ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ ಗಲಭೆ: 144 ವರ್ಷದ ಅಂಗಡಿಗೆ ಇಟ್ರಲ್ಲೋ ಬೆಂಕಿ

By Srinath
|
Google Oneindia Kannada News

London riots- 144 year old shop in put on fire,
ಲಂಡನ್, ಆ.11: ಅದು ಬರೋಬ್ಬರಿ 144 ವರ್ಷ ಹಳೆಯ ಪೀಠೋಪಕರಣ ಅಂಗಡಿ. ಆದರೆ ಕೆಲವೇ ಕ್ಷಣಗಳಲ್ಲಿ ಭಸ್ಮವಾಗಿದೆ. ಹಾಗೆಯೇ ಅಂಗಡಿಯ ಆರು ತಲೆಮಾರಿನ ಇತಿಹಾಸವೂ ಬೂದಿಯಾಗಿದೆ.

ಕೆಲವು ದಿನಗಳಿಂದ ಭುಗಿಲೆದ್ದಿರುವ ಹಿಂಸಾಚಾರದ ಪರಿಣಾಮ ಇಲ್ಲಿನ ಉಪನಗರ ಕ್ರಾಯ್ಡಾನ್‌ನಲ್ಲಿರುವ ಸುಮಾರು 144 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಪೀಠೋಪಕರಣ ಮಾರಾಟ ಮಳಿಗೆ 'ಹೌಸ್ ಆಫ್ ರೀವ್ಸ್" ಮಂಗಳವಾರ ರಾತ್ರಿ ಬೆಂಕಿಗಾಹುತಿಯಾಗಿದೆ.

ನಗರದಾದ್ಯಂತ ಹಿಂಸಾಚಾರ ಹರಡಿದ್ದು, ಈ ಅಂಗಡಿಯ ಮೇಲೂ ದಾಳಿ ನಡೆಸಿದ ಗಲಭೆಕೋರರು ಮಳಿಗೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

'ನಾನು ಈ ಅಂಗಡಿಯನ್ನು ನಡೆಸುತ್ತಿರುವ ಐದನೆ ತಲೆಮಾರಿನವ. ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಅವರು ಆರನೆ ತಲೆಮಾರಿನವರಾಗಿದ್ದಾರೆ" ಎಂದು ಬೆಂಕಿ ಜ್ವಾಲೆಗಳಲ್ಲಿ ಬೆಂದು ಹೋಗುತ್ತಿರುವ ಅಂಗಡಿಯ ಮುಂದೆ ಅದರ ಮಾಲಕ ಗ್ರಹಾಂ ರೀವ್ಸ್ ಗದ್ಗದಿತರಾಗಿ ನುಡಿದಿದ್ದಾರೆ. 52 ವರ್ಷದ ಗ್ರಹಾಂ 35 ವರ್ಷದಿಂದ ಈ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದಾರೆ.

'ಎಡ್ವಿನ್ ರೀವ್ಸ್ ಎಂಬವರು ಮೊದಲ ಬಾರಿಗೆ 1867ರಲ್ಲಿ ಆಗಿನ ಲಂಡನ್‌ನ ಪ್ರತ್ಯೇಕ ಪಟ್ಟಣವಾಗಿದ್ದ ಕ್ರಾಯ್ಡಾನ್‌ನಲ್ಲಿ ಅಂಗಡಿಯನ್ನು ಪ್ರಾರಂಭಿಸಿದ್ದರು. ವ್ಯಾಪಾರ ಅಭಿವೃದ್ಧಿ ಹೊಂದಿದ ಪರಿಣಾಮ ಅದು ಮುಂದಿನ ಪೀಳಿಗೆಗೂ ಹಸ್ತಾಂತರಗೊಳ್ಳುತ್ತಲೇ ಬಂದಿದೆ. ನಾನು ಈ ಅಂಗಡಿಯನ್ನೇ ಅವಲಂಬಿಸಿದ್ದು, ನನ್ನ ಜೀವನದ ಬಹುಭಾಗವನ್ನು ಇಲ್ಲೇ ಕಳೆದಿದ್ದೇನೆ. ಅಂಗಡಿಯನ್ನು ಧ್ವಂಸಗೈದಿರುವುದು ನನಗೆ ಆಘಾತ ಮೂಡಿಸಿದೆ" ಎಂದು ಗ್ರಹಾಂ ರೀವ್ಸ್ ವಿವರಿಸುತ್ತಾರೆ.

English summary
London riots: 144-year-old furniture store passed down through five generations of family lost to fire. Firefighters battled to save it, but in the cold light of day (Tuesday) it was clear that what little remains will have to be demolished.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X