ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಹೈಸ್ಪೀಡ್ ರೈಲುಗಳ ಓಡಾಟಕ್ಕೆ ಬ್ರೇಕ್

By Mahesh
|
Google Oneindia Kannada News

China stops high speed train service
ಶಾಂಘೈ ಆ.23 : ಹೈಸ್ಪೀಡ್ ರೈಲುಗಳ ಓಡಾಟವನ್ನು ಇನ್ನಷ್ಟು ಕಡಿಮೆಗೊಳಿಸುವದಾಗಿ ಚೀನಾದ ರೈಲ್ವೇ ಇಲಾಖೆ ತಿಳಿಸಿದೆ. ಚೀನಾದ ರೈಲ್ವೇ ಇಲಾಖೆಯ ಹೈಸ್ಪೀಡ್ ಬುಲೆಟ್ ರೈಲುಗಳಲ್ಲಿ ಸುರಕ್ಷತೆಯ ಕೊರತೆ ಇದೆ ಎಂದು ಪತ್ರಿಕೆಯೊಂದು ಬಹಿರಂಗ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿದ್ದಾರೆ .

ಕಳೆದ ಜುಲೈ 23 ರಂದು ಸಂಭವಿಸಿದ ಬುಲೆಟ್ ರೈಲುಗಳ ಡಿಕ್ಕಿಯಿಂದಾಗಿ ಸುಮಾರು 23 ಜನರು ಮೃತಪಟ್ಟು 200ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

ಆಗಸ್ಟ್ 28 ರಿಂದ 18 ಹೈ ಸ್ಪೀಡ್ ರೈಲುಗಳ ಓಡಾಟವನ್ನು ಸ್ಥಗಿತಗೊಳಿಸಲಿದೆ ಎಂದು ಶಾಂಘೈನ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಅಪಘಾತದ ನಂತರ ಅಧಿಕಾರಿಗಳು ರೈಲಿನ ವೇಗವನ್ನೂ ನಿಧಾನಗೊಳಿಸಿದ್ದಾರೆ.

ಚೀನಾದ ಸರ್ಕಾರೀ ಸ್ವಾಮ್ಯದ ಕಂಪೆನಿ ಸಿಎನ್‌ಆರ್ ಕಾರ್ಪ್ ನಿರ್ಮಿಸಿದ ರೈಲಿನ ಆಕ್ಸೆಲ್ ನಲ್ಲಿ 7.1 ಮಿಮಿ ಉದ್ದ ಹಾಗೂ 2.4 ಮಿಮಿ ಎತ್ತರದ ಬಿರುಕು ಇರುವುದು ಪತ್ತೆ ಆಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದ್ದು ಕಂಪೆನಿ ಇದನ್ನು ತಳ್ಳಿ ಹಾಕಿದೆ.

ಆದರೆ ಕಂಪೆನಿ ಶಾಂಘಾಯ್ ನಿಂದ ಬೀಜಿಂಗ್ ನಡುವೆ ಓಡಾಟ ನಡೆಸುತಿದ್ದ 54 ರೈಲುಗಳ ಪ್ರಯಾಣವನ್ನು ರದ್ದುಗೊಳಿಸಿರುವದು ಈ ಆರೋಪಕ್ಕೆ ಪುಷ್ಟಿ ನೀಡುತ್ತಿದೆ.

ಚೀನಾ ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಮಾರ್ಗ ಹಾಗೂ ವೇಗದ ರೈಲುಗಳನ್ನು ಹೊಂದಿದ್ದು ಅಪಘಾತದ ಕಾರಣದಿಂದಾಗಿ ರೈಲುಗಳ ಸ್ಥಗಿತ ಸರ್ಕಾರಕ್ಕೆ ಮುಜುಗರವನ್ನು ಉಂಟು ಮಾಡಿದೆ.

English summary
Shanghai Railway Station and Beijing station has decided to slow down and stop high-speed train service. This move is taken after a magazine published a big safety flaw in bullet trains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X