ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಸರು ಕುಡಿಕೆ ಉತ್ಸವಕ್ಕೆ ಶಿವಮಣಿ ಡ್ರಮ್ ಮೆರಗು

By * ಚಿದಂಬರ ಬೈಕಂಪಾಡಿ, ಮಂಗಳೂರು
|
Google Oneindia Kannada News

Krishna Janmashtami in Udupi1
ಮಂಗಳೂರು, ಆ. 23 : ಪೊಡವಿಗೊಡೆಯ ಕೃಷ್ಣನ ನೆಪದ ಮೊಸರು ಕುಡಿಕೆ ಉತ್ಸವ ಕರಾವಳಿಯಲ್ಲಿ ಸೋಮವಾರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು. ಉಡುಪಿಯಲ್ಲಿ ಪರ್ಯಾಯ ಪೀಠಾಧೀಶ ಲಕ್ಷ್ಮೀವರ ತೀರ್ಥರ ಸಾರಥ್ಯದಲ್ಲಿ ಕೃಷ್ಣನ ವಿಗ್ರಹದ ವಿನೂತನ ಪೂಜಾ ಕೈಂಕರ್ಯಗಳೊಂದಿಗೆ ಸಹಸ್ರಾರು ಮಂದಿಯ ಸಮ್ಮುಖದಲ್ಲಿ ವೈಭವಯುತವಾಗಿ ನಡೆಯಿತು.

ಉಡುಪಿಯಲ್ಲಿ ಶಿವಮಣಿ : ಈ ಬಾರಿ ಸಾರ್ವಜನಿಕರಿಗೆ ಉಂಡೆ ಚಕ್ಕುಲಿಯ ಬದಲು ಬಾಳೆಹಣ್ಣುಗಳನ್ನು ವಿತರಿಸಲಾಯಿತು. ನಾಣ್ಯ, ನೋಟು ಹಾಗೂ ಟೋಪಿಗಳನ್ನು ನೆರೆದಿದ್ದ ಭಕ್ತರಿಗೆ ವಿತರಿಸಿದ್ದು ವಿಶೇಷ. ಖ್ಯಾತ ಡ್ರಮ್ ವಾದಕ ಶಿವಮಣಿ ಇದೇ ಮೊದಲ ಬಾರಿಗೆ ಉಡುಪಿ ವಿಟ್ಲಪಿಂಡಿ ಉತ್ಸವದಲ್ಲಿ ಡ್ರಮ್ ವಾದನ ಸೇವೆ ಸಲ್ಲಿಸುವ ಮೂಲಕ ಗಮನ ಸೆಳೆದರು. ಶಿವಮಣಿ ಅವರಿಗೆ ಲಕ್ಷ್ಮೀವರ ತೀರ್ಥರು 108 ಗ್ರಾಂ ತೂಕದ ಚಿನ್ನದ ಸರ ನೀಡಿ ಗೌರವಿಸಿದರು.

ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಸೇರಿದಂತೆ ಕರಾವಳಿಯಲ್ಲಿ ಅಟ್ಟೆ ಮಡಿಕೆ ಒಡೆಯುವುದು, ಉದ್ದಕಂಬ ಏರುವುದು, ವಿವಿಧ ಆಟೋಟ ಸ್ಪರ್ಧೆಗಳು, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಮಂಗಳೂರಿನ ಕದ್ರಿ, ಅತ್ತಾವರ, ತೊಕ್ಕೂಟ್ಟು, ಕಾವೂರು, ಉರ್ವಾದಲ್ಲಿ ಮೊಸರು ಕುಡಿಕೆ ಉತ್ಸವ ವಿಜೃಂಭಣೆಯಿಂದ ಜರಗಿತು. ಶ್ರೀಕೃಷ್ಣ ದೇವರ ಭಾವಚಿತ್ರ, ವಿಗ್ರಹದ ಭವ್ಯ ಶೋಭಾಯಾತ್ರೆಯಲ್ಲಿ ಸಹಸ್ರಾರು ಮಂದಿ ಭಾಗವಹಿಸಿದರು. ವೈವಿಧ್ಯಮಯ, ಆಕರ್ಷಕ ಟ್ಯಾಬ್ಲೋಗಳು, ಹುಲಿ ವೇಷ ಸೇರಿದಂತೆ ವಿವಿಧ ವೇಷಗಳು ಶೋಭಾಯಾತ್ರೆಗೆ ಮೆರಗು ನೀಡಿದವು.

ಕುಳಾಯಿ, ಕಾವೂರು, ಕಾಟಿಪಳ್ಳ, ಚಿತ್ರಾಪುರ, ಪಾವಂಜೆ, ಕಿನ್ನಿಗೋಳಿ, ಅತ್ತೂರು- ಕಾಫಿಕಾಡ್‌, ಮಳಲಿ, ಮೂಲ್ಕಿ, ಗಂಜಿಮಠ, ಗುರುಪುರ, ಸುಂಕದಕಟ್ಟೆ ಸೇರಿದಂತೆ ತಾಲೂಕಿನ ವಿವಿಧೆಡೆಗಳಲ್ಲಿ ಮೊಸರುಕುಡಿಕೆ ಉತ್ಸವ ಅದ್ದೂರಿಯಿಂದ ಜರಗಿತು. ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ತಾಲೂಕಿನಲ್ಲೂ ಅಲ್ಲಲ್ಲಿ ಮೊಸರುಕುಡಿಕೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು.

English summary
Mosaru Kudike Utsava or Dahi Handi festival was celebrated in Udupi and other cities of coastal Karnataka on the occasion of Sri Krishna Janmashtami on August 22. Famous drummer Shivamani visited Udupi Srikrishna Mutt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X