ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಸಂಪುಟಕ್ಕೆ ರೆಡ್ಡಿಗಳ ಸೇರ್ಪಡೆ, ಆಚಾರ್ಯರೇ ದಿಕ್ಕು?

By Mahesh
|
Google Oneindia Kannada News

Sadananda Gowda on Cabinet Expansion
ಬಾಗಲಕೋಟೆ, ಆ.22: ರಾಜ್ಯ ಸಂಪುಟ ವಿಸ್ತರಣೆ ಏನಿದ್ದರೂ ಅಣ್ಣಾ ಹಜಾರೆ ಅವರ ಹೋರಾಟ ಪೂರ್ಣಗೊಂಡ ನಂತರವಷ್ಟೇ. ಸಂಪುಟಕ್ಕೆ ರೆಡ್ಡಿಗಳ ಸೇರ್ಪಡೆ ಬಗ್ಗೆ ಕಾನೂನು ಸಮಿತಿ ನಿರ್ಧರಿಸಲಿದೆ ಎಂದು ಸಿಎಂ ಡಿವಿಎಸ್ ಅವರು ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆ ಪ್ರವಾಸದಲ್ಲಿರುವ ಮುಖ್ಯಮಂತ್ರಿಗಳು ಕೃಷ್ಣಾನದಿಗೆ ಬಾಗಿನ ಅರ್ಪಿಸಲು ಆಲಮಟ್ಟಿಗೆ ತೆರಳುತ್ತಿದ್ದರು.

ಲೋಕಾಯುಕ್ತ ವರದಿ ಶಿಫಾರಸ್ಸಿನಲ್ಲಿ ಅಡಕವಾಗಿರುವ ಅಂಶಗಳ ಪ್ರಕಾರ ಗಣಿರೆಡ್ಡಿಗಳ ಕ್ಯಾಂಪಿನ ಕರುಣಾಕರ ರೆಡ್ಡಿ ಮತ್ತು ಶ್ರೀರಾಮುಲು ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳಬಹುದೆ? ಬೇಡವೇ? ಎನ್ನುವ ವಿಚಾರವನ್ನು ಕಾನೂನಿನ ವ್ಯಾಪ್ತಿಯಲ್ಲಿ ಪರಿಶೀಲಿಸಿ ವರದಿ ಕೊಡಬೇಕೆಂದು ಅಡ್ವೋಕೇಟ್ ಜನರಲ್ ಬಿವಿ ಆಚಾರ್ಯರಿಗೆ ಸಿಎಂ ಕೇಳಿಕೊಂಡಿದ್ದಾರೆ.

ರಾಜ್ಯಪಾಲರು ಅಡ್ಡಿ?: ರೆಡ್ಡಿ ಸೋದರರ ಸಂಪುಟ ಸೇರ್ಪಡೆಗೆ ಬಿಜೆಪಿ ಅಧ್ಯಕ್ಷ ಗಡ್ಕರಿಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಲಾಗಿದೆ. ಸದಾನಂದ ಗೌಡರು ಈ ಕುರಿತಂತೆ ಲೀಗಲ್ ಒಪೀನಿಯನ್ ಕೇಳಿ ನಂತರ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.

ಒಂದು ವೇಳೆ ಕರುಣಾಕರ ರೆಡ್ಡಿ ಮತ್ತು ಶ್ರಿ ರಾಮಲುವನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಬಿವಿ ಆಚಾರ್ಯುರು ಗ್ರೀನ್ ಸಿಗ್ನಲ್ ಕೊಟ್ಟರೂ ರಾಜ್ಯಪಾಲರು ಅವರಿಗೆ ಪ್ರಮಾಣವಚನ ಬೋಧಿಸಲು ಒಪ್ಪಲಾರರು ಎನ್ನುವ ಸುದ್ದಿ ಇದೆ.

ಹಿಂದೊಮ್ಮೆ ರೆಡ್ಡಿಗಳ ವಿರುದ್ಧ ಸ್ವತಃ ರಾಜ್ಯಪಾಲರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರಲ್ಲದೇ, ಬಳ್ಳಾರಿ ತ್ರಿಮೂರ್ತಿಗಳನ್ನು ಸಂಪುಟದಿಂದ ಕೈಬಿಡಲು ಯಡಿಯೂರಪ್ಪಗೆ ಒತ್ತಡ ಹಾಕಿದ್ದರು. ಇದೀಗ ಮತ್ತೆ ಅವರನ್ನು ಮಂತ್ರಿ ಆಗುವುದಕ್ಕೆ ಹಂಸರಾಜ್ ಭಾರಧ್ವಾಜರು ಅಡ್ಡಗಾಲು ಹಾಕುವ ಸಾಧ್ಯತೆಯಿದೆ.

English summary
CM DV Sadananda Gowda said his cabinet expansion is scheduled after Anna Hazare's movement is over and inclusion of Reddy brothers and B Sreemulu will be decided by high command after discussing with judicial panel lead by AG BV Acharya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X