ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾದಗಿರಿ ನಿರುದ್ಯೋಗಿಗಳ ಆಶಾಕಿರಣ ಈ ಮೇಳ

By Prasad
|
Google Oneindia Kannada News

BN Bache Gowda and Raju Gowda distribute certificate at Job fair
ಯಾದಗಿರಿ, ಆ. 22 : ಮುಂದಿನ 5 ವರ್ಷಗಳಲ್ಲಿ ಹತ್ತು ಲಕ್ಷ ಜನರಿಗೆ ತರಬೇತಿ ನೀಡಿ ಉದ್ಯೋಗಾವಕಾಶ ಒದಗಿಸುವ ಮಹತ್ವಕಾಂಕ್ಷೆ ಯೋಜನೆಯನ್ನು ಸರಕಾರ ಹಾಕಿಕೊಂಡಿದೆ ಎಂದು ಕಾರ್ಮಿಕ ಮತ್ತು ರೇಷ್ಮೆ ಸಚಿವರಾದ ಬಿ.ಎನ್. ಬಚ್ಚೇಗೌಡ ಹೇಳಿದ್ದಾರೆ.

ಅವರು ಜವಾಹರ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಮೇಳ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ನಮ್ಮ ಯಾದಗರಿ ಜಿಲ್ಲೆ ಹಿಂದುಳಿದ ಪ್ರದೇಶವಾಗಿದ್ದು, ಜಿಲ್ಲೆಯಲ್ಲಿ ಈ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಮೇಳ ಹಮ್ಮಿಕೊಂಡಿರುವುದು ನನಗೆ ಸಂತೋಷ ವಿಷಯವಾಗಿದೆ. ಇಂಥ ಮೇಳಗಳನ್ನು ಹಾಕಿಕೊಳ್ಳುವುದರಿಂದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಅನುಕೂಲವಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಉದ್ಯೋಗದಾತರ ಸಂಖ್ಯೆ 53, ಭಾಗವಹಿಸಿದ ಒಟ್ಟು ಉದ್ಯೋಗಾರ್ಥಿಗಳ 6185. ಉದ್ಯೋಗಕ್ಕೆ ನೇಮಕಾತಿ ಅಂತಿಮ ಹಂತಕ್ಕೆ (ಶಾರ್ಟ್ ಲಿಸ್ಟೆಡ್) ಆಯ್ಕೆಯಾದ ಒಟ್ಟು ಉದ್ಯೋಗಾರ್ಥಿಗಳ ಸಂಖ್ಯೆ 2230. ಸ್ಥಳದಲ್ಲಿ ನೇಮಕವಾದ ಉದ್ಯೋಗಾರ್ಥಿಗಳು 498. ತರಬೇತಿ ಆಯ್ಕೆಯಾದ ಅಭ್ಯರ್ಥಿಗಳ ಸಂಖ್ಯೆ 2326 ಎಂಬ ವಿವರ ನೀಡಿದ ಅವರು, ಉದ್ಯೋಗ ಸಿಗದ ಅಭ್ಯರ್ಥಿಗಳು ನಿರಾಶರಾಗುವ ಅಗತ್ಯವಿಲ್ಲ ಎಂದರು.

ಸಣ್ಣ ಕೈಗಾರಿಕಾ ಖಾತೆ ಸಚಿವರಾದ ನರಸಿಂಹ ನಾಯಕ (ರಾಜೂಗೌಡ) ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಬೃಹತ್ ಉದ್ಯೋಗ ಮೇಳ ಹಮ್ಮಿಕೊಂಡಿರುವುದು ಸಂತೋಷದ ವಿಷಯ ನಮ್ಮ ಜಿಲ್ಲೆಯ ಅಭಿವೃದ್ಧಿ ನಾವು ಪಣ ತೊಡಬೇಕು. ಯಾರಿಗೂ ನೌಕರಿ ಸಿಗದಿದ್ದರೆ ನಿರಾಶರಾಗುವ ಅಗತ್ಯವಿಲ್ಲ. ಮರಳಿ ಪ್ರಯತ್ನ ಮಾಡಿ ಯಶಸ್ವಿಯಾಗಬೇಕು ಎಂದು ಪ್ರಸ್ತಾವಿಕವಾಗಿ ಮಾತನಾಡಿದರು.

ವೇದಿಕೆ ಮೇಲೆ ನಗರಸಭೆ ಅಧ್ಯಕ್ಷೆ ನಾಗರತ್ನ ಅನಪೂರ ಬಿಜೆಪಿ ಜಿಲ್ಲಾಧ್ಯಕ್ಷ ಡಾ. ವೀರಬಸವಂತ ರೆಡ್ಡಿ, ಜಿಲ್ಲಾಧಿಕಾರಿ ಗುರುನೀತ್ ತೇಜ್ ಮೆನನ್ ಜವಾಹರ ಶಿಕ್ಷಣ ಸಂಸ್ಥೆಯ ಚೇರಮನ್ ಅಧ್ಯಕ್ಷರಾದ ಎ.ಸಿ. ಕಡ್ಲೂರ್ ಹಾಗೂ ಇನಿತರ ಗಣ್ಯ ವ್ಯಕ್ತಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

English summary
Karnataka government had organized job fair in Yadgir on August 18 and 19 to employ people in skilled industries. 3,000 jobs were vacant. Companies like Jindal, HDFC, MedPlus health services are participated in the job fair. Labour minister Bache Gowda distributed certificates to successful candidated at a valedictory fuction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X