ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಥಾಯಿ ಸಮಿತಿ ಎಂದರೇನು, ಅದರ ಕಾರ್ಯವ್ಯಾಪ್ತಿ ಏನು?

By Srinath
|
Google Oneindia Kannada News

standing-committee-frame-work-jan-lokpal
ನವದೆಹಲಿ, ಆಗಸ್ಟ್ 24: ಲೋಕಸಭೆಯಲ್ಲಿ ಸರ್ಕಾರ ಇತ್ತೀಚಿಗೆ ಮಂಡಿಸಿದ ಲೋಕಪಾಲ ಕರಡು ಮಸೂದೆಯನ್ನು ಸಂಸತ್ತಿನ ಸಿಬ್ಬಂದಿ, ಸಾರ್ವಜನಿಕ ಅಹವಾಲು, ಕಾನೂನು ಮತ್ತು ಸುವ್ಯವಸ್ಥೆ ಕುರಿತಾದ ಸ್ಥಾಯಿ ಸಮಿತಿಗೆ ವಹಿಸಲಾಗಿದೆ. ಸ್ಥಾಯಿ ಸಮಿತಿ ಕರಡು ಮಸೂದೆಯನ್ನು ಪರಿಶೀಲಿಸಿ ಸಂಸತ್ತಿಗೆ ತನ್ನ ವರದಿ ಸಲ್ಲಿಸಲಿದೆ.

ಈ ಹಿನ್ನೆಲೆಯಲ್ಲಿ Parliamentary Standing committee ಕಾರ್ಯವೈಖರಿ ಬಗ್ಗೆ ಒಂದಷ್ಟು ಮಾಹಿತಿ:

ಸ್ಥಾಯಿ ಸಮಿತಿ ಎಂದರೇನು?: ಸಂಸತ್ತಿನ ಉಭಯ ಸದನಗಳ ಸದಸ್ಯರನ್ನು ಒಳಗೊಂಡ ಸಮಿತಿಗಳನ್ನು ಸಂಸದೀಯ ಸಮಿತಿ ಎನ್ನಲಾಗುತ್ತದೆ. ಇದರಲ್ಲಿ 2 ವಿಧ. ಒಂದು ತಾತ್ಕಾಲಿಕ ಸಮಿತಿ. ಇದು ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ವರದಿ ನೀಡುತ್ತದೆ. ಆ ಬಳಿಕ ಸಮಿತಿ ತಂತಾನೆ ವಿಸರ್ಜನೆಗೊಳ್ಳುತ್ತದೆ. ಇನ್ನೊಂದು ಸ್ಥಾಯಿ ಸಮಿತಿ.

ಪ್ರತಿ ಸ್ಥಾಯಿ ಸಮಿತಿ ತಲಾ 31 ಸದಸ್ಯರನ್ನು ಹೊಂದಿರುತ್ತದೆ. ಸದನದಲ್ಲಿ ಪಕ್ಷಗಳ ಬಲಾಬಲ ಆಧರಿಸಿ ಸಮಿತಿಯಲ್ಲಿ ಆಯಾ ಪಕ್ಷಗಳಿಗೆ ಸ್ಥಾನ ನಿಗದಿ ಮಾಡಲಾಗಿರುತ್ತದೆ. ಇದರ ಸದಸ್ಯರನ್ನು ಕಾಲಾನುಕಾಲಕ್ಕೆ ನೇಮಿಸಲಾಗುತ್ತದೆ. ಸಂಸತ್ತಿನಲ್ಲಿ ಒಟ್ಟು 24 ಸ್ಥಾಯಿ ಸಮಿತಿಗಳಿವೆ.

ಈ ಪೈಕಿ 8 ರಾಜ್ಯಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಮತ್ತು 16 ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಇರುತ್ತವೆ. ಗೃಹ, ಹಣಕಾಸು, ವಿದೇಶಾಂಗ ವ್ಯವಹಾರಗಳ ಕುರಿತಾದ ಸಮಿತಿಯ ಅಧ್ಯಕ್ಷತೆಯನ್ನು ಸಾಮಾನ್ಯವಾಗಿ ವಿರೋಧ ಪಕ್ಷದ ಹಿರಿಯ ನಾಯಕರಿಗೆ ನೀಡಲಾಗುತ್ತದೆ.

ಲೋಕಪಾಲ ಕುರಿತ ಸ್ಥಾಯಿ ಸಮಿತಿ: ಲೋಕಪಾಲ ಕುರಿತು ಪರಿಶೀಲನೆ ನಡೆಸಲಿರುವ ಸ್ಥಾಯಿ ಸಮಿತಿಯಲ್ಲಿ 31 ಸದಸ್ಯರು ಇದ್ದಾರೆ. ಈ ಪೈಕಿ 10 ರಾಜ್ಯಸಭಾ ಮತ್ತು 21 ಲೋಕಸಭಾ ಸದಸ್ಯರು. ಆದರೆ ಈ ಪೈಕಿ 6 ಸ್ಥಾನ ಖಾಲಿ ಇವೆ.

ಸಮಿತಿ ಕಾರ್ಯನಿರ್ವಹಣೆ: ಸಮತಿ ತನ್ನ ಬಳಿಗೆ ಬಂದಿರುವ ಕರಡು ಮಸೂದೆ ಬಗ್ಗೆ ಚರ್ಚಿಸುತ್ತದೆ. ತಜ್ಞರು, ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸುತ್ತೆ. ಅಂತಿಮವಾಗಿ ಈ ಕುರಿತ ವರದಿ ಸಿದ್ಧಪಡಿಸುತ್ತದೆ. ಸಮಿತಿಯ ನಿರ್ಧಾರ ಬಹುತೇಕ ಸಹಮತದ ಮೂಲಕವೇ ಅಂಗೀಕಾರವಾಗಬೇಕು ಎನ್ನುತ್ತದೆ ಕಾನೂನು.

ಒಂದು ವೇಳೆ ಸಮಿತಿಯ ಯಾವುದೇ ಸದಸ್ಯ ಮಸೂದೆಗೆ ವಿರೋಧ ವ್ಯಕ್ತಪಡಿಸಿದರೆ ಅದನ್ನೂ ವರದಿಯಲ್ಲಿ ದಾಖಲಿಸುವುದು ಕಡ್ಡಾಯ. ಈ ವರದಿಯ ಶಿಫಾರಸನ್ನು ಒಪ್ಪಲೇಬೇಕೆಂಬ ಕಾನೂನು ಇಲ್ಲ. ಸ್ಥಾಯಿ ಸಮಿತಿಯಲ್ಲಿ ಕೈಗೊಳ್ಳುವ ನಿರ್ಧಾರಗಳು ಬಹುಮತದ ಆಧಾರದಲ್ಲೇ ಆಗಿರುತ್ತದೆ.

English summary
In the back drop of Lokpal Bill presented to Parliamentary Standing Committee, here is a brief note on the fonctioning of the Committe and its frame work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X