ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈದಿಗಳ ಅದಲುಬದಲು: ಕೃಷ್ಣಗೆ ಅರಳುಮರಳೋ!?

By Srinath
|
Google Oneindia Kannada News

confucius-krishna-mixes-prisoners-sarabjit-chishty
ನವದೆಹಲಿ, ಆ.12: ಯಾಕೋ, ಏನೋ ಮತ್ತೆ ನಮ್ಮ ಎಸ್‌ಎಂ ಕೃಷ್ಣ ಸಾಹೇಬರು ಯಡವಟ್ಟು ಕೆಲಸ ಮಾಡಿಕೊಂಡಿದ್ದಾರೆ. ದೇಶದ ಅಜ್ಮೀರ್ ಜೈಲಿನಲ್ಲಿರುವ ವೈರಾಣುತಜ್ಞ, ವಯೋವೃದ್ಧ ಡಾ. ಮೊಹಮ್ಮದ್ ಖಲೀಲ್ ಚಿಸ್ತಿ ಅವರ ಬಗ್ಗೆ ಗುರುವಾರ ವಿದೇಶಾಂಗ ಸಚಿವ ಕೃಷ್ಣ ಗೊಂದಲಕ್ಕೆ ಒಳಗಾದರು. 'ಮಾನವೀಯತೆ ಆಧಾರದ ಮೇಲೆ ಪಾಕಿಸ್ತಾನ ಅವರನ್ನು ಬಿಡುಗಡೆ ಮಾಡುವ ಬಗ್ಗೆ ಪರಿಗಣಿಸಬೇಕು' ಎಂದು ಹೇಳಿದ ಪ್ರಸಂಗ ನಡೆಯಿತು.

ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಸಿಪಿಎಂ ಸದಸ್ಯೆ ಬೃಂದಾ ಕಾರಟ್ ಅವರು ಪಾಕ್ ಜೈಲಿನಲ್ಲಿರುವ ಸರಬ್ಜಿತ್ ಸಿಂಗ್ ಬಗ್ಗೆ ಪ್ರಶ್ನೆ ಕೇಳಿದ್ದರು. ಇದಕ್ಕೆ ಕೃಷ್ಣ ನೀಡಿದ ಈ ಉತ್ತರದಿಂದ ಸದಸ್ಯರಲ್ಲಿ ಗೊಂದಲ ಉಂಟಾಯಿತು. ಆಗ ಖುದ್ದು ಪ್ರಧಾನಿ ಮನಮೋಹನ್ ಸಿಂಗ್ ಅವರೇ ಮಧ್ಯ ಪ್ರವೇಶಿಸಿ ಗೊಂದಲ ನಿವಾರಿಸಿದರು.

ಇತ್ತೀಚೆಗೆ ಕೃಷ್ಣ ಅವರು ಇಂತಹ 'ಮರೆಗುಳಿ' ಪ್ರಸಂಗಗಳಲ್ಲಿ ಹೆಚ್ಚಾಗಿ ಸಿಲುಕುತ್ತಿದ್ದಾರೆ. ಕಳೆದ ವರ್ಷ ವಿಶ್ವಸಂಸ್ಥೆ ಶೃಂಗಸಭೆಯಲ್ಲಿ ಯಾರದೋ ಭಾಷಣವನ್ನು ತಮ್ಮದೆಂದೇ ವಾಚನ ಮಾಡಿದ್ದರು. ಮೊನ್ನೆ ಪ್ರತಿಷ್ಠಿತ ಸುದ್ದಿಸಂಸ್ಥೆಯ ಮೇಲೂ ಗರಂ ಆಗಿ ಸದನದ ಕಲಾಪ ಕುರಿತಾದ ವರದಿಗಳ ಬಗ್ಗೆ ಸಚಿವರೊಬ್ಬರು ಕಾನೂನು ಕ್ರಮದ ಬೆದರಿಕೆ ಹಾಕಿದ ಮೊದಲ ಪ್ರಕರಣವನ್ನೂ ದಾಖಲಿಸಿದರು.

English summary
External Affairs Minister S M Krishna committed another faux pas on Aug 11- one of his many in recent months - when he confused a question in the Rajya Sabha about alleged Indian spy Sarabjit Singh, who is in a Pakistan jail on death row, with Dr Mohammad Khalil Chishty, a Pakistani virologist who is in an Ajmer jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X