ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಕಾಗೇರಿ ಬಾಯಲ್ಲಿ ಅಲ್ಲಾಹು ಅಕ್ಬರ್

By Mahesh
|
Google Oneindia Kannada News

Minister Kageri Chants Allahu Akbar
ಶಿರಸಿ ಆ.24: ಸರ್ಕಾರಿ ಶಾಲೆಯಲ್ಲಿ ಭಗವದ್ಗೀತೆ ಪಠನ, ಪ್ರವಚನ ಹೇರಿ ಸರ್ವಜನರ ವಿರೋಧ ಕಟ್ಟಿಕೊಂಡಿದ್ದ ಸಚಿವ ಕಾಗೇರಿ ಅವರು ಮಂಗಳವಾರ 'ಅಲ್ಲಾಹು ಅಕ್ಬರ್' ಎಂದು ಕರೆ ನೀಡಿದರು.

ಭಗವದ್ಗೀತೆಗೆ ಹೋಲಿಸಿದಲ್ಲಿ ಕುರಾನ್ ಕೂಡ ಪವಿತ್ರ ಗ್ರಂಥವಾಗಿದೆ. ಜೀವನ ಸಾರ್ಥಕತೆ ಪಡೆಯಲು ಎರಡು ಮಹಾನ್ ಗ್ರಂಥಗಳ ಪಠನ, ಪ್ರವಚನ, ಪ್ರಚಾರ ಅತ್ಯಗತ್ಯ ಎಂದು ಹೇಳಿದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗ್ಡೆ ಕಾಗೇರಿ ಜಾರುತ್ತಿದ್ದ ಮುಸ್ಲಿಮ್ ಟೋಪಿಯನ್ನು ಸರಿಪಡಿಸಿಕೊಂಡರು.

ಶಿರಸಿಯ ಕಸ್ತೂರಬಾ ನಗರದ 14ನೇ ವಾರ್ಡಿನ ಘರೀಬ ನವಾಜ್ ಮಸೀದಿ ಸರ್ಕಲ್‌ನಲ್ಲಿ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ವತಿಯಿಂದ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು.

ಭಗದ್ಗೀತೆಯಂತೆ ಕುರಾನ್ ನಲ್ಲಿರುವ ತತ್ವಾದರ್ಶಗಳನ್ನು ಪಾಲಿಸಿದಲ್ಲಿ ಜೀವನ ಸಾರ್ಥಕವಾಗುತ್ತದೆ. ಕುರಾನ್ ನಲ್ಲಿ ಆದರ್ಶ ಜೀವನಕ್ಕೆ ಬೇಕಾಗಿರುವ ಸಂದೇಶಗಳಿದ್ದು, ಅದನ್ನು ತಿಳಿಯದವರು ತಪ್ಪು ಕೆಲಸಕ್ಕೆ ಕೈ ಹಾಕುತ್ತಾರೆ. ಅಲ್ಲಾಹು ಎಲ್ಲಿಯೂ ತಪ್ಪು ಸಂದೇಶ ನೀಡಿಲ್ಲ ಎಂದ ಕಾಗೇರಿ ಹೇಳಿದರು.

ಹಿಂಸಾ ಮಾರ್ಗವನ್ನು ಬಿಟ್ಟು ಸಹಬಾಳ್ವೆಯ ಜೀವನ ಮಾಡಬೇಕು. ಮುಸ್ಲಿಮ್ ಬಾಂಧವರು ಪವಿತ್ರವಾಗಿರುವ ಹಾಗೂ ಶಾಂತಿ ಸಂದೇಶ ಸಾರುವ ರಂಜಾನ್ ಹಬ್ಬದಲ್ಲಿ ಉಪವಾಸ ಮಾಡಿ ತಮ್ಮ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು ನಿಜಕ್ಕೂ ಶ್ಲಾಘನೀಯ ಎಂದು ಸಚಿವ ಕಾಗೇರಿ ಅಭಿಪ್ರಾಯಪಟ್ಟರು.

English summary
Primary Education Minister Kageri chanted Allahu Akbar and praised Ramadan, Quran values in Iftar Party organized by BJP minority yuva morcha in Sirsi. Earlier Kageri tried to impose Bhagadvad Gita Preaching in Government school
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X