ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮಲ್ಲಿ ರೀಫಿಲ್ ಮಾಡಿಸಿಕೊಳ್ಳದಿದ್ದರೆ LPG ಕ್ಯಾನ್ಸಲ್

By Mahesh
|
Google Oneindia Kannada News

ಮಂಗಳೂರು, ಆ.9 : ಸುಮಾರು ಆರು ತಿಂಗಳುಗಳಿಗೂ ಅಧಿಕ ಅವಧಿಯಲ್ಲಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ ರೀಫಿಲ್ ಮಾಡಿಸಿಕೊಳ್ಳದಿದ್ದರೆ ಅಂಥಾ ಎಲ್‌ಪಿಜಿ ಸಂಪರ್ಕಗಳನ್ನು ರದ್ದುಗೊಳಿಸಲಾಗುತ್ತದೆ ಎಂದು ಭಾರತೀಯ ತೈಲ ನಿಗಮ ನಿಯಮಿತ (ಐಒಸಿಎಲ್) ಹೇಳಿದೆ. ಈಗಾಗಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ರೀತಿ ಪ್ರಕರಣಗಳು ಕಂಡು ಬಂದಿದ್ದು ಸಾಕಷ್ಟು ಕನೆಕ್ಷನ್ ಕ್ಯಾನ್ಸಲ್ ಮಾಡಲಾಗಿದೆ.

ಮಂಗಳೂರು ಮೂಲದ ಅನೇಕ ಅನಿವಾಸಿ ಭಾರತೀಯರು ಈ ನಿಯಮಕ್ಕೆ ಬಲಿಯಾಗಿ ಗ್ಯಾಸ್ ಸಂಪರ್ಕ ಕಡಿತಕ್ಕೆ ಒಳಗಾಗಿದ್ದಾರೆ. ವಿದೇಶದಲ್ಲಿ ನೆಲೆಸಿದ ಮೇಲೆ ಮೂಲ ಊರಿನಲ್ಲಿರುವ ಗ್ಯಾಸ್ ಸಂಪರ್ಕದ ಬಗ್ಗೆ ಮರೆಯುತ್ತಾರೆ. ಸಿಲೆಂಡರ್ ರೀಫಿಲ್ ಗಾಗಿ ಆರು ತಿಂಗಳಾದರೂ ಬುಕ್ಕಿಂಗ್ ಮನವಿ ಬರುವುದಿಲ್ಲ. ಹಾಗಾಗಿ ಅವರೆಲ್ಲರ ಎಲ್ ಪಿಜಿ ಸಂರ್ಪಕವನ್ನು ರದ್ದುಗೊಳಿಸಲಾಗುತ್ತದೆ ಎಂದು ಐಒಸಿಎಲ್ ಹೇಳಿದೆ.

ಬಿಪಿಸಿಎಲ್ ಸಂಪರ್ಕ ಪಡೆದುಕೊಂಡವರು ಸ್ವಲ್ಪ ಸೇಫ್ ಆಗಿದ್ದಾರೆ. ಒಂದೆರಡು ರೀಫಿಲಿಂಗ್ ವಿಳಂಬ ಕೇಸ್ ಬಿಟ್ಟರೆ ಉಳಿದವರೆಲ್ಲ ನಿರಂತರ ಗ್ಯಾಸ್ ಸಿಲಿಂಡರ್ ಪಡೆಯುತ್ತಿದ್ದಾರೆ ಎಂದು ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡಿ(BPCL) ಹೇಳಿದೆ. ಎಚ್‌ಪಿಸಿಎಲ್ ವಿತರಕರೂ ಈ ಬಗ್ಗೆ ಇನ್ನೂ ಪರಿಶೀಲನೆ ನದೆಸುತ್ತಿದ್ದಾರೆ.

ಅಹಾರ ಇಲಾಖೆ ಏನು ಹೇಳುತ್ತೆ: ಒಬ್ಬ ಗ್ರಾಹಕನಿಂದ ಮೂರು ತಿಂಗಳವರೆಗೆ ಎಲ್‌ಪಿಜಿ ಸಿಲಿಂಡರ್ ಬೇಡಿಕೆ ಬರದಿದ್ದರೆ ಅಂತಹವರಿಗೆ ನೋಟಿಸು ನೀಡಲಾಗುತ್ತದೆ. ಆದರೆ ಈ ನೋಟಿಸಿಗೆ ಪ್ರತಿಕ್ರಿಯೆ ನೀಡದೆ ಹೋದಲ್ಲಿ ಎಲ್‌ಪಿಜಿ ಸಂಪರ್ಕ ಕಡಿದು ಹಾಕಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ-ನಿರ್ದೇಶಕ ಶರಣ ಬಸಪ್ಪ ಹೇಳಿದ್ದಾರೆ.

ಗ್ರಾಹಕರ ಅಳಲು : ಕಳೆದ ಆರು ತಿಂಗಳಿಂದ ಅಮೆರಿಕದಲ್ಲಿದ್ದೆ . ಇಲ್ಲಿಗೆ ಮರಳಿದಾಗ ತನ್ನ ಗ್ಯಾಸ್ ಸಂಪರ್ಕ ರದ್ದಾಗಿದೆ. ಈಗ ನಾನು ಮತ್ತೊಮ್ಮೆ ಗ್ಯಾಸ್ ಸಂಪರ್ಕಕ್ಕಾಗಿ ದಾಖಲೆ ಪತ್ರಗಳನ್ನು ನೀಡಿದ್ದೇನೆ ಎಂದು ಮಂಗಳೂರು ಮೂಲದ ಎನ್ನಾರೈ ಹೇಳುತ್ತಾರೆ.

ಇದಲ್ಲದೆ, ಗ್ಯಾಸ್ ಸಂಪರ್ಕ ಪಡೆದುಕೊಂಡ ಇಂಥವರು(ಎನ್ನಾರೈಗಳು, ಬೇರೆ ರಾಜ್ಯ, ನಗರಗಳಲ್ಲಿ ವಾಸಿಸುವವರು) ಸಿಲಿಂಡರುಗಳನ್ನು ತಮ್ಮ ಆಪ್ತರಿಗೆ ಹೆಚ್ಚು ಬೆಲೆಗೆ ಮಾರಾಟ ಮಾಡುವ ಪ್ರಕರಣಗಳು ಕಂಡು ಬಂದಿದೆ ಈ ಬಗ್ಗೆ ಇನ್ನೂ ತನಿಖೆ ಆಗಬೇಕಿದೆ.

English summary
According to Karnataka Food and Civil supply department rules, consumer should get his empty LPG cylinder refilled with 3 months. Else, notice will be served and finally Gas connection will be canceled. Many NRIs are unaware of this rules and end up with problem says Sharana Basappa Food Inspector, Mangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X