ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನದಲ್ಲಿ ಸರಸಕೆ ಯತ್ನ: ಭಾರತೀಯ ಸಂಜಾತನಿಗೆ ಸಜೆ

By Srinath
|
Google Oneindia Kannada News

sexual-abuse-on-plane-indo-american-jailed
ವಾಷಿಂಗ್ಟನ್, ಆಗಸ್ಟ್ 17‌: ಹಾಂಕಾಂಗ್ ನಿಂದ ನೆವಾರ್ಕ್ ಗೆ ತೆರಳುತ್ತಿದ್ದ ವಿಮಾನದಲ್ಲಿ ಪಕ್ಕದ ಸೀಟಿನಲ್ಲಿ ನಿದ್ರಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರ ಸ್ಕರ್ಟ್ ನೊಳಕ್ಕೆ ಕೈಬಿಟ್ಟು ಚಕ್ಕಂದಕ್ಕೆ ಯತ್ನಿಸಿದ ಆರೋಪದ ಮೇಲೆ ಭಾರತೀಯ ಮೂಲದ ಅಮೆರಿಕದ 65 ವರ್ಷದ ವ್ಯಕ್ತಿಗೆ ನೆವಾರ್ಕ್ ಫೆಡರಲ್ ಕೋರ್ಟ್ 1 ವರ್ಷ ಸಾದಾ ಸಜೆ ಮತ್ತು 45 ಸಾವಿರ ರುಪಾಯಿ ದಂಡವನ್ನು ವಿಧಿಸಿದೆ. ಜತೆಗೆ ತಪ್ಪಿತಸ್ಥನ ಮೇಲೆ 5 ವರ್ಷ ಕಾಲ ನಿಗಾ ಇಡಲು ಕೋರ್ಟ್ ಸೂಚಿಸಿದೆ.

ನ್ಯೂಜೆರ್ಸಿಯ ಬರ್ಕ್ಲೆ ಹೈಟ್ಸ್ ನ ರಮೇಶ್ ಅಡ್ವಾಣಿಯೇ ಈ ಕಥಾನಕದ ವಿಲನ್ ಎಂದು newjersey.com ವರದಿ ಮಾಡಿದೆ. 2010ರ ಮೇನಲ್ಲಿ ಕಾಂಟಿನೆಂಟಲ್ ಏರ್ ಲೈನ್ಸ್ ನಲ್ಲಿ ಈ ಪ್ರಕರಣ ನಡೆದಿತ್ತು. ಇಬ್ಬರು ಸಹ ಪ್ರಯಾಣಿಕರು ಇದನ್ನು ಗಮನಿಸಿ, ತಡೆಯಲು ಯತ್ನಿಸಿದ್ದರು. ಅವರು ಬಾಧಿತ ಮಹಿಳೆಯ ಸೀಟಿಗೆ ಹಿಂದಿನಿಂದ ಒದ್ದು ಮಹಿಳೆಯನ್ನು ಎಚ್ಚರಿಸಿದ್ದರು. ತಕ್ಷಣ ಎಚ್ಚೆತ್ತ ಮಹಿಳೆ ವಿಮಾನ ಪರಿಚಾರಿಕೆಯನ್ನು ಕರೆದು, ನಡೆದ ಘಟನೆಯನ್ನು ವಿವರಿಸಿದ್ದರು.

English summary
A 65-year-old Indian American has been sentenced to a year in federal prison after he was proved sliding his hand up sleeping airline passenger’s skirt on board a flight from Hong Kong to Newark during 2010 May.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X