ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡ್ಡಿಯನ್ನು ಮಾಜಿ ಮುಮಂ ಎನ್ನಲು ರೆಡ್ಡಿಗೆ ಅಡ್ಡಿ

By Prasad
|
Google Oneindia Kannada News

BSY is still our leader : Janardhana Reddy
ಬಳ್ಳಾರಿ, ಆ. 12 : ಬಿ.ಎಸ್. ಯಡಿಯೂರಪ್ಪ ಅವರನ್ನು 'ಮಾಜಿ ಮುಖ್ಯಮಂತ್ರಿ" ಎಂದು ಕರೆಯಲು ನನ್ನ ಮನಃಸಾಕ್ಷಿ ಒಪ್ಪುತ್ತಿಲ್ಲ. ಅವರು ಬಿಜೆಪಿಯ ಪ್ರಭಾವಿ ನಾಯಕರು. ಕಾಂಗ್ರೆಸ್ ಮತ್ತು ಜೆಡಿಎಸ್ ಜಿಲ್ಲೆಯ ಅಭಿವೃದ್ಧಿಯನ್ನು ಸಹಿಸದೇ ಬಿ.ಎಸ್. ಯಡಿಯೂರಪ್ಪ ಮತ್ತು ತಮ್ಮ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿವೆ. ವಿಶ್ವವೇ ಜಿಲ್ಲೆಯನ್ನು ಗಮನಿಸುತ್ತಿದೆ ಎಂದು ಜನಾರ್ದನ ರೆಡ್ಡಿ ನುಡಿದರು.

ಇದು ನಮ್ಮ ಊರು, ನೀವು ನಮ್ಮ ಜನ. ನಮ್ಮ ಕೊನೆಯ ಉಸಿರು ಇರುವವರೆಗೂ ಇಲ್ಲೇ ಇರುತ್ತೇವೆ. ನಿಮ್ಮ ಸಮ್ಮುಖದಲ್ಲೇ ಬದುಕಿನ ಕೊನೆಯ ದಿನಗಳನ್ನು ಕಳೆಯಲು ಇಚ್ಛಿಸಿ ಶ್ರೀವರಮಹಾಲಕ್ಷ್ಮಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ. ನಿತಿನ್ ಗಡ್ಕರಿಯವರು ನಮ್ಮ ಪ್ರತಿಷ್ಠೆ, ಗೌರವಗಳನ್ನು ಉಳಿಸುವ ಉದ್ಧೇಕ್ಕಾಗಿ ಇಲ್ಲಿಗೆ ಆಗಮಿಸಿದ್ದಾರೆ ಎಂದು ಹೇಳಿದರು.

ಸಚಿವರಾದ ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಬಸವರಾಜ ಬೊಮ್ಮಾಯಿ, ಶಾಸಕ, ಕೆಎಂಎಫ್ ಅಧ್ಯಕ್ಷ ಜಿ. ಸೋಮಶೇಖರರೆಡ್ಡಿ, ಮಾಜಿ ಸಚಿವ ಜಿ. ಕರುಣಾಕರರೆಡ್ಡಿ, ಶಾಸಕರಾದ ಆನಂದಸಿಂಗ್, ಎಂ.ಎಸ್. ಸೋಮಲಿಂಗಪ್ಪ, ಆನಂದಸಿಂಗ್, ನೇಮಿಚಂದ್ರಾನಾಯಕ್, ಬಿ. ನಾಗೇಂದ್ರ, ಟಿ.ಎಚ್. ಸುರೇಶಬಾಬು, ಮೃತ್ಯುಂಜಯ ಜಿನಗಾ, ಮೇಯರ್ ಪಾರ್ವತಿ ಎಸ್. ಇಂದುಶೇಖರ್, ಸಂಸದರಾದ ಜೆ. ಶಾಂತ, ಫಕ್ಕೀರಪ್ಪ ಸೇರಿ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

English summary
BS Yeddyurappa, Nitin Gadkari, Ananth Kumar, G Janardhana Reddy, Sriramulu, Shobha Karandlaje, V Somanna shared same stage in Bellary on the occasion of mass marriage function in Bellary. Shobha karandlaje performed Varamahalakshmi pooja in the absence of Sushma Swaraj.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X