ. ಮೊಲಗಳು ಭಯಬಿದ್ದಾಗ, ಆಂಡ್ರಿಲೈನ್ ಗ್ರಂಥಿ ಸಾಕಷ್ಟು ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ. ಇದು ಮೊಲಗಳ ನರವ್ಯೂಹ ವ್ಯವಸ್ಥೆಯನ್ನು ಉದ್ರೇಕಿಸುತ್ತದೆ. ಹಾಗಾಗಿ ಹೃದಯ ಬಡಿತ ಹೆಚ್ಚಾಗುತ್ತದೆ. ದೇಹದ ಅವಯವಗಳು ಕಾರ್ಯ ನಿರ್ವಹಿಸುವಲ್ಲಿ ತಪ್ಪುತ್ತವೆ. ಮೊಲಗಳು ಈ ಭಯದಿಂದಾಗಿಯೇ ಸಾವನ್ನಪ್ಪಿವೆ ಎಂದು ಪಶುಪಾಲನಾ ತಜ್ಞ ಚೆನ್ ಡಾಕ್ಸಿಯಾಂಗ್ ಹೇಳಿದ್ದಾರೆ.

English summary
Three dogs broke into a rabbit farm in a village in Zhejiang province in China and scared 1000 rabbits to death. An expert with the local animal husbandry bureau, said the deaths were the result of the animals' stress response.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X