• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎನ್ಆರ್ ನಾರಾಯಣ ಮೂರ್ತಿಗೆ ಇನ್ಫೋಸಿಸ್ ಗುಡ್ ಬೈ

By Prasad
|

ಬೆಂಗಳೂರು, ಆ. 19 : ವಿಶ್ವದ ಅಗ್ರಮಾನ್ಯ ಕಂಪನಿಗಳಲ್ಲೊಂದಾಗ ಇನ್ಫೋಸಿಸ್ ಕಂಪನಿಯನ್ನು 40 ವರ್ಷಗಳಿಂದ ಪೊರೆದ ನಾಗವಾರ ರಾಮರಾಯ ನಾರಾಯಣಮೂರ್ತಿ (65) ಅವರು ಆ.20, ಶನಿವಾರದಂದು ಇನ್ಫೋಸಿಸ್ ಚೇರ್ಮನ್ ಆಗಿ ಅಧಿಕೃತವಾಗಿ ನಿವೃತ್ತರಾಗಲಿದ್ದಾರೆ.

ನಾರಾಯಣಮೂರ್ತಿಯವರು 1981ರಲ್ಲಿ ಅವರ ಪತ್ನಿ ಸುಧಾ ಮೂರ್ತಿಯವರಿಂದ ಕಡ ತೆಗೆದುಕೊಂಡ 250 ಡಾಲರ್ ಹಣದಿಂದ ಆರಂಭಿಸಿದ್ದರು. ಕಂಪನಿಯ ಸಿಇಓಆಗಿ ಅವರು 21 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಎನ್ಆರ್ಎನ್ ಬಿಟ್ಟ ಹುದ್ದೆಯನ್ನು ಇನ್ನೊಬ್ಬ ಕನ್ನಡಿಗ ಕೆವಿ ಕಾಮತ್ ಅವರಿಗೆ ಬಿಟ್ಟುಕೊಟ್ಟಿದ್ದಾರೆ.

ನಿವೃತ್ತರಾಗುತ್ತಿದ್ದರೂ, ಇನ್ಫೋಸಿಸ್ ಜೊತೆಗೆ ಸಂಪರ್ಕ ನಾರಾಯಣಮೂರ್ತಿ ಸಂಪರ್ಕ ಕಡಿದುಕೊಳ್ಳುತ್ತಿಲ್ಲ. ಬೇಕೆಂದಾಗ ಕ್ಯಾಂಪಸ್ಸಿಗೆ ಬರುವ, ಬೇಕಾದವರನ್ನು ಭೇಟಿಯಾಗುವ ಸವಲತ್ತನ್ನು ಉಳಿಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ಆದರೆ, ಕಂಪನಿಯ ಆಡಳಿತದಲ್ಲಿ ತಲೆ ಹಾಕುವುದಿಲ್ಲ ಎಂದು ತಿಳಿಸಿದ್ದಾರೆ.

ಇನ್ಫೋಸಿಸ್ ರಾಜಗುರುವನ್ನು ಭಾವಪೂರ್ಣವಾಗಿ ಬೀಳ್ಕೊಡಲು ಕಂಪನಿ ಭಾರೀ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಆದರೆ, ಪತ್ರಕರ್ತರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನವನ್ನು ನಿರಾಕರಿಸಲಾಗಿದೆ.

English summary
Narayana Murthy - the founder and mentor of IT giant Infosys, will officially retire on Saturday, Aug 20. 65-year-old Murthy will retire as the chairman of the company after handing over the charge to the new chief - KV Kamath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more