ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲ್ಪಸಂಖ್ಯಾತ ಬೆನ್ನು ಮುರಿದ ಬಿಜೆಪಿ, ಲೆಹರ್ ಗೆ ಸ್ಥಾನ?

By Mahesh
|
Google Oneindia Kannada News

Mumtaz Ali Khan
ಬೆಂಗಳೂರು, ಆ.11: ಮುಖ್ಯಮಂತ್ರಿ ಡಿವಿ ಸದಾನಂದ ಗೌಡರ ಸಚಿವ ಸಂಪುಟ ವಿಸ್ತರಣೆಗೆ ಸಿದ್ಧತೆಗಳು ನಡೆದಿರುವ ಸಂದರ್ಭದಲ್ಲಿ ಅಲ್ಪಸಂಖ್ಯಾತರು ತಮಗಾಗಿರುವ ಅನ್ಯಾಯದ ಬಗ್ಗೆ ದನಿ ಎತ್ತಿದ್ದಾರೆ. ಮುಸ್ಲಿಂ ಸಮುದಾಯದ ಏಕೈಕ ಪ್ರತಿನಿಧಿಯಾಗಿದ್ದ ಮುಮ್ತಾಜ್ ಅಲಿಖಾನ್ ಅವರನ್ನು ಸಚಿವ ಸಂಪುಟದಿಂದ ಹೊರಗಿಟ್ಟಿರುವುದು ಅಲ್ಪಸಂಖ್ಯಾತರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಮಧ್ಯೆ ಸಚಿವ ಸಂಪುಟ ಸೇರುವ ಆಕಾಂಕ್ಷಿಗಳ ಪಟ್ಟಿಯಲ್ಲಿರದ ಜೈನ ಸಮುದಾಯದ ಲೆಹರ್ ಸಿಂಗ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ನಡೆದಿದೆ. ಯಡಿಯೂರಪ್ಪ ಹಾಗೂ ಅನಂತ್ ಬಣ ಕಿತ್ತಾಡುವಾಗ ತಟಸ್ಥವಾಗಿ ಉಳಿದಿದ್ದು ಮಮ್ತಾಜ್ ಅಲಿ ಖಾನ್ ಅವರಿಗೆ ಮುಳುವಾಗಿದೆ.

ಯಡಿಯೂರಪ್ಪ, ಅಶೋಕ್ ಅಥವಾ ಕತ್ತಿ ಅವರ ಬೆಂಬಲದಿಂದ ಮತ್ತೆ ಕ್ಯಾಬಿನೆಟ್ ಸೇರುವ ಕನಸು ಕಾಣುತ್ತಿದ್ದ ಖಾನ್ ಗೆ ನಿರಾಸೆಯಾಗಿದೆ. ಆರೆಸ್ಸೆಸ್ ಚಿಂತನೆಯನ್ನು ಮೆಚ್ಚುವ, ಸ್ವಜನರ ವಿರೋಧ ಕಟ್ಟಿಕೊಂಡು ಎಲ್ಲವನ್ನು ನಿಭಾಯಿಸಬಲ್ಲ ಹಿರಿಯ ಮುಖಂಡ ಖಾನ್ ಮತ್ತೊಮ್ಮೆ ಅವಕಾಶ ನೀಡಬೇಕು ಎಂದು ಎಲ್ಲರ ಅಭಿಪ್ರಾಯವಾಗಿದೆ.

ಯಡ್ಡಿ ದೂತ ಸಂಪುಟಕ್ಕೆ? : ಖಾನ್ ಅವರ ಸೇರ್ಪಡೆಗೆ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ ಮಾನಿಪ್ಪಾಡಿ ಹಾಗೂ ಕೆಎಂಡಿಸಿ ಅಧ್ಯಕ್ಷ ಅಬೂಬಕರ್ ಅವರು ಅಡ್ಡಗಾಲು ಹಾಕಿದ್ದಾರೆ ಎಂಬ ಸುದ್ದಿಯಿದೆ. ಲಾಬಿಕೋರ ಲೆಹರ್ ಸಿಂಗ್ ಅವರನ್ನು ಎಂಎಲ್ ಸಿ ಮಾಡಿದ್ದ ಯಡಿಯೂರಪ್ಪ ಅವರು ಈಗ ಕ್ಯಾಬಿನೆಟ್ ನಲ್ಲಿ ಸ್ಥಾನ ಕಲ್ಪಿಸುವಂತೆ ಸದಾನಂದ ಗೌಡರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ವಕ್ಫ್ ಖಾತೆ :1962ರಿಂದ ಬಹುತೇಕ ಮುಸ್ಲಿಮರೇ ವಕ್ಫ್ ಖಾತೆ ನಿರ್ವಹಿಸಿದ್ದಾರೆ. ಈಗ ಈ ಖಾತೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಎಂದು ಪುನಾರಚನೆ ಆಗಿದೆ. ಆದರೆ. ಈ ಬಾರಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಮುಸ್ಲಿಮರಿಗೆ ಅನ್ಯಾಯವಾಗಿದೆ.

ಕೋಲಾರದ ಪಕ್ಷೇತರ ಶಾಸಕ ವರ್ತೂರ್ ಪ್ರಕಾಶ್‌ಗೆ ಅಥವಾ ಸಮಾಜ ಕಲ್ಯಾಣ ಸಚಿವ ನಾರಾಯಣ ಸ್ವಾಮಿಯವರಿಗೆ ಹೆಚ್ಚುವರಿ ಜವಾಬ್ದಾರಿ ಕೊಡುವ ನಿರೀಕ್ಷೆಯಿದೆ.

English summary
According to sources soon after the secon expansion of cabinet CM Sadananda Gowda is likely to induct Yeddyurappa loyalist MLC Lehar Singh into cabinet. Minority community is demand that Karnataka Haj and Wakf Minister Mumtaz Khan should be retained.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X