ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಪಲಾಯನ, ಅಣ್ಣಾ ಬೆಂಬಲಕ್ಕೆ ಶಿವಣ್ಣ

By Srinath
|
Google Oneindia Kannada News

bsy-dharna-drama-shivrajkumar-in-freedom-park
ಬೆಂಗಳೂರು, ಆಗಸ್ಟ್ 18: ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದ ಯಡಿಯೂರಪ್ಪನವರ ಧರಣಿ ಗುರುವಾರ ನಡೆಯಲೇ ಇಲ್ಲ. ಇದಕ್ಕೆ 'ಯಡಿಯೂರಪ್ಪ ಧರಣಿ ಮಾಡಲು ಬಂದರೆ ಟ್ರಾಫಿಕ್ ಜಾಮ್' ಆಗುತ್ತದೆ ಎಂದು ಸಬೂಬು ಹೇಳುವ ಮೂಲಕ ಅವರ ಅತ್ಯಾಪ್ತ ಸಚಿವ ರೇಣುಕಾಚಾರ್ಯ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಜಮಾಯಿಸಿದ್ದ ಅಭಿಮಾನಿಗಳಿಗೆ ಜಾಮ್ ತಿನ್ನಿಸಿದರು.

ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ಸೂಚಿಸಿ ತಾನೂ ಗುರುವಾರ ಬೆಳಗ್ಗೆ 10 ಗಂಟೆಯಿಂದ ಬೆಂಗಳೂರಿನ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು.

ಇನ್ನು, ಅಣ್ಣಾವ್ರ ಮಗ ಶಿವರಾಜ್ ಕುಮಾರ್ ಫ್ರೀಡಂ ಪಾರ್ಕಿಗೆ ಬಂದು ಅಣ್ಣಾ ಆಂದೋಲನಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದರು. ಗಮನಾರ್ಹವೆಂದರೆ ಖ್ಯಾತ ನಟ ಖುದ್ದು ಫ್ರೀಡಂ ಪಾರ್ಕಿಗೆ ಬಂದಾಗ ಯಾವುದೇ ಟ್ರಾಫಿಕ್ ಜಾಮ್ ಆದ ಘಟನೆ ನಡೆದಿಲ್ಲ.

'ಎಲ್ಲೆಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಂತಹ ಸಂದರ್ಭದಲ್ಲಿ ಅಣ್ಣಾ ಹಜಾರೆ ಅವರು ದೇವರ ರೂಪದಲ್ಲಿ ನಮ್ಮ ಹಿತ ಕಾಯಲು ಬಂದಿದ್ದಾರೆ' ಎಂದು ಶಿವಣ್ಣ ಪ್ರತಿಕ್ರಿಯಿಸಿದ್ದಾರೆ. ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಪ್ರಾಣ ನೀಡುವುದಕ್ಕೂ ತಾವು ಸಿದ್ಧ ಎಂದು ಶಿವಣ್ಣ ಇದೇ ಸಂದರ್ಭದಲ್ಲಿ ಘೋಷಿಸಿದರು.

ಅತ್ತ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಅಣ್ಣಾ ಇನ್ನೂ ಬಂಧಿಯಾಗಿಯೇ ಇದ್ದಾರೆ. ಇಂದೂ ಕೂಡ ಅವರು ತಿಹಾರ್ ಜೈಲಿನಲ್ಲೇ ಇದ್ದು, ಶುಕ್ರವಾರದ ವೇಳೆಗೆ ಸರಕಾರ ಬೇಷರತ್ ಅವಕಾಶ ನೀಡಿದರೆ ರಾಮಲೀಲಾ ಮೈದಾನದಲ್ಲಿ ಉಪವಾಸ ಕುಳಿತುಕೊಳ್ಳುವುದಾಗಿ ಅಣ್ಣಾ ಪಟ್ಟು ಹಿಡಿದಿದ್ದಾರೆ ಎಂದು ನ್ಯಾ. ಸಂತೋಷ್ ಹೆಗ್ಡೆ ಅವರು ಫ್ರೀಡಂ ಪಾರ್ಕಿನಲ್ಲಿ ತಿಳಿಸಿದ್ದಾರೆ.

English summary
Former chief minister B.S. Yeddyurappa failed to turn up at Mahatma Gandhi statue on Thursday (Aug 18) to stage dharna. But Actor Shivrajkumar visited Freedom Park to show solidarity to Anna Fast against Corruption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X