ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಂಎಫ್ ನಿಂದ ಬಾಲ ಕೃಷ್ಣ ವೇಷಧಾರಿಗೆ ಸಕ್ಕರೆ ಬೆಲ್ಲ

By Mahesh
|
Google Oneindia Kannada News

Sri Krishan Janmashtami contest
ಬೆಂಗಳೂರು, ಆ.18: ಕರ್ನಾಟಕ ಹಾಲು ಉತ್ಪಾದಕ ಮಹಾಮಂಡಳಿಯು ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ನಂದಿನಿ ಶ್ರೀ ಕೃಷ್ಣ ವೇಷ ಭೂಷಣ ಹಾಗೂ ನಂದಿನಿ ನಿಧಿ ಅನ್ವೇಷಣಾ ಸ್ಪರ್ಧೆ ಆಯೋಜಿಸಿದೆ.

ಆ. 21ರಂದು ಬೆಳಗ್ಗೆ 10.30 ರಿಂದ ನಗರದ ಕೆಎಂಎಫ್ ಆವರಣದಲ್ಲಿ ಸ್ಪರ್ಧೆ ನಡೆಯಲಿದೆ. 5 ರಿಂದ 10 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದು,
ತಾಯಂದಿರೂ ತಮ್ಮ ಮಕ್ಕಳೊಂಡನೆ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆಯ್ದ ತಂಡಗಳಿಗೆ ವಿಶೇಷ ಬಹುಮಾನ ನೀಡಲಾಗುತ್ತದೆ. ಅಂದೇ ಮಧ್ಯಾಹ್ನ ಆಯ್ಕೆ ಮಾಡಿ ಬಹುಮಾನ ವಿತರಿಸಲಾಗುತ್ತದೆ.

10 ಸಾವಿರ ರೂ. ಮೊದಲ ಬಹುಮಾನ, 7 ಸಾವಿರ ರೂ. ದ್ವಿತೀಯ ಬಹುಮಾನ ಹಾಗೂ 5 ಸಾವಿರ ರೂ. ತೃತೀಯ ಬಹುಮಾನ ಹಾಗೂ ಇತರೆ ಸಮಾಧಾನಕರ ಬಹುಮಾನ ನೀಡಲಾಗುತ್ತದೆ.

ಆಸಕ್ತರು ಕಚೇರಿ ವೇಳೆ ಬೆಳಗ್ಗೆ 10.30 ರಿಂದ ಸಂಜೆ 5 ರ ಒಳಗಾಗಿ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ದೂ. ಸಂಖ್ಯೆ 080-2550 2213ಗೆ ಕರೆ ಮಾಡಬಹುದು.

ಮಂತ್ರಾಲಯದಲ್ಲಿ ವಿಶಿಷ್ಟ ಆಚರಣೆ : ಶ್ರೀ ಮಠದ ಗೋಶಾಲೆಯಲ್ಲಿ ಗೋಕಲಾಷ್ಟಮಿಯನ್ನು ಆಚರಿಸಲಾಗುತ್ತದೆ. ಸುಯತೀಂದ್ರ ತೀರ್ಥರ ಸಾನಿಧ್ಯದಲ್ಲಿ ಜ್ಞಾನಸತ್ರ ನಡೆಯಲಿದೆ. ಸಂಪತ್ರಿ ಮೋಹನ್ ಅವರಿಂದ ಹಾಡುಗಾರಿಕೆ. ಕೃಷ್ಣ ದೇವರ ಶೋಭಾಯಾತ್ರೆ, ಭಜನೆ, ಚಂದ್ರೋದಯ ಸಮಯದಲ್ಲಿ ಅರ್ಘ್ಯ ಪ್ರದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಆ.22 ರಂದು ಕೊಬ್ಬರಿ ಗಿಟುಕು ಹರಿಯುವ ಸ್ಪರ್ಧೆಯನ್ನು ಪುರುಷರಿಗಾಗಿ ಆಯೋಜಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ರಘುನಂದನ ಶರ್ಮ: 90327 14705, ಶ್ರೀಪಾದ ಜೋಶಿ: 99661 15576, ಶ್ರೀನಿವಾಸ ಇನಾಂದರ್ : 94480 01423.

English summary
Karnataka Milk Federation(KMF) is conducting a fancy dress competition and treasure hunt program for children on the eve of Sri Krishna Janmashtami(Aug 21). During this hindu festival children will be dressed like lord Krishna along with his mother Yashodha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X