ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನಲ್ಲಿ ರೇಸುಗಳು ಆರಂಭ, ಪ್ರವೇಶ ದರ 10 ರು.

By * ಬಿಎಂ ಲವಕುಮಾರ್, ಮೈಸೂರು
|
Google Oneindia Kannada News

Horse racing in Mysore
ಮೈಸೂರು, ಆ. 18 : ಪ್ರತಿಷ್ಠಿತ ಮೈಸೂರು ರೇಸ್‌ ಕ್ಲಬ್ ವತಿಯಿಂದ 2011ನೇ ಸಾಲಿನ ಮೈಸೂರು ರೇಸುಗಳು ಮೈಸೂರು ರೇಸ್‌ ಕೋರ್ಸ್‌ನಲ್ಲಿ ಗುರುವಾರದಿಂದ ಆರಂಭಗೊಂಡಿದ್ದು ಅಕ್ಟೋಬರ್ 23ರವರೆಗೆ ನಡೆಯಲಿವೆ.

ಸುಮಾರು ಎರಡು ತಿಂಗಳ ಕಾಲ ನಡೆಯುವ ರೇಸ್‌ನಲ್ಲಿ ಸುಮಾರು 90 ಪ್ರಮುಖ ರೇಸುಗಳು ನಡೆಯಲಿವೆ. ಅಲ್ಲದೆ ರೇಸ್‌ನಲ್ಲಿ ಬೆಂಗಳೂರಿನ 35 ಹಾಗೂ ಮೈಸೂರಿನ 18 ಜನ ತರಬೇತಿದಾರರು ಪಾಲ್ಗೊಳ್ಳಲಿದ್ದು, ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ. ಮೈಸೂರು ರೇಸ್‌ಕೋರ್ಸ್‌ನ 450 ಕುದುರೆಗಳು ಹಾಗೂ ಬೆಂಗಳೂರಿನ ಕುದುರೆಗಳು ಮತ್ತು ಲೈಸನ್ಸ್ ಪಡೆದಿರುವ ಜಾಕಿಗಳು ರೇಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಈಗಾಗಲೇ ರೇಸ್‌ಗೆ ಅಗತ್ಯವಿರುವ ಟ್ರ್ಯಾಕ್‌ಗಳನ್ನು ಸಿದ್ಧಪಡಿಸಲಾಗಿದ್ದು, ರೇಸ್ ಮುಗಿಯುವವರೆಗೆ ಉತ್ತಮ ನಿರ್ವಹಣೆ ಮಾಡುವ ಭರವಸೆಯನ್ನು ರೇಸ್ ಕ್ಲಬ್ ನೀಡಿದೆ. ರೇಸ್‌ಗಳಿಗೆ ಬಹುಮಾನದ ಮೊತ್ತವಾಗಿ 53,750,275 ರೂಪಾಯಿಗಳನ್ನು ವಿತರಿಸಲಾಗುತ್ತಿದೆ. ರೇಸುಗಳಿಗೆ ತೆರಳುವವರಿಗೆ ಪ್ರವೇಶ ಶುಲ್ಕವನ್ನು ಎಲ್ಲಾ ದಿನಗಳಲ್ಲಿಯೂ ಹತ್ತು ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ ಎಂದು ಮೈಸೂರು ರೇಸ್ ಕ್ಲಬ್‌ನ ಅಧ್ಯಕ್ಷ ಕೆ.ಎ.ಮುದ್ದಪ್ಪ ತಿಳಿಸಿದ್ದಾರೆ.

English summary
Horse racing for the year 2011 has begun in Mysore from Sept 18 and will continue till Sept 23. The race is organized by Mysore Race Club Ltd. The prize money is Rs. 53,750,275. Entry fee is Rs. 10. Go for it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X