ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಯಸದ ಡಬ್ಬಿಯಲ್ಲಿ ಅನಂತ ಚಿನ್ನ ದೋಚಿದ ಮಾರ್ತಾಂಡ

By Srinath
|
Google Oneindia Kannada News

raja-marthanda-smuggles-anatha-gold-achuthanadan
ತಿರುವನಂತಪುರ, ಆ. 21: ವಂಶಪಾರಂಪರ್ಯವಾಗಿ ಪದ್ಮನಾಭ ದೇಗುಲದ ಉಸ್ತುವಾರಿ ಹೊತ್ತಿರುವ ರಾಜಾ ಮಾರ್ತಾಂಡ ವರ್ಮ ಅವರು ದೇಗುಲದಿಂದ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ಕದಿಯುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ವಿಎಸ್ ಅಚ್ಚುತಾನಂದನ್‌ ಹೇಳಿದ್ದಾರೆ.

ಆದರೆ ಇಷ್ಟು ವರ್ಷದದಿಂದ ಅನಂತ ಸಂಪತ್ತನ್ನು ಅತ್ಯಂತ ಜತನದಿಂದ ಕಾಪಾಡಿಕೊಂಡು ಬಂದಿದ್ದ ಮಾರ್ತಾಂಡ ವರ್ಮ ಪದ್ಮನಾಭ ಸ್ವಾಮಿಯ ಆಭರಣ ಕದಿಯುವ ಸಾಧ್ಯತೆಯಿಲ್ಲ. ಅಚ್ಚುತಾನಂದರ ಆರೋಪ ರಾಜಕೀಯ ಪ್ರೇರಿತ ಎಂದು ದೇವಸ್ಥಾನದ ಭಕ್ತಾದಿಗಳು ಕಿಡಿಕಾರಿದ್ದಾರೆ.

ದೇಗುಲಕ್ಕೆ ಪ್ರತಿದಿನ ಭೇಟಿ ನೀಡುವ ಮಾರ್ತಾಂಡ ವರ್ಮಾ ಬರುವಾಗ ಡಬ್ಬಿಯೊಂದನ್ನು ತರುತ್ತಿದ್ದರು. ಹೋಗುವಾಗ ಆ ಡಬ್ಬಿ ಕೊಂಡೊಯ್ಯುತ್ತಿದ್ದರು. ಅದರಲ್ಲಿ ಪಾಯಸ ಪ್ರಸಾದ ತೆಗೆದುಕೊಂಡು ಹೋಗುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ವಾಸ್ತವ ಸಂಗತಿ ಎಂದರೆ ಅವರು ಪ್ರತಿದಿನ ದೇಗುಲದಿಂದ ಅಪರೂಪದ ಆಭರಣಗಳನ್ನು ಕದ್ದೊಯ್ಯುತ್ತಿದ್ದರು ಎಂದು ಅಚ್ಚುತಾನಂದನ್‌ ಆರೋಪಿಸಿದ್ದಾರೆ.

ದೇಗುಲದ ಅರ್ಚಕರೊಬ್ಬರಿಗೆ ಮಾರ್ತಾಂಡ ವರ್ಮ ಅವರ ಈ ಕೆಲಸ ಗೊತ್ತಾದ ಮೇಲೆ ಅವರನ್ನು ಕೆಲಸದಿಂದ ತೆಗೆದು ಹಾಕಲಾಯಿತು. ಕೆಲ ದಿನಗಳ ಅವರ ಜೀವಕ್ಕೂ ಭಯವಿತ್ತು. ಅವರೇ ನನಗೆ ಈ ವಿಷಯ ತಿಳಿಸಿದ್ದಾರೆ ಎಂದು ಮಾಜಿ ಸಿಎಂ ತಿಳಿಸಿದ್ದಾರೆ.

ಅಪಾರ ಸಂಪತ್ತು ಇದೆ ಎನ್ನಲಾದ ಬಿ ಉಗ್ರಾಣ ತೆರೆದರೆ, ಬಾಗಿಲು ತೆಗೆದವ ಹಾವು ಕಚ್ಚಿ ಸಾಯುತ್ತಾನೆ ಎಂದು ದೇವ ಪ್ರಶ್ನೆಯಿಂದ ತಿಳಿದುಬಂದಿರುವುದೆಲ್ಲ ಸುಳ್ಳು. ಸಂಪತ್ತನ್ನು ತಾವೇ ಕೊಳ್ಳೆ ಹೊಡೆಯುವ ದೃಷ್ಟಿಯಿಂದ ಇದನ್ನು ಮಾರ್ತಾಂಡ ವರ್ಮಾ ಅವರೇ ಹಬ್ಬಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಸುಪ್ರೀಂಕೋರ್ಟ್‌ನತ್ತ ಎಲ್ಲರ ಚಿತ್ತ: ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಅನಂತ ಸಂಪತ್ತು ಬಹಿರಂಗವಾದ ಬೆನ್ನಲ್ಲೇ ಇನ್ನೂ ತೆರೆಯದಿರುವ ನೆಲಮಾಳಿಗೆಯ ಬಿ ಉಗ್ರಾಣದ ಭವಿಷ್ಯ ಇದೀಗ ಸುಪ್ರೀಂ ಕೋರ್ಟ್‌ ಆಂಗಳದಲ್ಲಿದೆ. ಜನ ಕುತೂಹಲದಿಂದ ಸುಪ್ರೀಂಕೋರ್ಟ್‌ನತ್ತ ನೋಡುವಂತಾಗಿದೆ.

ಬಿ ಉಗ್ರಾಣವನ್ನು ಯಾವುದೇ ಕಾರಣಕ್ಕೂ ತೆರೆಯಬಾರದೆಂದು ದೇವ ಪ್ರಶ್ನೆಯಲ್ಲಿ ಪದ್ಮನಾಭ ದೇವರು ತೀರ್ಪು ನೀಡಿದ್ದಾನೆ. ಆನಂತಪದ್ಮನಾಭ ಸ್ವಾಮಿಯ ರಹಸ್ಯ ನಿಧಿಯನ್ನು ಮುಟ್ಟಿರುವುದ್ದರಿಂದ ಕ್ಷೇತ್ರ ಚೈತನ್ಯಕ್ಕೆ ಧಕ್ಕೆವುಂಟಾಗಿದೆ. ಮಾತ್ರವಲ್ಲ ದೇಶಕ್ಕೂ ಗಡಾಂತರ ಕಾದಿದೆ. ಇದಕ್ಕೆ ಶ್ರೀಘ್ರ ದೋಷ ಪರಿಹಾರ ಕ್ರಿಯೆ ಮಾಡಬೇಕು ಎಂಬುದು ಆಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಿತ್ತು ಎನ್ನಲಾಗಿದೆ.

English summary
VS Achuthanadan, Former Chief Minister has accused the Royal family of Travancore, Marthanda Varma of smuggling precious articles from the Sri Padmanabha Swamy temple. Achuthanadan also said that the royal family were spreading fables across that dire consequences would befall if the temples B vault was opened.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X