ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ಸ್ಥಾನಮಾನಕ್ಕಾಗಿ ಬಿಜೆಪಿಯಲ್ಲಿ ಜಂಗಿ ಕುಸ್ತಿ

By Prasad
|
Google Oneindia Kannada News

Ananth Kumar and R Ashok
ಬೆಂಗಳೂರು, ಆ. 6 : ಡಿವಿ ಸದಾನಂದ ಗೌಡರ ಹೊಸ ಮಂತ್ರಿಮಂಡಲದಲ್ಲಿ ಯಾರ್ಯಾರಿಗೆ ಆಯಕಟ್ಟಿನ ಸ್ಥಾನ ದೊರೆಯಲಿದೆ? ಬಿಜೆಪಿಯ ಯಾವ ಬಣಕ್ಕೆ ಎಷ್ಟೆಷ್ಟು ಶೇರ್ ಸಿಗಲಿದೆ? ಯಾರ್ಯಾರು ಮೂಲೆಗುಂಪಾಗಲಿದ್ದಾರೆ? ಯಾರ್ಯಾರು ಪ್ರವರ್ಧಮಾನಕ್ಕೆ ಬರಲಿದ್ದಾರೆ?

ಇವು ರಾಜ್ಯದ ಜನತೆಯನ್ನು ಮತ್ತು ರಾಜಕಾರಣಿಗಳನ್ನು ಕಾಡುತ್ತಿರುವ ಉತ್ತರ ಸಿಗದ ಪ್ರಶ್ನೆಗಳು. ಇನ್ನೆರಡು ದಿನಗಳಲ್ಲಿ ಸಂಪುಟ ಪುನಾರಚನೆ ಆಗುವ ಸಂಭವನೀಯತೆ ಇರುವುದರಿಂದ ಬಿಜೆಪಿ ಪಾಳಯದಲ್ಲಿ ಈ ಕುರಿತು ಸಾಕಷ್ಟು ಚರ್ಚೆ, ಲೆಕ್ಕಾಚಾರ, ಕಸರತ್ತುಗಳು ನಡೆಯುತ್ತಿವೆ.

ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಈಶ್ವರಪ್ಪ, ಅನಂತ್ ಕುಮಾರ್, ಆರ್ ಅಶೋಕ್ ಮುಂತಾದವರು ಗಹನ ಮಾತುಕತೆಯಲ್ಲಿ ನಿರತರಾಗಿದ್ದಾರೆ. ಜಗದೀಶ್ ಶೆಟ್ಟರ್ ಬಣ ಶೇ.50ರಷ್ಟು ಸ್ಥಾನಗಳು ತಮಗೆ ಸಿಗಬೇಕೆಂದು ಪಟ್ಟು ಹಿಡಿದಿದೆ. ಈ ಸಮಸ್ಯೆಯನ್ನು ನೀವೇ ಬಗೆಹರಿಸಿಕೊಳ್ಳಿ ಎಂದು ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದೆ.

ಆಡಳಿತಾತ್ಮಕ ಕೆಲಸದಲ್ಲಿ ನಿರತರಾಗಿರುವ ಸದಾನಂದ ಗೌಡರಿಗೆ ಸಂಪುಟ ಪುನಾರಚನೆಯ ಕಸರತ್ತು ಹೇಗೆ ಮಾಡುತ್ತಾರೆ ಮತ್ತು ಹೆವಿ ವೇಟ್ ಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಬಗ್ಗೆ ಎಲ್ಲರ ಕಣ್ಣು ನೆಟ್ಟಿದೆ. ಈಗಾಗಲೆ ಅಶೋಕ್ ಹೊಂದಿರುವ ಗೃಹಖಾತೆ ಮತ್ತು ಯಡಿಯೂರಪ್ಪ ಹೊಂದಿದ್ದ ವಿತ್ತಖಾತೆಯ ಮೇಲೆ ಭಾರೀ ಪೈಪೋಟಿ ಆರಂಭವಾಗಿದೆ.

English summary
The deck is getting ready for reshuffle of BJP cabinet. It is said that Sadananda Gowda is forming his own cabinet in a day or two. Jagadish Shettar is asking for equal share and BSY also assured few seats for his followers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X