ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಗಿಲ್ಲದಿದ್ದರೆ ಇನ್ನೆಂದು? ನಾವಲ್ಲದಿದ್ದರೆ ಇನ್ನಾರು?

By Prasad
|
Google Oneindia Kannada News

Employees Against Corruption
ಬೆಂಗಳೂರು, ಆ. 18 : ಕಂಪ್ಯೂಟರ್ ಮುಂದೆ ಕುಳಿತು ಕೋಡಿಂಗ್ ಬರೆಯುವುದನ್ನು ಪಕ್ಕಕ್ಕಿಟ್ಟು, ಹೊರಗುತ್ತಿಗೆ ಸೇವೆಯನ್ನು ಬದಿಗಿಟ್ಟ ಎಲೆಕ್ಟ್ರಾನಿಕ್ ಸಿಟಿಯ ಐಟಿ ಹುಡುಗ, ಹುಡುಗಿಯರು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು ನಿಂತಿದ್ದಾರೆ.

ಈಗಿಲ್ಲದಿದ್ದರೆ ಇನ್ನೆಂದು? ನಾವಲ್ಲದಿದ್ದರೆ ಇನ್ನಾರು? ಎಂದು ತಮ್ಮನ್ನು ತಾವೇ ಕೇಳಿಕೊಂಡಿರುವ 10 ಸಾವಿರಕ್ಕೂ ಹೆಚ್ಚು ಟೆಕ್ಕಿಗಳು ನಮ್ಮ ವ್ಯವಸ್ಥೆಯಲ್ಲಿ ತಳ ಊರಿರುವ ಭ್ರಷ್ಟಾಚಾರದ ವಿರುದ್ಧ ಇಂಟರ್ನೆಟ್ ಸಮರ ಸಾರಿದ್ದಾರೆ.

Employees Against Corruption ಎಂಬ ವೆಬ್ ಸೈಟನ್ನು ಹುಟ್ಟುಹಾಕಿದ್ದು, ಭ್ರಷ್ಟಾಚಾರವನ್ನು ವಿರೋಧಿಸುವ ಎಲ್ಲರೂ ಆನ್ ಲೈನ್ ಅರ್ಜಿಗೆ ರುಜು ಹಾಕಬೇಕೆಂದು ಕೇಳಿಕೊಳ್ಳುತ್ತಿದ್ದಾರೆ.

ಸರಕಾರಿ ಕಚೇರಿಗಳಲ್ಲಿ ಮಾತ್ರವಲ್ಲ ಖಾಸಗಿ ವಲಯದಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದನ್ನು ಪೋಷಿಸುವುದು ಅಥವಾ ಬುಡಸಮೇತ ಕಿತ್ತು ಒಗೆಯುವುದು ನಮ್ಮ ಕೈಯಲ್ಲಿಯೇ ಇದೆ. ಖಾಸಗಿ ವಲಯದ ಭ್ರಷ್ಟಾಚಾರ ನಿರ್ಮೂಲನೆಗಾಗಿ ಬಲಿಷ್ಠ ಮಸೂದೆ ರೂಪಿಸಬೇಕು ಎಂದು ಸಂದೇಶ ರವಾನಿಸಿದ್ದಾರೆ.

ಈ ಸಂದೇಶ ಭಾರತದ ಕಾರ್ಪೊರೇಟ್ ವಲಯದ ಎಲ್ಲ ಸಿಇಓಗಳಿಗೆ ತಲುಪಬೇಕು. ಅಲ್ಲಿಂದ ಶಾಲಾ, ಕಾಲೇಜು ತಲುಪಿ ಭ್ರಷ್ಟಾಚಾರದ ಅಲೆ ಅಲ್ಲಿಂದಲೇ ಏಳಬೇಕು ಎಂಬ ಆಶಯ ಟೆಕ್ಕಿಗಳದ್ದು.

English summary
More than 10,000 software engineers of electronic city in Bangalore have launched online petition for corruption free India. They have asked leaders of corporate world to fight against corruption collectively and effectively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X