• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿರುದ್ಯೋಗಿ ಯುವಕನಿಂದ ದುಬೈ ಯುವತಿ ಅಪಹರಣ, ಬಲಾತ್ಕಾರ

By Srinath
|

ದುಬೈ, ಆಗಸ್ಟ್ 21: ಕೆಲಸವಿಲ್ಲದ ಬಡಗಿಯ ಕಥೆಯಿದು... ಯುವತಿಯ ಜತೆ ಅನಪೇಕ್ಷಿತ ಸೆಕ್ಸ್ ಗೆ ಬಲಾತ್ಕರಿಸಿದ ಯುವಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 20 ರ ವಯಸ್ಸಿನ ಈ ಯುವಕ-ಯುವತಿಯ ಕಥೆ ಹೀಗಿದೆ. ಯುವತಿಯ ಮಾತುಗಳಲ್ಲೇ ಹೇಳುವುದಾದರೆ...

'ದುಬೈನ ಅಲ್ ಹಮ್ರಿಯಾ ಹೈಪರ್ ಮಾರ್ಕೆಟ್ ಆವರಣದಲ್ಲಿ ಪಾರ್ಕ್ ಮಾಡಿದ್ದ ನನ್ನ ಕಾರನ್ನು ಸಂಜೆ 5.30ರಲ್ಲಿ ಹೊರ ತೆಗೆಯುವ ಪ್ರಯತ್ನದಲ್ಲಿದ್ದೆ. ಕಾರು ಸ್ಟಾರ್ಟ್ ಆಗಲಿಲ್ಲ. ಆಗ ಆರೋಪಿ ಯುವಕಿ ಕಾರಿನ ಬಳಿ ಬಂದು ನೆರವು ನೀಡುವುದಾಗಿ ಹೇಳಿದ. ಆದರೆ ಆತನ ಸಹಾಯ ಬೇಡವೆಂದು ನಿರಾಕರಿಸಿದೆ'.

'ಈ ಹಿಂದೆ ಒಮ್ಮೆ ಅವನನ್ನು ನೋಡಿದ್ದೆ. ಅವನು ಆಗಲೂ ನನ್ನೊಂದಿಗೆ ಜಗಳ ತೆಗೆದಿದ್ದ. ಅದೇ ಸಲುಗೆಯ ಮೇಲೆ ಕಾರೊಳಕ್ಕೆ ನುಗ್ಗಿದವನೆ ತಾನು ಹೇಳುವ ಮಾರ್ಗದಲ್ಲಿ ಕಾರನ್ನು ಚಲಾಯಿಸುವಂತೆ ಬಲಾತ್ಕರಿಸಿದ'.

'ಮಾರ್ಗ ಮಧ್ಯೆ ಅವನ ಮನೆ ಬಂದಾಗ ಕೆಳಗಿಳಿದು ತೊಲಗು ಎಂದೆ. ಕೆಳಗಿಳಿದವನೇ ಮನೆಗೆ ಹೋಗುತ್ತಾನೆ ಎಂದುಕೊಂಡೆ. ಆದರೆ ಅವನು ನನ್ನ ಕಾರಿಗೆ ಅಡ್ಡ ಬಂದ. ನನ್ನ ಕೆನ್ನೆಗೆ ಎರಡೇಟು ಕೊಟ್ಟು, ನನ್ನ ಕೈಗಳನ್ನು ಹಿಂದಕ್ಕೆ ತಿರುಚಿ, ಕಟ್ಟಿ ಹಾಕಿದ. ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವಂತೆ ಜೋರು ಮಾಡಿದ. ವಿಧಿಯಿಲ್ಲದೆ ಸುಮ್ಮನಾದೆ'.

'ಇಡೀ ರಾತ್ರಿ ನನ್ನನ್ನು ಕಾರಿನಲ್ಲಿ ಸುತ್ತಿಸಿ ಬೆಳಗಿನ ಜಾವ 3 ಗಂಟೆ ವೇಳೆಗೆ ಹಮ್ರಿಯಾ ಹೈಪರ್ ಮಾರ್ಕೆಟ್ ಆವರಣಕ್ಕೆ ವಾಪಸಾದ. ಅಲ್ಲಿ ಕಾರಿನಲ್ಲಿ ನನ್ನನ್ನು ಮುದ್ದಿಸಿದ. ಅಪ್ಪಿ ಮುದ್ದಾಡಿದ. ಆದರೆ ನಾನು ಇದನ್ನು ನಾನು ವಿರೋಧಿಸುತ್ತಲೇ ಇದ್ದೆ. ಸುಮಾರು ಹೊತ್ತು ಹೀಗೇ ಅವನ ಆಟ ನಡೆದಿತ್ತು. ಕೊನೆಗೆ ಅಲ್ ಕ್ವಾಸಿಸ್ ಠಾಣೆ ಎದುರು ಕಾರನ್ನು ನಿಲ್ಲಿಸಿ, ಮನೆಗೆ ಹೋಗು ಅಂದ' ಎಂದು ಯುವತಿ ತನ್ನ ಗೋಳಿನ ಕಥೆಯನ್ನು ತಕ್ಷಣ ಪೊಲೀಸರಿಗೆ ಹೇಳಿಕೊಂಡಿದ್ದಾಳೆ.

English summary
A jobless youth is accused of molesting a Dubai student in her car. The girl claimed that he kissed, fondled and groped her without her consent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X