ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುರ್ಖಾ ತೆರೆಯದಿದ್ದರೆ ಜೈಲಿಗೆ ಹಾಕಿ ಎಂದ ಆಸೀಸ್

By Mahesh
|
Google Oneindia Kannada News

Burqa Ban in Australia?
ಮೆಲ್ಬರ್ನ್ ಆ.19: ಬುರ್ಖಾ ಧರಿಸಿರುವ ಮುಸ್ಲಿಂ ಮಹಿಳೆಯರು ಪೊಲೀಸರು ಬೇಕೆಂದಾಗ ಬುರ್ಖಾ ತೆಗೆದು ಮುಖ ದರ್ಶನ ನೀಡಬೇಕು ಇಲ್ಲದಿದ್ದರೆ ಜೈಲಿಗೆ ಹಾಕಲಾಗುವುದು ಎಂದು ನ್ಯೂ ಸೌಥ್ ವೇಲ್ಸ್ ನ ಸ್ಥಳೀಯ ಆಡಳಿತ ಆಜ್ಞೆ ನೀಡಿದೆ.

ಫೇಸ್ ಕವರಿಂಗ್, ಹೆಲ್ಮೆಟ್, ಮಾಸ್ಕ್, ಸಾಂಪ್ರದಾಯಿಕ ವೇಲ್ ಮುಂತಾದಗಳನ್ನು ಧರಿಸಿರುವವರು ಪೊಲೀಸರು ಕೇಳಿದಾಗ ತಕ್ಷಣಕ್ಕೆ ತಮ್ಮ ಐಡೆಂಡಿಟಿ ಬಗ್ಗೆ ಸ್ಪಷ್ಟಪಡಿಸಬೇಕು ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ.

ಪೊಲೀಸರ ಕೂಗು ಕೇಳಿಸಿಕೊಳ್ಳದ ಬುರ್ಖಾಧಾರಿಗಳಿಗೆ 220 ಆಸೀಸ್ ಡಾಲರ್ ದಂಡ ಅಲ್ಲದೆ ಒಂದು ವರ್ಷದ ತನಕ ಜೈಲಿಗೆ ಹಾಕುವ ಶಿಕ್ಷೆ ಕಾದಿದೆ. ಈ ನಿಯಮಾವಳಿಗಳಿಗೆ ಭಾರಿ ಪ್ರತಿರೋಧ ಉಂಟಾಗಿದ್ದು, ಬುರ್ಖಾ ತೆಗೆಯುವಂತೆ ಪೊಲೀಸರು ದರ್ಪದಿಂದ ಕೂಗಾಡುವುದನ್ನು ಖಂಡಿಸಿ ಸಿಡ್ನಿಯ ಮಹಿಳೆಯೊಬ್ಬರು ಕೇಸು ದಾಖಲಿಸಿದ್ದರು.

ಯುರೋಪಿಯನ್ ರಾಷ್ಟ್ರಗಳಲ್ಲಿ ಈಗಾಗಲೆ ಬುರ್ಖಾ ಧರಿಸುವುದನ್ನು ನಿಷೇಧಿಸಲಾಗಿದೆ. ಫ್ರಾನ್ಸ್, ಬೆಲ್ಜಿಯಂ, ಇಟಲಿ ಹಾಗೂ ಸ್ಪೇನ್ ನ ಕೆಲವು ಭಾಗದಲ್ಲಿ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವಂತಿಲ್ಲ. ಕೆನಡಾದಲ್ಲೂ ಬುರ್ಖಾ ನಿಷೇಧಕ್ಕೆ ಚಿಂತನೆ ನಡೆದಿತ್ತು. ಆಸ್ಟ್ರೇಲಿಯಾದಲ್ಲೂ ಈಗ ಈ ನಿಯಮ ಜಾರಿಗೊಳ್ಳುವ ಸಾಧ್ಯತೆಯಿದೆ.

English summary
Burqa clad Muslim women in the Australian state of New South Wales would have to remove their veils and show their faces if asked by the police or risk a jail term.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X