ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐನಿಂದ ಬಚಾವ್ ಆಗಲು ಜಗನ್ ವಾಸ್ತುಗೆ ಮೊರೆ

By Mahesh
|
Google Oneindia Kannada News

YS Jagan Mohan Reddy
ಕಡಪ, ಆ.24: ದೇಶದಾದ್ಯಂತ ಸಿಬಿಐ ನಡೆಸುತ್ತಿರುವ ಸತತ ದಾಳಿಯಿಂದ ವೈಎಸ್ ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಸಹಜವಾಗಿ ಕಂಗಾಲಾಗಿದ್ದಾರೆ. ಹೇಗಾದರೂ ಮಾಡಿ ಬಂಧನದಿಂದ ತಪ್ಪಿಸಿಕೊಳ್ಳಲು ಅನೇಕ ಮಾರ್ಗೋಪಾಯಗಳನ್ನು ಹುಡುಕತೊಡಗಿದ್ದಾರೆ.

ತಮ್ಮ ಹಾಗೂ ತಂದೇ ರಾಜಶೇಖರ ರೆಡ್ಡಿ ಬೆಂಬಲಿಗ ಶಾಸಕರು ಹಾಗೂ ಸಂಸದರು ರಾಜೀನಾಮೆ ನೀಡುವಂತೆ ಮಾಡುವಲ್ಲಿ ಯಶಸ್ವಿಯಾದ ಜಗನ್ ಈಗ ಮತ್ತೊಂದು ಪ್ರಯೋಗ ನಡೆಸುತ್ತಿದ್ದಾರೆ. ಕೋರ್ಟ್ ಸಹ ಜಾಮೀನು ನೀಡಲು ನಿರಾಕರಿಸುವ ಲಕ್ಷಣಗಳು ಕಂಡು ಬಂದಿರುವುದರಿಂದ ವಾಸ್ತು ಶಾಸ್ತ್ರಕ್ಕೆ ಮೊರೆ ಹೊಕ್ಕಿದ್ದಾರೆ.

ವಾಸ್ತು ರಕ್ಷಣೆ : ಜಗನ್ ತಲೆ ಮೇಲೆ ಕೈ ಇಟ್ಟಿರುವ ವಾಸ್ತು ಶಾಸ್ತಜ್ಞರು, ಸದ್ದಿಲ್ಲದೆ ಪುಲಿವೆಂದುಲದ ಜಗನ್ ನಿವಾಸದಲ್ಲಿ ಸಣ್ಣ ಪುಟ್ಟ ರಿಪೇರಿ ಮಾಡಿ, ಭಾರಿ ಮೊತ್ತದ ಸಂಭಾವನೆ ತಮ್ಮ ಜೋಳಿಗೆಯಲ್ಲಿ ತುಂಬಿಸಿಕೊಂಡು ಹೊರನಡೆದಿದ್ದರಂತೆ. [ಇನ್ನೊಂದು ಬಂಗಲೆ ವಿವರ ನೋಡಿ]

ಸುಮಾರು 45,000 ಚದರ ಅಡಿ ವಿಸ್ತೀರ್ಣದ ಬಂಗಲೆಯ ಮುಖ್ಯದ್ವಾರದ ಗೇಟ್ ಪೂರ್ವಾಭಿಮುಖವಾಗಿತ್ತು. ಈಗ ಇದನ್ನು ಕೆಡವಿ ಉತ್ತರ ದಿಕ್ಕಿನಲ್ಲಿ ಹೊಸ ಗೇಟ್ ಸ್ಥಾಪಿಸಲಾಗಿದೆ. ಜಗನ್ ಅವರ ಜನ್ಮ ನಕ್ಷತ್ರ, ರಾಶಿ ಅನುಗುಣವಾಗಿ ಪೂರ್ವ ದಿಕ್ಕಿಗಿಂತ, ಉತ್ತರ ದಿಕ್ಕು ಹೆಚ್ಚು ಶ್ರೇಯಸ್ಸು ಎನ್ನಲಾಗಿದೆ.

ಪೂರ್ವ ದಿಕ್ಕಿನಿಂದ ಎಲ್ಲವೂ ಶುಭಕರ ಕಿರಣಗಳೇ ಬರುವುದರಿಂದ ಮನೆ ಯಜಮಾನ ವಾಮಮಾರ್ಗದಿಂದ ಗಳಿಸಿದ ಸಂಪತ್ತು ಕರಗುವುದಂತೆ.

ಉತ್ತರ ದಿಕ್ಕಿನಿಂದ ಗೇಟ್ ಇದ್ದು, ದಕ್ಷಿಣಾಭಿಮುಖವಾಗಿ ಯಾವುದೇ ದಾಳಿ ನಡೆದರೂ ಜಗನ್ ಗೆ ಯಾವುದೇ ಬಾಧಕವಲ್ಲ ಎಂದು ವಾಸ್ತು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸುದ್ದಿ ತಿಳಿದ ಸಿಬಿಐ ಅಧಿಕಾರಿಗಳು ಗಹಗಹಿಸಿ ನಕ್ಕು ತಮ್ಮ ದಾಳಿ ಮುಂದುವರೆಸಿದ್ದಾರೆ ಎಂಬುದು ಮೂಲಗಳಿಂದ ಸಿಕ್ಕ ಸುದ್ದಿ.

English summary
In order to escape from being arrested YS Jagan is seeking help of Vastu Shastra. Jagan has altered his house slightly to get good will. Meanwhile CBI is continuing raids on YS Jagan Mohan's firms and business establishments across India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X