ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಯಿಗೂಡಿಗೆ ಫುಟ್ ಪಾತ್ ಬಲಿ ಹಾಕಿದ ಅಶೋಕ್

By Mahesh
|
Google Oneindia Kannada News

EX AG Ashok Haranahalli
ಬೆಂಗಳೂರು ಆ.18: ಯಡಿಯೂರಪ್ಪ ಸರ್ಕಾರವಿದ್ದಾಗ ಅಡ್ವೊಕೇಟ್ ಜನರಲ್ ಆಗಿದ್ದ ಅಶೋಕ್ ಹಾರನಹಳ್ಳಿ, ತಮ್ಮ ಆರ್ ಎಂವಿ 2ನೇ ಹಂತದ ನಿವಾಸದ ಮುಂದಿನ ಫುಟ್ ಪಾತ್ ಒತ್ತುವರಿ ಮಾಡಿಕೊಂಡು ನಾಯಿಗೂಡನ್ನು ಸ್ಥಾಪಿಸಿರುವ ಪ್ರಕರಣವನ್ನು ಬೆಂಗಳೂರು ಮಿರರ್ ಬೆಳಕಿಗೆ ತಂದಿದೆ.

ಅಶೋಕ್ ಅವರ ಮನೆಯ ಎದುರಿಗೆ ಫುಟ್‌ಪಾತ್‌ಗಾಗಿ 8 X 20ಅಡಿ ಅಳತೆಯ ಜಾಗವನ್ನು ಮೀಸಲಿಡಲಾಗಿದೆ. ಆದರೆ ಅಲ್ಲಿ ಎರಡು ಲ್ಯಾಬ್ರೊಡರ್ ನಾಯಿಗಳಿರುವ ಗೂಡು ಸ್ಥಾಪನೆಗೊಂಡಿದೆ. ನಾಯಿಗೂಡಿನ ದೆಸೆಯಿಂದ ಪಾದಚಾರಿಗಳು ಬೇರೆ ದಾರಿಯಿಲ್ಲದೆ ರಸ್ತೆಯಲ್ಲಿಯೇ ಚಲಿಸಬೇಕಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಶೋಕ್, "ನಾನು ಫುಟ್‌ಪಾತನ್ನು ಆಕ್ರಮಿಸಿಕೊಂಡಿಲ್ಲ. ಫುಟ್‌ಪಾತನ್ನುಇದೇ ರೀತಿ ಹಲವು ಮಂದಿ ಬಳಸಿಕೊಂಡಿರುವುದನ್ನು ನಾನು ನೋಡಿದ್ದೇನೆ.

ಕೆಲವರು ಫುಟ್‌ಪಾತ್‌ಗಳಲ್ಲಿ ಗಾರ್ಡನ್ ಅಥವಾ ಮತ್ತಿತ್ತರ ಚಟುವಟಿಕೆಗಳಿಗೆ ಉಪಯೋಗಿಸಿಕೊಂಡಿದ್ದಾರೆ. ದಾರಿಹೋಕರಿಗೆ ನಾಯಿಗಳು ಎಂದೂ ತೊಂದರೆ ಕೊಟ್ಟಿಲ್ಲ ಎಂದಿದ್ದಾರೆ.

ಬಿಬಿಎಂಪಿ ಹೆಬ್ಬಾಳ ಉಪ ವಿಭಾಗದ ಕಾರ್ಯಕಾರಿ ಇಂಜಿನಿಯರ್ ವಿಜಯಕುಮಾರ್ ಅವರು ಮಾತನಾಡಿ 'ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ, ಒಂದು ವೇಳೆ ಯಾರಾದರೂ ಫುಟ್‌ಪಾತನ್ನು ಆಕ್ರಮಿಸಕೊಂಡದ್ದೇ ಆಗಿದ್ದರೆ, ಅದನ್ನು ತೆಗೆಸಲಾಗುವುದು. ನಾನು ಈ ವಿಚಾರದ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ' ಎಂದು ಹೇಳಿದ್ದಾರೆ.

English summary
Ex-AG Ashok Haranalli has encroached footpath in RMV II stage for pets kennel. This illegal construction forcing public to use road instead of walking on footpath. But Ashok has defended the encroachment. BBMP still has no clue about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X