ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಡಿತರ -ಗ್ಯಾಸ್ ಸಂಪರ್ಕ ದಾಖಲಾತಿ ಸಲ್ಲಿಕೆ ಆ. 20ರವರೆಗೆ

By Srinath
|
Google Oneindia Kannada News

lpg-ration-card-documents-date-aug-20
ಬೆಂಗಳೂರು, ಆಗಸ್ಟ್ 16: ನಕಲಿ ಪಡಿತರ ಚೀಟಿ ಮತ್ತು ನಕಲಿ ಅಡುಗೆ ಅನಿಲ ಸಂಪರ್ಕಗಳನ್ನು ಪತ್ತೆ ಮಾಡುವ ಸಲುವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೈಗೊಂಡಿರುವ ಎಲ್‌ಪಿಜಿ ಮತ್ತು ವಿದ್ಯುತ್ ಸಂಪರ್ಕ ಸಂಖ್ಯೆ ಪರಶೀಲನೆಗಾಗಿ ನಾಗರಿಕರು ಸರಿಯಾದ ದಾಖಲಾತಿಗಳನ್ನು ಸಲ್ಲಿಸಲು ನಿಗದಿ ಪಡಿಸಿದ್ದ ಕೊನೆಯ ದಿನಾಂಕವನ್ನು (ಆಗಸ್ಟ್ 15) ಈ ತಿಂಗಳ 20ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆನ್‌ಲೈನ್ ಮೂಲಕ ದಾಖಲಾತಿಗಳನ್ನು ಸಲ್ಲಿಸುವಾಗ ವೆಬ್‌ಸೈಟ್ ಮೇಲೆ ಅಧಿಕ ಒತ್ತಡ ಬಿದ್ದಿರುವುದು ಮತ್ತಿತರ ಕಾರಣಗಳಿಂದಾಗಿ ಅನೇಕ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಕಾಲಾವಧಿ ವಿಸ್ತರಣೆ ಮಾಡಲಾಗಿದೆ.

ಆಹಾರ ಇಲಾಖೆಯ ಐದು ವಲಯ ಕಚೇರಿಗಳ ವಿಳಾಸ-ದೂರವಾಣಿ ಸಂಖ್ಯೆ:
ಬೆಂಗಳೂರು ಕೇಂದ್ರ ವಲಯ: ಮೋಹನ್ ಮ್ಯಾನ್ಷನ್ ಕಟ್ಟಡ, ಕಸ್ತೂರಾಬಾ ರಸ್ತೆ. ದೂರವಾಣಿ: 2221 4431
ಪಶ್ಚಿಮ ವಲಯ: ಸಹಕಾರಿ ಭವನ, ಭಾಷ್ಯಂ ವೃತ್ತದ ಬಳಿ, ರಾಜಾಜಿನಗರ. ದೂ: 2315 3259
ಉತ್ತರ ವಲಯ: 11ನೇ ಸಿ ಕ್ರಾಸ್, ವೈಯಾಲಿಕಾವಲ್. ದೂ: 2344 5702
ದಕ್ಷಿಣ ವಲಯ: 3ನೇ ಮುಖ್ಯ ರಸ್ತೆ, ಚಾಮರಾಜಪೇಟೆ. ದೂ: 2661 3531
ಪೂರ್ವ ವಲಯ: ಪಾಲಿಕೆ ಕಟ್ಟಡ, ಸೆಂಟ್ ಜಾನ್ ರಸ್ತೆ. ದೂ: 2536 0750

ದಾಖಲಾತಿ ಸಲ್ಲಿಸದೇ ಇರುವುದು, ದಾಖಲಾತಿ ಸಲ್ಲಿಸಿದ್ದರೂ ತಪ್ಪಾಗಿ ನಮೂದಾಗಿರುವುದು ಮತ್ತಿತರ ಕಾರಣಗಳಿಂದ ಅಮಾನತಿನ ಸ್ಥಿತಿಯಲ್ಲಿರುವ ಪಡಿತರ ಚೀಟಿದಾರರು ಮತ್ತು ಎಲ್‌ಪಿಜಿ ಗ್ರಾಹಕರು ಖುದ್ದಾಗಿ ಅಥವಾ ಆನ್‌ಲೈನ್ (http://ahara.kar.nic.in/) ಮೂಲಕ ದಾಖಲಾತಿಗಳನ್ನು ಸಲ್ಲಿಸುವಂತೆ ಕೋರಲಾಗಿದೆ.

ನಗರದಲ್ಲಿರುವ ಆಹಾರ ಇಲಾಖೆಯ ಐದು ವಲಯ ಕಚೇರಿಗಳಲ್ಲಿ ಪಡಿತರ ಚೀಟಿ ಸಂಖ್ಯೆ ಅಥವಾ ಅನಿಲ ಸಂಪರ್ಕದ ಸಂಖ್ಯೆ ಜತೆ ವಿದ್ಯುತ್ ಮೀಟರ್‌ನ ಆರ್.ಆರ್. ಸಂಖ್ಯೆ ಇರುವ ವಿದ್ಯುತ್ ಬಿಲ್ ರಸೀದಿ ಸಲ್ಲಿಸಬೇಕು.

English summary
LPG consumers have time till August 20 now to submit documents to avoid disconnection. The food, civil supplies and consumer affairs department has extended its August 15 deadline because of heavy rush.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X