ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟಾದಿಂದ ಕಾಮಪ್ರಚೋದಕ ವೆಬ್ ಸೈಟ್

By Prasad
|
Google Oneindia Kannada News

ಖ್ಯಾತನಾಮರನೇಕರನ್ನು ಬೆತ್ತಲೆ ನಿಲ್ಲಿಸಿ ಪ್ರಾಣಿ ಹತ್ಯೆಯ ವಿರುದ್ಧ ಹೋರಾಟ ನಡೆಸುತ್ತಿರುವ ಅಮೆರಿಕಾದ ವರ್ಜೀನಿಯಾ ಮೂಲದ ಪ್ರಾಣಿ ಹಕ್ಕು ಸಂಘಟನೆ ಪೆಟಾ (People for the Ethical Treatment of Animals) ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಕಾರ್ಯಸಾಧನೆಗಾಗಿ ಕಾಮಪ್ರಚೋದಕ ವೆಬ್ ಸೈಟನ್ನು ಪ್ರಾರಂಭಿಸುವ ಮಹತ್ತರ ಯೋಜನೆಯನ್ನು ಹಾಕಿಕೊಂಡಿದೆ.

ಸೆಲೆಬ್ರಿಟಿಗಳಿಗೆ ತರಕಾರಿಯ ಬಿಕಿನಿಯನ್ನು ತೊಡಿಸಿ ಅಥವಾ ಮಾನ ಮುಚ್ಚುವಂಥ ಅತಿ ಕಡಿಮೆ ದಿರಿಸು ಧರಿಸುವಂತೆ ಮಾಡಿ, ಮಾಂಸಾಹಾರವನ್ನು ತ್ಯಜಿಸಿ ಸಸ್ಯಾಹಾರವನ್ನು ಅಪ್ಪಿಕೊಳ್ಳಿ ಎಂದು ಜಾಗತಿಕ ಹೋರಾಟ ನಡೆಸುತ್ತಿದೆ ಪೆಟಾ. ಈಗ ಆ ತರಕಾರಿ ಬಿಕಿನಿಗಳನ್ನು ಕೂಡ ಮೇಕೆಗೆ ಮೇವು ಹಾಕಿಸಿ ಪ್ರಾಣಿ ಹತ್ಯೆಯ ವಿರುದ್ಧ ಹೋರಾಟಕ್ಕಿಳಿಯಲಿದೆ ಪೆಟಾ.

.xxx ಡೊಮೇನ್ ಗಳು ಲಭ್ಯವಾಗಿರುವುದು ಪೆಟಾಗೆ ಅನುಕೂಲವಾಗಿ ಬಂದಿದೆ. ಸಸ್ಯಾಹಾರದ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವುದು ಮತ್ತು ತುಪ್ಪಳ ವಿರೋಧಿ ಚಳವಳಿಗೆ ಇಂಬು ನೀಡುವುದು ಪೆಟಾದ ಯೋಜನೆಗಳಲ್ಲೊಂದಾಗಿದೆ. ಈ ವೆಬ್ ಸೈಟ್ ಮುಖಾಂತರ ಅತ್ಯಂತ ಪರಿಣಾಮಕಾರಿಯಾಗಿ ಜನರನ್ನು ವೈಯಕ್ತಿಕವಾಗಿ ಪ್ರೇರೇಪಿಸಲು ಸಾಧ್ಯ ಎನ್ನುವುದು ಪೆಟಾದ ಅಭಿಪ್ರಾಯ.

English summary
People for the Ethical Treatment of Animals (PETA) intends to launch pornographic website to wage war against animal slaughter. PETA feels xxx porn site it can reach to individuals and grab people's attention.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X