• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಮಿಳರು ಕರಿ, ಕೊಳಕರೆಂದು ಬಣ್ಣಿಸಿದ ಯುಎಸ್ ಅಧಿಕಾರಿ

By Mahesh
|

ಚೆನ್ನೈ, ಆ.13: ತಮಿಳರನ್ನು 'ಹೊಲಸು ಹಾಗೂ ಕಪ್ಪು' ಎಂದು ಟೀಕಿಸುವ ಮೂಲಕ ಅಮೆರಿಕದ ರಾಜತಂತ್ರಜ್ಞೆಯೊಬ್ಬರು ವಿವಾದಕ್ಕೆ ಗುರಿಯಾಗಿದ್ದಾರೆ.

ರೈಲು ಗುರಿಯನ್ನು ಇನ್ನೂ ತಲುಪಿರಲಿಲ್ಲ- ಆಗಲೇ ತನ್ನ ಚರ್ಮ ತಮಿಳರಂತೆ''ಹೊಲಸು ಹಾಗೂ ಕಪ್ಪಾಗಿತ್ತು' ಎಂದು ಅಮೆರಿಕ ಉಪ- ರಾಜತಂತ್ರಜ್ಞೆ ವೌರೀನ್ ಚಾವೊ ಎಂದು ತನ್ನ ಜೀವನದ ಕಥೆ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ವಾರೀನ್ ಚಾವೊ, 2 ದಶಕಗಳ ಹಿಂದಿನ ವಿದ್ಯಾರ್ಥಿ ಜೀವನದ ತನ್ನ ನೆನಪಿನ ಬುತ್ತಿಯನ್ನು ಬಿಚ್ಚುತ್ತ ಹೇಳಿದ್ದರು. ಇದು ತಮಿಳರನ್ನು ಕೆರಳಿಸಿದೆ. ಇಲ್ಲಿನ ಅಮೆರಿಕದ ರಾಜತಾಂತ್ರಿಕ ಕಚೇರಿಯು ಅವರ ಮಾತುಗಳು 'ಸರಿಯಲ್ಲ' ಹಾಗೂ ಅದಕ್ಕಾಗಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆಂದು ಸ್ಪಷ್ಟೀಕರಣ ನೀಡಬೇಕಾಗಿ ಬಂದಿದೆ.

ಈ ವಿವಾದಿತ ಹೇಳಿಕೆಯ ಹಿನ್ನೆಲೆಯಲ್ಲಿ ಉಂಟಾಗಿರುವ ಹಾನಿ ಯನ್ನು ಸರಿಪಡಿಸುವ ಕ್ರಮವಾಗಿ, ಇಲ್ಲಿನ ಅಮೆರಿಕನ್ ಕಾನ್ಸುಲೇಟ್, ಭಾಷಣದ ವೇಳೆ ಚಾವೊ ಅಸಮರ್ಪಕ ಟೀಕೆಯೊಂದನ್ನು ಮಾಡಿದ್ದಾರೆ.

ರಾಜತಂತ್ರಜ್ಞೆ, 23 ವರ್ಷಗಳ ಹಿಂದೆ ತಾನು ವಿದೇಶದಲ್ಲಿ ವಿದ್ಯಾ ರ್ಥಿನಿಯಾಗಿದ್ದಾಗಿನ ಧನಾತ್ಮಕ ನೆನಪುಗಳನ್ನು ವಿವರಿಸುತ್ತಿದ್ದರೆಂದು ಅದು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಅಮೆರಿಕ ಹಾಗೂ ಭಾರತದ ಸಂಬಂಧವು ಪ್ರಜಾಸತ್ತೆಯ ಮೌಲ್ಯಗಳು ಸ್ವಾತಂತ್ರ, ಧಾರ್ಮಿಕ ಹಾಗೂ ಸಾಂಸ್ಕೃತಕ ವೈವಿಧ್ಯದ ಬಗ್ಗೆ ಗೌರವಗಳನ್ನು ಆಧರಿಸಿದೆಯೆಂದು ಅಮೆರಿಕದ ರಾಜ್ಯಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಇತ್ತೀಚೆಗೆ ಉಲ್ಲೇಖಿಸಿದ್ದಾರೆಂದು ಅದು ಹೇಳಿದೆ. ಈ ಮೌಲ್ಯಗಳನ್ನು ಎತ್ತಿ ಹಿಡಿಯಲು ಚೆನ್ನೈಯ ಅಮೆರಿಕನ್ ಕಾನ್ಸುಲೇಟ್ ಹಾಗೂ ದೆಹಲಿಯ ಅಮೆರಿಕನ್ ದೂತಾವಾಸಗಳು ಬದ್ಧವಾಗಿವೆಯೆಂದು ಹೇಳಿಕೆ ತಿಳಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a worst sort of racial slur, the Vice-Consul with the US consulate in Chennai is facing the music in India after she remarked that she became 'dark and dirty like the Tamilians' after a 72-hour train journey. This statement has irked many in India, especially Tamil Nadu Chief Minister Jayalalithaa who has sought an apology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more