ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ ವೇಳೆ ರಾಜ್ಯಕ್ಕೆ ಎಣ್ಣೆ ದೀಪವೇ ಗಟ್ಟಿ

By Mahesh
|
Google Oneindia Kannada News

KERC power tariff hike
ಬೆಂಗಳೂರು ಆ.11: ಬೆಳಕಿನ ಹಬ್ಬ ಸಂಭ್ರಮಕ್ಕೆ ತಣ್ಣನೆ ಶಾಕ್ ಕೊಡಲು ಸರ್ಕಾರ ಆಗಲೇ ಸಿದ್ಧತೆ ನಡೆಸಿದೆ. ರಾಜ್ಯದ ಎಲ್ಲ ಎಸ್ಕಾಂಗಳು ಪ್ರತಿ ಯೂನಿಟ್ ವಿದ್ಯುತ್‌ಗೆ 88 ಪೈಸೆ ಹೆಚ್ಚಿಸುವಂತೆ ಸಲ್ಲಿಸಿದ ಮನವಿಯನ್ನು ರಾಜ್ಯ ವಿದ್ಯುತ್ ನಿಯಂತ್ರಣಾ ಆಯೋಗ ಪುರಸ್ಕರಿಸಿದೆ.

ಬಹುತೇಕ ಅಕ್ಟೋಬರ್‌ 18ರ ವೇಳೆಗೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ(KERC) ತನ್ನ ಆದೇಶ ನೀಡಲಿದೆ. ಬೆಲೆ ಏರಿಕೆ ಕುರಿತ ಎಸ್ಕಾಂಗಳ ಮನವಿ ಯನ್ನು ಮನ್ನಿಸಿ ಅಯಾ ಕೇಂದ್ರಗಳಿಗೆ ಭೇಟಿ ಕೊಟ್ಟು ಸಾರ್ವಜನಿಕ ವಿಚಾರಣೆ ನಡೆಸಲಾಗುವು ಎಂದು ಕೆಇಆರ್‌ಸಿ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ ಹೇಳಿದ್ದಾರೆ.

ರೈತರಿಗೆ ಉಚಿತ ವಿದ್ಯುತ್ ನೀಡುತ್ತಿರುವುದರಿಂದ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲ್ಲಿದ್ದಲು ದರ ಹೆಚ್ಚಳವಾಗಿರುವುದರಿಂದ ವಿದ್ಯುತ್ ದರವನ್ನು ಹೆಚ್ಚಿಸುವುದು ಅನಿವಾರ್ಯ ಎನ್ನಲಾಗಿದೆ. ದರ ಏರಿಕೆ ನಿರ್ಧಾರ ಆಯೋಗದ ಕೈಯಲ್ಲಿದೆ. ಬೆಲೆ ಏರಿಕೆ ಬಗ್ಗೆ ಇಂಧನ ಸಚಿವ ಶೋಭಾ ಕರಂದ್ಲಾಜೆ ಅವರು ಜೂನ್ ತಿಂಗಳ ಕೊನೆಯಲ್ಲೇ ಸೂಚನೆ ನೀಡಿದ್ದರು.

English summary
The Karnataka Electricity Regulatory Commission (KERC) has given nod to electricity supply companies (Escoms) in the state hike the power Tariff. Public should bare this burden during Diwali time in Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X